Gyanvapi Mosque Case: ವಜುಖಾನಾ ಡಿ-ಸೀಲಿಂಗ್‌ಗೆ ಹಿಂದೂ ಪರ ಅರ್ಜಿದಾರರಿಂದ ಸುಪ್ರೀಂಕೋರ್ಟಿಗೆ ಅರ್ಜಿ

Public TV
1 Min Read
Supreme Court

ನವದೆಹಲಿ: ಜ್ಞಾನವ್ಯಾಪಿ ಮಸೀದಿ (Gyanvapi Mosque) ಆವರಣದಲ್ಲಿ ಸೀಲ್ ಆಗಿರುವ ವಜುಖಾನ (Wazu Khana) ಪ್ರದೇಶವನ್ನು ಡಿ-ಸೀಲ್ ಮಾಡುವಂತೆ ಹಿಂದೂ ಪರ ವಕೀಲರು ಸುಪ್ರೀಂಕೋರ್ಟಿಗೆ (Supreme Court) ಅರ್ಜಿ ಸಲ್ಲಿಸಿದ್ದಾರೆ. ಮಸೀದಿ ಸ್ಥಳದಲ್ಲಿ 17ನೇ ಶತಮಾನಕ್ಕೂ ಮುನ್ನ ಮಂದಿರ ಇತ್ತು ಎಂದು ಪುರಾತತ್ವ ಇಲಾಖೆ ವರದಿ ನೀಡಿದ ಬೆನ್ನಲ್ಲೆ ಈ ಅರ್ಜಿಯನ್ನು ಸಲ್ಲಿಸಲಾಗಿದೆ.

Gyanvapi Mosque

ಪುರಾತತ್ವ ಇಲಾಖೆಯ ಸರ್ವೆ  (Archaeological Survey of India) ಪ್ರಕಾರ, 17ನೇ ಶತಮಾನದಲ್ಲಿ ಜ್ಞಾನವ್ಯಾಪಿ ಮಸೀದಿಯೂ ಮಂದಿರವಾಗಿತ್ತು, ಈಗಿನ ವಜುಖಾನದಲ್ಲಿ ಇರುವುದು ಶಿವಲಿಂಗ ಎನ್ನುವುದು ಸಾಬೀತಾಗಿದೆ. ಸುಪ್ರೀಂಕೋರ್ಟ್ ಈ ಹಿಂದೆ ಅದನ್ನು ಸೀಲ್ ಮಾಡಿದೆ. ಪುರಾತತ್ವ ವರದಿ ಆಧಾರದ ಮೇಲೆ ಡಿ-ಸೀಲ್ ಮಾಡಬೇಕು ಮತ್ತು ಅಲ್ಲಿ ಸೇವಾ ಪೂಜೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಲಾಗಿದೆ. ಇದನ್ನೂ ಓದಿ: ಪರೀಕ್ಷೆ ಆತಂಕ ಕಾಡ್ತಿದೆಯಾ? – ವಿದ್ಯಾರ್ಥಿಗಳಿಗೆ ಇಲ್ಲಿದೆ ಪ್ರಧಾನಿ ಮೋದಿಯ ಟಾಪ್‌-10 ಟಿಪ್ಸ್!

ಜ್ಞಾನವ್ಯಾಪಿ ಮಸೀದಿಯೂ ಮಂದಿರವಾಗಿತ್ತು ಎನ್ನುವುದು ಪುರಾತತ್ವ ಇಲಾಖೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಮಸೀದಿಯನ್ನು ಹಿಂದೂ ದೇವಾಲಯ ಎಂದು ಘೋಷಿಸಿ ಅದನ್ನು ಹಿಂದೂಗಳಿಗೆ ಹಸ್ತಾಂತರ ಮಾಡಬೇಕು ಎಂದು ವಿಹೆಚ್‍ಪಿ ಆಗ್ರಹಿಸಿದೆ. ಎಎಸ್‍ಐ (ASI) ಒದಗಿಸಿದ ಮಾಹಿತಿಗಳ ಪ್ರಕಾರ, 1947 ರ ಆಗಸ್ಟ್ 15 ರಂದು ಈ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವು ಅಸ್ತಿತ್ವದಲ್ಲಿದೆ ಮತ್ತು ಪ್ರಸ್ತುತ ಹಿಂದೂ ದೇವಾಲಯವಾಗಿದೆ ಎಂದು ಸಾಬೀತುಪಡಿಸುತ್ತದೆ ಎಂದು ವಿಎಚ್‍ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.

Gyanvapi Mosque Temple 2

ಆದ್ದರಿಂದ 1991ರ ಪೂಜಾ ಸ್ಥಳಗಳ ಕಾಯಿದೆಯ ಸೆಕ್ಷನ್ 4ರ ಪ್ರಕಾರ, ಈ ರಚನೆಯನ್ನು ಹಿಂದೂ ದೇವಾಲಯವೆಂದು ಘೋಷಿಸಬೇಕು, ಜ್ಞಾನವಾಪಿ ಮಸೀದಿಯನ್ನು ಮತ್ತೊಂದು ಸೂಕ್ತ ಸ್ಥಳಕ್ಕೆ “ಗೌರವಯುತವಾಗಿ” ಸ್ಥಳಾಂತರಿಸಲು ಮತ್ತು ಕಾಶಿ ವಿಶ್ವನಾಥನ ಮೂಲ ಸ್ಥಳವನ್ನು ಹಿಂದೂ ಸಮಾಜಕ್ಕೆ ಹಸ್ತಾಂತರಿಸಲು ಒಪ್ಪಿಕೊಳ್ಳುವಂತೆ ಮಸೀದಿಯನ್ನು ನಿರ್ವಹಿಸುವ ಇಂತೇಜಾಮಿಯಾ ಸಮಿತಿಗೆ ವಿಹೆಚ್‍ಪಿ (Vishwa Hindu Parishad) ಒತ್ತಾಯಿಸಿದೆ.

Share This Article