ನಾನು ಅಖಂಡ ಭಾರತದವನು, ಸುರೇಶ್ ಜನರ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ: ಡಿಕೆಶಿ

Public TV
1 Min Read
DK SURESH DK SHIVAKUMAR

ಬೆಂಗಳೂರು: ನಾನು ಅಖಂಡ ಭಾರತದವನು ಸಂಸದ ಡಿ.ಕೆ ಸುರೇಶ್ (DK Suresh) ಅವರು ಜನರ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shiva Kumar) ಹೇಳಿದ್ದಾರೆ.

ಸಂಸದ ಡಿ.ಕೆ.ಸುರೇಶ್ ಅವರ ದೇಶ ಇಬ್ಭಾಗದ ಮಾತಿನ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ, ಜನ ಆ ರೀತಿ ಯೋಚನೆ ಮಾಡುತ್ತಿದ್ದಾರೆ. ನಮ್ಮನ್ನು ಕಡೆಗಣನೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ ಎಂದು ಸಹೋದರನನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಕರ್ನಾಟಕಕ್ಕೆ ಆದ ಅನ್ಯಾಯ ಪ್ರಶ್ನಿಸುವ ಹಕ್ಕು ನನಗಿದೆ: ಡಿಕೆ ಸುರೇಶ್

ನಾನು‌ ಭಾರತದವನು, ಒಂದೇ ಭಾರತ. ನಮಗೆ ಅನ್ಯಾಯ ಆಗಿದೆ ಎಂದು ಜನರ ಭಾವನೆಯನ್ನು ಡಿಕೆ ಸುರೇಶ್ ತಿಳಿಸಿದ್ದಾರೆ‌.‌ ಭಾರತ ಒಗ್ಗಟ್ಟು ಇರಬೇಕು, ನಾವೆಲ್ಲ ಭೂತಾಯಿ‌ ಮಕ್ಕಳು. ಕಾಶ್ಮೀರದಿಂದ ಕನ್ಯಾಕುಮಾರಿಯವರಗೆ ಒಂದೇ. ಹಿಂದಿ ಬೆಲ್ಟ್ ಸೇರಿದಂತೆ ಯಾರಿಗೂ ಅನ್ಯಾಯ ಆಗಬಾರದು ಎಂದರು.

ಫೈನಾನ್ಸ್ ಮಿನಿಸ್ಟರ್ ನ ಭೇಟಿ ಮಾಡಿ ಬೇಡಿಕೆ ಇಟ್ಟಿದ್ದೆವು. ರಾಜ್ಯಕ್ಕೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡಿ ಅಂತ ಮನವಿ ಮಾಡಿದ್ದೆವು. ಬೆಂಗಳೂರು ನಗರಕ್ಕೆ ಫೈನಾನ್ಸ್ ಕಮಿಷನ್ ನಲ್ಲಿ ಹಣ ಬಂದಿಲ್ಲ. ಬೆಂಗಳೂರಿಗೂ ಹಣವಿಲ್ಲ ದಕ್ಷಿಣ ಭಾರತಕ್ಕೂ ಹಣವಿಲ್ಲ. ಇಷ್ಟು ಕಳಪೆ ಬಜೆಟ್ ಯಾವತ್ತೂ ನೋಡಿಲ್ಲ.ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ. ಬಹಳ ನಿರಾಸೆ ಆಗಿದೆ ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

Share This Article