‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನಿಗೆ ಗೌರವ ಡಾಕ್ಟರೇಟ್

Public TV
1 Min Read
vivek agnihotri

‘ದಿ ಕಾಶ್ಮೀರ್ ಫೈಲ್ಸ್’ ಮತ್ತು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಮೂಲಕ ಸಂಚಲನ ಮೂಡಿಸಿದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ (Vivek Ranjan Agnihotri) ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ವಿವೇಕ್ ಪಡೆದಿದ್ದಾರೆ. ಇದೀಗ ಮಹಾರಾಷ್ಟ್ರದ ಪುಣೆಯಲ್ಲಿರುವ ಅಜಿಂಕ್ಯಾ ಡಿವೈ ಪಾಟಿಲ್ ಯೂನಿವರ್ಸಿಟಿಯವರು ವಿವೇಕ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದಾರೆ.

ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿ ಮಾಡಿದ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ಸೂಪರ್ ಹಿಟ್ ಆಯಿತು. ಕೊವಿಡ್ ಲಸಿಕೆ ಕಂಡು ಹಿಡಿದ ಘಟನೆ ಆಧರಿಸಿ ಸಿದ್ಧಗೊಂಡ ‘ದಿ ವ್ಯಾಕ್ಸಿನ್ ವಾರ್’ ಚಿತ್ರ ವೀಕ್ಷಕರಿಂದ ಮೆಚ್ಚುಗೆ ಪಡೆಯಿತು. ಇದೀಗ ವಿವೇಕ್ ಅಗ್ನಿಹೋತ್ರಿ ಅವರಿಗೆ ಮಹಾರಾಷ್ಟ್ರದ ರಾಜ್ಯಪಾಲರು ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದ್ದಾರೆ. ಇದನ್ನೂ ಓದಿ:ಸಿನಿಮಾ ಆಫರ್‌ಗಾಗಿ ಹೀಗೆಲ್ಲಾ ಮಾಡಿದ್ರಾ ಪೂನಂ ಪಾಂಡೆ?

ಗೌರವ ಡಾಕ್ಟರೇಟ್ ಸಿಕ್ಕಿರೋ ಸಂತಸದಲ್ಲಿ ವಿವೇಕ್ ಅಗ್ನಿಹೋತ್ರಿ ಮಾತನಾಡಿ, ನಾನು ಕಲಿತ 5 ಕಲಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅಶಿಸುತ್ತೇನೆ. ನನ್ನ ಜೀವನದಲ್ಲಿ ಏನು ಅಭ್ಯಾಸ ಮಾಡಿರುವೆನೋ, ಅದನ್ನೇ ಮಾತನಾಡುತ್ತೇನೆ. ನನ್ನ ಜೀವನದ ತಿಳುವಳಿಕೆಯನ್ನು ರೂಪಿಸಿದ್ದು 5 ಸಂಸ್ಥೆಗಳು. ನಾನು ಕಲಿತ ಶಾಲೆ, ನನ್ನ ಕಾಲೇಜು, ನಾನು ಕಲಿತ ಯೂನಿವರ್ಸಿಟಿಗಳು ನನ್ನ ಮೊದಲ ಗುರು. ನನ್ನ 2ನೇ ಗುರು ಸಮಯ, 3ನೇ ಗುರು ಸಿನಿಮಾ, 4ನೇ ಗುರು ನನ್ನ ಶಿಕ್ಷಕ, ಐದನೇಯದು ‘ಜೀವನದಲ್ಲಿ ಯಾವುದೇ ಕಟ್ಟುನಿಟ್ಟಾದ ನಿಯಮಗಳಿಲ್ಲ’ ಎಂದು ಮಾತನಾಡಿದ್ದಾರೆ. ವಿವೇಕ್ ಅಗ್ನಿಹೋತ್ರಿಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

Share This Article