ಆಂಗ್ಲರ ವಿರುದ್ಧ ಯಶಸ್ವಿ ಜೈಸ್ವಾಲ್‌ ಬೊಂಬಾಟ್‌ ಶತಕ – ಬೃಹತ್‌ ಮೊತ್ತದತ್ತ ಭಾರತ

Public TV
2 Min Read
Yashasvi Jaiswal 3

ವಿಶಾಖಪಟ್ಟಣಂ: ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾದ (Team India) ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಆಕರ್ಷಕ ಶತಕ ಬಾರಿಸಿ ಮಿಂಚಿದ್ದಾರೆ. ಜೈಸ್ವಾಲ್ ಬಾರಿಸಿದ 2ನೇ ಟೆಸ್ಟ್ ಶತಕದ ನೆರವಿನಿಂದ ಟೀಂ ಇಂಡಿಯಾ, ಮೊದಲ ದಿನದಾಟದಲ್ಲೇ 300 ರನ್‌ಗಳ ಗಡಿ ದಾಟಿದೆ.

Ind vs Eng

ವಿಶಾಖಪಟ್ಟಣಂನ ಡಾ.ವೈ.ಎಸ್‌ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್‌ ಆಯ್ದುಕೊಂಡು ಬೌಲಿಂಗ್‌ ಮಾಡುವ ಅವಕಾಶವನ್ನು ಇಂಗ್ಲೆಂಡ್‌ಗೆ ಬಿಟ್ಟುಕೊಟ್ಟಿತು. ಆರಂಭಿಕರಾದ ರೋಹಿತ್ ಶರ್ಮಾ (Rohit Sharma) ಹಾಗೂ ಯಶಸ್ವಿ ಜೈಸ್ವಾಲ್ 17.3 ಓವರ್‌ಗಳಲ್ಲಿ 40 ರನ್‌ಗಳ ಜೊತೆಯಾಟವಾಡಿದರು. ಈ ವೇಳೆ ಹಿಟ್‌ಮ್ಯಾನ್‌ 41 ಎಸೆತಗಳನ್ನು ಎದುರಿಸಿ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಶುಭಮನ್‌ ಗಿಲ್‌ 34 ರನ್‌, ಶ್ರೇಯಸ್‌ ಅಯ್ಯರ್‌ 27 ರನ್‌ ಹಾಗೂ ರಜತ್‌ ಪಾಟಿದಾರ್‌ 32 ರನ್‌ ಬಾರಿಸಿ ಪೆಲಿಯನ್‌ನತ್ತ ಮುಖ ಮಾಡಿದರು. ಇದನ್ನೂ ಓದಿ: RCB ಸ್ಟಾರ್‌ ಎಲ್ಲಿಸ್‌ ಪೆರ್ರಿ, ಮಿಚೆಲ್‌ ಮಾರ್ಷ್‌ ಸೇರಿದಂತೆ ಹಲವರಿಗೆ Cricketer Of The year-2023 ಪ್ರಶಸ್ತಿ

Shreyas Iyer

ಯಶಸ್ವಿ ಬೊಂಬಾಟ್‌ ಶತಕ:
ಟೀಂ ಇಂಡಿಯಾದ ಅಗ್ರ ಕ್ರಮಾಂದ ಬ್ಯಾಟರ್‌ಗಳ ವೈಫಲ್ಯದ ನಡುವೆಯೂ ಆಕರ್ಷಕ ಬ್ಯಾಟಿಂಗ್‌ ನಡೆಸಿದ 2ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನ ಮೊದಲ ದಿನವೇ ಭರ್ಜರಿ ಶತಕ ಸಿಡಿಸಿದರು. ಆ ನಂತರವೂ ಜೈಸ್ವಾಲ್‌ ಬ್ಯಾಟಿಂಗ್‌ ಅಬ್ಬರ ಮುಂದುವರಿಯಿತು. ಇದನ್ನೂ ಓದಿ: ICUನಲ್ಲಿ ಮಯಾಂಕ್ ಅಗರ್ವಾಲ್ – ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ILS ಆಸ್ಪತ್ರೆ

Yashasvi Jaiswal 2

151 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್‌, 224 ಎಸೆತಗಳಲ್ಲಿ 150 ರನ್‌ ಬಾರಿಸಿ ಕ್ರೀಸ್‌ ಮುಂದುವರಿಸಿದ್ದಾರೆ. ಇದರಲ್ಲಿ 16 ಬೌಂಡರಿ ಹಾಗೂ 4 ಸಿಕ್ಸರ್‌ಗಳೂ ಸೇರಿವೆ. ಅಲ್ಲದೇ ಇದು ಯಶಸ್ವಿ ಜೈಸ್ವಾಲ್‌ ಅವರ 2ನೇ ಟೆಸ್ಟ್‌ ಶತಕವಾಗಿದೆ. ‌ವೆಸ್ಟ್‌ ಇಂಡೀಸ್‌ ವಿರುದ್ಧ ತಮ್ಮ ಮೊದಲ ಟೆಸ್ಟ್‌ ಶತಕ ಸಿಡಿಸಿದ್ದರು. ಸದ್ಯ 238 ಎಸೆತಗಳಲ್ಲಿ 163 ರನ್‌ ಗಳಿಸಿ ಕ್ರೀಸ್‌ ಮುಂದುವರಿಸಿರುವ ಜೈಸ್ವಾಲ್‌ ದ್ವಿಶತಕ ಸಿಡಿಸುವ ಉತ್ಸಾಹದಲ್ಲಿದ್ದು, ಹಲವು ದಾಖಲೆಗಳನ್ನ ಮುರಿಯಲು ಎದುರು ನೋಡುತ್ತಿದ್ದಾರೆ. ಇದನ್ನೂ ಓದಿ: ಕೊಹ್ಲಿ ಜೊತೆಗಿನ ನೆನಪು ಹಂಚಿಕೊಂಡ ಸ್ಟಾರ್‌ ವೇಗಿ – ಮಿಚೆಲ್ ಸ್ಟಾರ್ಕ್ ವಿಶ್ವದ ಅತ್ಯುತ್ತಮ ಆಟಗಾರನಂತೆ

Share This Article