ಕಾಲೇಜಿಗೆ ಹೋಗುವಂತೆ ಬೈದಿದ್ದಕ್ಕೆ ಬಾವಿಗೆ ಜಿಗಿದ ತಂಗಿ- ರಕ್ಷಿಸಲು ಹೋದ ಅಣ್ಣನೂ ಸಾವು

Public TV
1 Min Read
KALABURRAGI BROTHER SISTER

ಕಲಬುರಗಿ: ಕ್ಲುಲ್ಲಕ ಕಾರಣಕ್ಕೆ ಬೇಸತ್ತು ಬಾವಿಗೆ ಜಿಗಿದ ತಂಗಿಯನ್ನು ರಕ್ಷಿಸಲು ಹೋಗಿ ಅಣ್ಣ- ತಂಗಿ ಇಬ್ಬರೂ ಮೃತಪಟ್ಟ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಮೃತರನ್ನು ಸಂದೀಪ್‌ (21) ಮತ್ತು ನಂದಿನಿ (18) ಎಂದು ಗುರುತಿಸಲಾಗಿದೆ. ಈ ಘಟನೆ ಸೋಮವಾರ ಸಂಜೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ನಡೆದಿದೆ.

KALABURAGI WELL

ಬಾವಿಗೆ ಹಾರಿದ ತಂಗಿ: ನಂದಿನಿಗೆ ಕಾಲೇಜಿಗೆ ಹೋಗು ಎಂದು ಅಣ್ಣ ಸಂದೀಪ್‌ ಬೈದು ಬುದ್ಧಿವಾದ ಹೇಳಿದ್ದಾನೆ. ಇಷ್ಟಕ್ಕೆ ಬೇಸರಗೊಂಡ ನಂದಿನಿ ಹತ್ತಿರದ ಬಾವಿಗೆ ಹೋಗಿ ಜಿಗಿದಿದ್ದಾಳೆ. ಇತ್ತ ತಂಗಿ ಬಾವಿಗೆ ಹಾರಿದ ವಿಚಾರ ತಿಳಿಯುತ್ತಿದ್ದಂತೆಯೇ ಅಣ್ಣ ಸಂದೀಪ್‌ ಆಕೆಯನ್ನು ರಕ್ಷಣೆ ಮಾಡಲೆಂದು ತಾನೂ ಬಾವಿಗೆ ಹಾರಿದ್ದಾನೆ. ಪರಿಣಾಮ ಈಜು ಬಾರದೆ ತಂಗಿಯ ಜೊತೆ ಆತನೂ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಮೇಯರ್‌ ಚುನಾವಣೆಯಲ್ಲಿ ಸೋಲು- ಗಳಗಳನೇ ಕಣ್ಣೀರಿಟ್ಟ ಎಎಪಿ ಅಭ್ಯರ್ಥಿ

ಗೊತ್ತಾಗಿದ್ದು ಹೇಗೆ..?: ಬಾವಿಯ ಪಕ್ಕದಲ್ಲಿ ಮೃತ ನಂದಿನಿ ತಲೆಗೆ ಮುಡಿದುಕೊಂಡ ಹೂವು ಬಿದ್ದಿರುವುದನ್ನು ಗಮನಿಸಿದ ಪಾಲಕರಿಗೆ ಅನುಮಾನ ಬಂದು ಹುಡುಕಾಟ ನಡೆಸಿದಾಗ ಅಣ್ಣ-ತಂಗಿಯ ಶವವಾಗಿ ಪತ್ತೆಯಾಗಿದ್ದಾರೆ.

ಈ ಬಗ್ಗೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಡಿವೈಎಸ್.ಪಿ ಎಸ್.ಎಸ್ ಹಿರೇಮಠ ತಿಳಿಸಿದ್ದಾರೆ.

Share This Article