ಸಂಸತ್ ಸದಸ್ಯರ ಅಮಾನತು ಹಿಂಪಡೆಯಲು ಕ್ರಮ: ಪ್ರಹ್ಲಾದ್‌ ಜೋಶಿ

Public TV
1 Min Read
Pralhad Joshi

– ಸಭಾಧ್ಯಕ್ಷರು, ಸಭಾಪತಿಗೆ ಸರ್ಕಾರದ ಪರ ಮನವಿ ಸಲ್ಲಿಕೆ

ನವದೆಹಲಿ: ಅಮಾನತುಗೊಂಡ ಸಂಸತ್ ಸದಸ್ಯರ ಅಮಾನತು ಹಿಂಪಡೆಯಲು ಸಭಾಧ್ಯಕ್ಷರು ಮತ್ತು ಸಭಾಪತಿಗಳಿಗೆ ಸರ್ಕಾರದ ಪರವಾಗಿ ಮನವಿ ಮಾಡಿದ್ದೇವೆ ಎಂದು ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದರು.

ದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಬಂಧಪಟ್ಟ ವಿಶೇಷಾಧಿಕಾರ ಸಮಿತಿಯೊಂದಿಗೆ ಚರ್ಚಿಸಿ ಅಮಾನತುಗೊಂಡಿರುವ ಎಲ್ಲಾ ಸದಸ್ಯರ ಅಮಾನತು ಹಿಂಪಡೆಯುವಂತೆ ಸರ್ಕಾರದ ಪರವಾಗಿ ಕೋರಲಾಗಿದೆ ಎಂದು ಹೇಳಿದರು.

PRALHAD JOSHI

I.N.D.I.A ಮೈತ್ರಿ ಬ್ರೈನ್ ಡೆಡ್: INDIA ಮೈತ್ರಿ ಬ್ರೈನ್ ಡೆಡ್ ಸ್ಥಿತಿಯಲ್ಲಿದೆ. ಕಾಂಗ್ರೆಸ್ ನ ಜಗಳದಿಂದಲೇ ಅದರ ಮಿತ್ರ ಪಕ್ಷಗಳೊಂದಿಗಿನ ಮೈತ್ರಿ ಅಂತ್ಯ ಕಂಡಿದೆ ಎಂದು ಸಚಿವ ಜೋಶಿ ಲೇವಡಿ ಮಾಡಿದರು.‌ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ನಡುವಿನ ಮೈತ್ರಿ ಹೋರಾಟ ಅಂತ್ಯ ಕಂಡಿದೆ. ಈಗಾಗಲೇ ಸಂಪೂರ್ಣ ಮುರಿದು ಬಿದ್ದಿದೆ ಎಂದು ಹೇಳಿದರು. ಇದನ್ನೂ ಓದಿ: ಆಂಜನೇಯನ ತಂಟೆಗೆ ಬರ್ಬೇಡಿ, ಹುಷಾರ್- ಸಿಎಂಗೆ ಆರ್ ಅಶೋಕ್ ಎಚ್ಚರಿಕೆ

ಇದು ಅಸ್ವಾಭಾವಿಕ ಮೈತ್ರಿ. ಫೋಟೋಶೂಟ್‌ಗೆ ಸೀಮಿತ ಎಂದು ಹಿಂದೆಯೇ ಹೇಳಿದ್ದೇವೆ. ಇದೀಗ ಅದರ ಬ್ರೈನ್ ಡೆಡ್ ಆಗಿದೆ. INDIA ಮೈತ್ರಿ ಬೇಗ ಸಾಯುವುದು ಖಚಿತ ಎಂದು ಜೋಶಿ ಹೇಳಿದರು. ಮೈತ್ರಿ ಪಕ್ಷಗಳೊಂದಿಗೆ ಹೊಡೆದಾಡಿಕೊಂಡು ಒಡೆಯುವುದು ಕಾಂಗ್ರೆಸ್‌ನ ಸ್ವಭಾವ. ಹಾಗಾಗಿಯೇ ಅದು ಕೊನೆಗಂಡಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ನಲ್ಲೇ ಇನ್ನೂ ಕಾದಾಟ: INDIA ಮೈತ್ರಿ ಮುರಿದು ಬಿದ್ದು ಒಂದೊಂದೇ ಪಕ್ಷಗಳು ದೂರಾಗಿದ್ದರಿಂದ ಈಗ ಕಾಂಗ್ರೆಸ್ ನವರು ತಮ್ಮೊಳಗೆ ತಾವೇ ಕಾದಾಡುವಂತೆ ಆಗಿದೆ ಎಂದು ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.

Share This Article