Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಎಡವಿದ್ದು ಎಲ್ಲೆಲ್ಲಿ?

Public TV
Last updated: January 29, 2024 12:52 pm
Public TV
Share
4 Min Read
sangeetha 4
SHARE

ಬಿಗ್ ಬಾಸ್ (Bigg Boss Kannada) ಮನೆಯಲ್ಲಿ  ಹಳ್ಳಿ ಟಾಸ್ಕ್‌ ಈ ಸೀಸನ್‌ ಅತಿ ಹೆಚ್ಚು ಸದ್ದು ಮಾಡಿದ ಕೆಲವು ಗಳಿಗೆಳಲ್ಲಿ ಹಳ್ಳಿ ಟಾಸ್ಕ್‌ ಕೂಡ ಒಂದು. ಮನೆಯೊಳಗೆ ಹಳ್ಳಿಯ ವಾತಾವರಣವನ್ನು ಸೃಷ್ಟಿ ಮಾಡಿ ಎರಡು ಕುಟುಂಬಗಳಾಗಿ ಮನೆಯ ಸದಸ್ಯರನ್ನು ವಿಂಗಡಿಸಲಾಗಿತ್ತು. ಅವರ ನಡುವೆ ವಿವಿಧ ಟಾಸ್ಕ್‌ಗಳನ್ನು ನೀಡಲಾಗಿತ್ತು. ಈ ಸಂದರ್ಭದಲ್ಲಿ ವಿನಯ್ ಒಂದು ಕುಟುಂಬದ ಯಜಮಾನನಾಗಿದ್ದರೆ, ಇನ್ನೊಂದು ಕುಟುಂಬಕ್ಕೆ ಸಂಗೀತಾ (Sangeetha) ಯಜಮಾನ್ತಿಯಾಗಿದ್ದರು. ಈ ಸಂದರ್ಭದಲ್ಲಿ ವಿನಯ್ ಮತ್ತು ಕಾರ್ತಿಕ್ ನಡುವೆ ಜಗಳ ನಡೆದಿತ್ತು. ಆ ಸಂದರ್ಭದಲ್ಲಿ ವಿನಯ್, ‘ನಾವೇನು ಬಳೆ ತೊಟ್ಕೊಂಡು ಕೂತಿಲ್ಲ’ ಎಂದು ಮಾತಾಡಿದ್ದರು. ಇದರಿಂದ ಸಿಟ್ಟಿಗೆದ್ದ ಸಂಗೀತಾ ಅವರ ಮಾತನ್ನು ಪ್ರತಿಭಟಿಸಿದ್ದಲ್ಲದೇ ಉಳಿದ ಟಾಸ್ಕ್‌ಗಳನ್ನು ಕೈ ತುಂಬ ಬಳೆ ತೊಟ್ಟುಕೊಂಡೇ ಆಡಿದ್ದರು. ಹಾಗೂ ವಿನಯ್ ಅವರಿಗೆ ‘ಬಳೆ ತೊಟ್ಕೊಂಡಿದೀನಿ ಬಳೆ’ ಎಂದು ಕೈಯೆತ್ತಿ ತೋರಿಸಿದ್ದರು ಕೂಡ. ಬಳೆಯ ಕುರಿತ ತಪ್ಪು ಮಾತುಗಳಿಗೆ ಸಂಗೀತಾ ನೀಡಿದ ಉತ್ತರ ಮನೆಯೊಳಗಷ್ಟೇ ಅಲ್ಲ, ಮನೆಯ ಹೊರಗೂ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ವಿನಯ್ ಆಡಿದ ಮಾತಿನ ಬಗ್ಗೆ, ಅದಕ್ಕೆ ಸಂಗೀತಾ ಕೊಟ್ಟ ಉತ್ತರದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿದ್ದವು. ಇದು ಸಂಗೀತಾ ಅವರ ಗಟ್ಟಿ ಮತ್ತು ದಿಟ್ಟ ವ್ಯಕ್ತಿತ್ವವನ್ನು ತೆರೆದಿಟ್ಟಿತ್ತು.

sangeetha sringeri 1 4

ಆ ವಾರಾಂತ್ಯದ ಪಂಚಾಯ್ತಿಯಲ್ಲಿ ಕಿಚ್ಚ ವಿನಯ್ ಮಾತುಗಳಿಗೆ ತರಾಟೆ ತೆಗೆದುಕೊಂಡಿದ್ದಲ್ಲದೆ, ಸಂಗೀತಾ ಅವರ ದಿಟ್ಟ ವರ್ತನೆಯನ್ನು ಪ್ರಶಂಸಿಸಿದ್ದರು. ಅಲ್ಲದೇ ಆ ವಾರದ ಕಿಚ್ಚನ ಚಪ್ಪಾಳೆಯನ್ನು ‘ಬಳೆ’ಗೇ ನೀಡಿದ್ದರು. ಸಂಗೀತಾ ಕೈಯಲ್ಲಿನ ಬಳೆಯ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಲ್ಲದೆ, ಹಲವು ಸೆಲೆಬ್ರಿಟಿಗಳ ಪೇಜುಗಳಲ್ಲಿ ಕಾಣಿಸಿಕೊಂಡಿತ್ತು. ಇದೊಂದೇ ಸಂದರ್ಭವಲ್ಲ. ತಮ್ಮ ಅಭಿಪ್ರಾಯಗಳನ್ನು ತಿಳಿಸುವ ಯಾವುದೇ ಸಂದರ್ಭಗಳಲ್ಲಿ ಸಂಗೀತಾ ಯಾವತ್ತೂ ಹಿಂಜರಿಕೆಗೆ ತೋರಿಸಿದ್ದಿಲ್ಲ. ರಿಸ್ಕ್‌ ತೆಗೆದುಕೊಳ್ಳಲು ಹಿಂದೆಮುಂದೆ ನೋಡಿದ್ದಿಲ್ಲ. ಹಾಗಾಗಿಯೇ ಸಂಗೀತಾ ಬಹುತೇಕ ಎಲ್ಲ ವಾರಗಳಲ್ಲಿಯೂ ನಾಮಿನೇಷನ್ ಲೀಸ್ಟ್‌ನಲ್ಲಿ ಇದ್ದೇ ಇರುತ್ತಿದ್ದರು. ಆದರೆ ಅದನ್ನೆಲ್ಲ ಗಣನೆಗೇ ತೆಗೆದುಕೊಳ್ಳದ ಅವರು, ತಮ್ಮ ಆಟವನ್ನು ಆಡುತ್ತ, ತಮಗೆ ಅನಿಸಿದ್ದನ್ನು ಹೇಳುತ್ತಲೇ ಇದ್ದರು.

sangeetha 3

ಈ ಸೀಸನ್‌ನ ಇನ್ನೊಂದು ಬಹುದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಸಂದರ್ಭವೆಂದರೆ ರಕ್ಕಸ ಮತ್ತು ಗಂಧರ್ವರ ಟಾಸ್ಕ್‌. ಟಾಸ್ಕ್‌ ಎಂಬುದು ಸೇಡಿನ ರೀತಿ ಬದಲಾಗಿ ಮನೆಯ ವಾತಾವರಣವೂ ಪೂರ್ತಿ ಬದಲಾಗಿಬಿಟ್ಟ ವಾರವದು. ಆ ವಾರದಲ್ಲಿ ಇನ್ನೊಂದು ವಿಷಾದನೀಯ ಘಟನೆಯೂ ನಡೆಯಿತು. ಕುರ್ಚೆಯಲ್ಲಿ ಕೂರಿಸಿ ಮುಖಕ್ಕೆ ನೀರು ಸೋಕುವ ಟಾಸ್ಕ್‌ನಲ್ಲಿ, ಸಂಗೀತಾ ಮತ್ತು ಪ್ರತಾಪ್ ಇಬ್ಬರಿಗೂ ಕಣ್ಣಿಗೆ ಹಾನಿಯಾಗಿ ಆಸ್ಪತ್ರೆಗೆ ಸೇರುವಂತಾಗಿತ್ತು.  ಇದರಿಂದ ಹಲವು ದಿನಗಳ ಕಾಲ ಸಂಗೀತಾ ಮತ್ತು ಪ್ರತಾಪ್ ಇಬ್ಬರೂ ಆಸ್ಪತ್ರೆಯಲ್ಲಿ ಕಳೆಯುವಂತಾಗಿತ್ತು. ಹಾಗೆ ಹೊರಗೆ ಹೋದ ಸಂಗೀತಾ ವಾಪಸ್ ಬರುತ್ತಾರೋ ಇಲ್ಲವೋ ಎಂದು ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ ಕಪ್ಪು ಕನ್ನಡಕ ತೊಟ್ಟ ಸಂಗೀತಾ ಮತ್ತು ಪ್ರತಾಪ್‌ ರೀ ಎಂಟ್ರಿ ಕೊಟ್ಟಿದ್ದರು. ಹಾಗೆಯೇ ಹಿಂದೆಂದಿಗಿಂತ ಹೆಚ್ಚಿನ ಉತ್ಸಾಹದೊಂದಿಗೆ, ಹಟದೊಂದಿಗೆ ಮನೆಗೆ ಬಂದಿದ್ದರು. ಅದನ್ನು ತಮ್ಮ ಆಟಗಳಲ್ಲಿ ತೋರಿಸಿಯೂ ಕೊಟ್ಟರು.

sangeetha

ಹಲವು ಸಂದರ್ಭದಲ್ಲಿ ಇಡೀ ಮನೆಯ ಎಲ್ಲರನ್ನೂ ಎದುರುಹಾಕಿಕೊಂಡು ಒಬ್ಬಂಟಿಯಾಗಿದ್ದ ಸಂದರ್ಭವೂ ಸಾಕಷ್ಟಿವೆ. ಆ ಸಂದರ್ಭದಲ್ಲಿಯೂ ಸಂಗೀತಾ ಹಿಂಜರಿಕೆ ತೋರಿದ್ದಿಲ್ಲ. ಮೊದಲ ವಾರದಲ್ಲಿ ಅಸಮರ್ಥರ ಗುಂಪಿನಲ್ಲಿದ್ದ ಸಂಗೀತಾ, ತನಿಷಾ ಮತ್ತು ಕಾರ್ತಿಕ್ ಈ ಮೂವರೂ ಸಾಕಷ್ಟು ಆಪ್ತರಾದರು. ತ್ರಿಕೋನ ಸ್ನೇಹ ಹಲವು ವಾರಗಳ ಕಾಲ ಅಬಾಧಿತವಾಗಿ ಉಳಿದಿತ್ತು. ಈ ಸ್ನೇಹಸಂಬಂಧದಲ್ಲಿಯೂ ಸಂಗೀತಾ ಅವರ ವ್ಯಕ್ತಿತ್ವದ ಆಯಾಮಗಳು ಬಿಚ್ಚಿಕೊಂಡವು. ಲುಡೊ ಟಾಸ್ಕ್‌ನಲ್ಲಿ ಸಂಗೀತಾಳನ್ನು ಉಳಿಸುವ ಅವಕಾಶ ಇದ್ದಾಗಲೂ ಸೇವ್ ಮಾಡದಿರುವುದು ಸಂಗೀತಾ ಅವರಲ್ಲಿ ಅಸಮಧಾನ ಹುಟ್ಟಿಸಿತ್ತು. ಅದನ್ನು ಅವರು ನೇರವಾಗಿಯೇ ಹೇಳಿಕೊಂಡಿದ್ದರು ಕೂಡ. ಆ ಹಂತದಲ್ಲಿ ಕಾರ್ತೀಕ್ ಮತ್ತು ಸಂಗೀತಾ ಮಧ್ಯ ಸಣ್ಣ ಬಿರುಕು ಕಾಣಿಸಿಕೊಂಡಿತ್ತು. ‘ನಾನು ಯಾರನ್ನೂ ಅಷ್ಟಾಗಿ ನಂಬುವುದಿಲ್ಲ. ಯಾರನ್ನಾದರೂ ನಂಬಿದ್ದೇನೆ ಅಂದರೆ ಅವರಿಂದ ಬೆಂಬಲವನ್ನು ನಿರೀಕ್ಷಿಸುತ್ತೇನೆ’ ಎಂಬುದು ಸಂಗೀತಾ ನಿಲುವು. ಇದು ಕೆಲವೊಮ್ಮೆ ಕಿರಿಕಿರಿ ಹುಟ್ಟಿಸಿದ್ದೂ ಇದೆ. ಆದರೆ ಆ ಸ್ವಭಾವದಿಂದ ಬಹುಬೇಗ ಹೊರಬಂಧ ಸಂಗೀತಾ ಸ್ವತಂತ್ರವಾಗಿ ಆಡಲು, ಇರಲು ಪ್ರಾರಂಭಿಸಿದ್ದರು. ಹಾಗಾಗಿಯೇ ಎಲ್ಲರ ಜೊತೆಗೂ ಸ್ನೇಹದಿಂದಲೂ ಇರುತ್ತಲೂ, ಅಷ್ಟೇ ನೇರವಾಗಿ ಜಗಳವಾಡಲೂ ಅವರಿಗೆ ಸಾಧ್ಯವಾಗುತ್ತಿತ್ತು.

sangeetha sringeri 1 3

ಕೊನೆಯ ವಾರದಲ್ಲಿ ವಾಲ್‌ ಆಫ್‌ ಮೆಮೊರಿ ನೋಡಿದರೆ ಸಂಗೀತಾ ಎಂಥ ನೆನಪುಗಳನ್ನು ಮನೆಯೊಳಗೆ ಕಟ್ಟಿಕೊಂಡಿದ್ದಾರೆ ಎಂಬುದು ಗೊತ್ತಾಗುವಂತಿತ್ತು. ಆರಂಭದ ದಿನಗಳಲ್ಲಿ ಸಂಗೀತಾ ಅವರನ್ನು ದ್ವೇಷಿಸುತ್ತಿದ್ದ ನಮೃತಾ ಕೊನೆಕೊನೆಯ ದಿನಗಳಲ್ಲಿ ಅವರ ಸ್ನೇಹಿತೆಯಾಗಿದ್ದು, ‘ನಾನು ನಿಮ್ಮನ್ನು ತಪ್ಪಾಗಿ ತಿಳಿದುಕೊಂಡಿದ್ದೆ’ ಎಂದು ಉದ್ಘರಿಸಿದ್ದೇ ಸಂಗೀತಾ ಅವರ ವ್ಯಕ್ತಿತ್ವಕ್ಕೆ ಸಾಕ್ಷಿ. ಸ್ನೇಹಕ್ಕೆ ಜೊತೆಯಾಗಿ ನಿಲ್ಲುತ್ತಿದ್ದ ಅವರು ನಂಬಿಕೆದ್ರೋಹವನ್ನು ಎಂದಿಗೂ ಸಹಿಸಿಕೊಂಡಿಲ್ಲ. ಹಿಂದೊಂದು ಮುಂದೊಂದು ಮಾತಾಡುವವರನ್ನು ದೂರವೇ ಇಟ್ಟುಕೊಂಡು ಬಂದರು. ಕಾರ್ತಿಕ್ ಜೊತೆಗೆ ಸ್ನೇಹ ಮುರಿದುಕೊಂಡ ನಂತರ ‘ನಾನೆಂದಿಗೂ ಅವರನ್ನು ಕ್ಷಮಿಸಲಾರೆ’ ಎಂದು ಒಂದಲ್ಲ ಹಲವು ಬಾರಿ ಹೇಳಿಯೂ ಅವರು ಕಾರ್ತಿಕ್ ಅವರನ್ನು ಕ್ಷಮಿಸಿದರು. ಫಿನಾಲೆ ವೀಕ್‌ನಲ್ಲಿ ಕಾರ್ತಿಕ್, ಸಂಗೀತಾಗೆ ಪತ್ರ ಬರೆದಾಗ, ಸಂಗೀತಾ ಮನಸಾರೆ ಮೆಚ್ಚಿಕೊಂಡು, ತಾನೂ ಪತ್ರ ಬರೆದಿದ್ದಲ್ಲದೇ ಜರ್ಕೀನ್ ಮತ್ತು ಲಿಪ್‌ಸ್ಟಿಕ್‌ ಅನ್ನು ಉಡುಗೊರೆಯಾಗಿ ಕೊಟ್ಟಿದ್ದರು. ವಿನಯ್ ಜೊತೆಗೂ ಮುನಿಸನ್ನು ಮರೆತು ಸ್ನೇಹದಿಂದ ಉಳಿದಿದ್ದರು.

sangeetha 1

‘ಪ್ರತಾಪ್ ಕಂಡರೆ ನನಗೆ ನನ್ನ ಅಣ್ಣನೇ ನೆನಪಾಗುತ್ತಾನೆ. ಸದಾ ಮನಸೊಳಗೆ ಮುಚ್ಚಿಟ್ಟುಕೊಂಡು ಕೊನೆಗೆ ಒಮ್ಮೆಲೇ ಸ್ಫೋಟಗೊಳ್ಳುತ್ತಾನೆ. ಬಿಗ್‌ಬಾಸ್‌ ಮನೆಯೊಳಗೆ ನನ್ನ ಜರ್ನಿಗೂ ಪ್ರತಾಪ್ ಜರ್ನಿಗೂ ಸಾಕಷ್ಟು ಸಾಮ್ಯತೆಗಳಿವೆ’ ಎಂದು ಸಂಗೀತಾ ಹಲವು ಬಾರಿ ಹೇಳಿದ್ದಾರೆ. ಪ್ರತಾಪ್‌ ರೂಪದಲ್ಲಿ ನನಗೊಬ್ಬ ತಮ್ಮ ಸಿಕ್ಕಿದ್ದಾನೆ ಎಂದು ಹೇಳಿದ್ದಷ್ಟೇ ಅಲ್ಲ, ಅವಕಾಶ ಸಿಕ್ಕಾಗೆಲ್ಲ ಪ್ರತಾಪ್‌ ಅವರಿಗೆ ಬೆಂಬಲ ನೀಡುತ್ತಲೇ ಬಂದಿದ್ದಾರೆ ಸಂಗೀತಾ. ಒಂದು ಹಂತದಲ್ಲಿ ಪ್ರತಾಪ್, ಸಂಗೀತಾ ಅವರನ್ನು ಆಟದಿಂದ ಹೊರಗೆ ಹಾಕಿದ್ದರೂ ಸಂಗೀತಾ, ಪ್ರತಾಪ್‌ಗೆ ನೀಡುವ ಬೆಂಬಲ ನಿಲ್ಲಿಸಲಿಲ್ಲ.

ಹೀಗೆ ಹಲವು ಏರಿಳಿತಗಳುಳ್ಳ ಸಂಗೀತಾ, ಬಿಗ್‌ಬಾಸ್ ಜರ್ನಿಯಲ್ಲಿ ಸಾಕಷ್ಟು ಏರಿಳಿತಗಳು ಇದ್ದಿದ್ದಂತೂ ನಿಜ. ಆದರೆ ಈ ಏರಿಳಿತಗಳನ್ನು ಹಾದುಬಂದ ಅವರು ಇನ್ನಷ್ಟು ಗಟ್ಟಿಗೊಳ್ಳುತ್ತಲೇ ಬಂದರು. ಹಾಗಾಗಿಯೇ ಫಿನಾಲೆ ವೀಕ್‌ನ ಆರು ಸ್ಪರ್ಧಿಗಳಲ್ಲಿ ಎಲ್ಲರಿಗಿಂತ ಮೊದಲು ಕಾಲಿಡಲು ಅವರಿಗೆ ಸಾಧ್ಯವಾಗಿದ್ದು ಅವರನ್ನೂ ದ್ವೇಷಿಸುವವರೂ ಅವರ ಸಾಮರ್ಥ್ಯವನ್ನು ಮೆಚ್ಚಿಕೊಳ್ಳುವಂತೆ ಬೆಳೆದಿದ್ದು ಸಂಗೀತಾ ಅವರ ಶಕ್ತಿ.

TAGGED:Bigg Boss KannadaSangeetaSangeethaSecond Runner upಬಿಗ್ ಬಾಸ್ ಕನ್ನಡಸಂಗೀತಾಸೆಕೆಂಡ್ ರನ್ನರ್ ಅಪ್
Share This Article
Facebook Whatsapp Whatsapp Telegram

Cinema News

Dhanush
ಧನುಷ್ ನನ್ನ ಗೆಳೆಯ – ಡೇಟಿಂಗ್ ವದಂತಿಗೆ ತೆರೆ ಎಳೆದ ಮೃಣಾಲ್ ಠಾಕೂರ್
Cinema Latest South cinema Top Stories
Love me like you do forever to go Yash Radhika Pandit Engagement 9th anniversary
ಉಂಗುರಕ್ಕೆ 9ನೇ ವರ್ಷದ ಸಂಭ್ರಮ – ವಿಶೇಷ ನೆನಪು ಹಂಚಿಕೊಂಡ ರಾಧಿಕಾ
Cinema Latest Sandalwood Top Stories
rajinikanth upendra
`ಭಾಷಾ’ಗಿಂತ `ಓಂ’ ಸಿನಿಮಾ ಹತ್ತು ಪಟ್ಟು ಬೆಟರ್- ಉಪ್ಪಿ ಹೊಗಳಿದ ರಜನಿಕಾಂತ್
Cinema Latest Main Post South cinema
darshan pavithra gowda
ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್, ಪವಿತ್ರಾ ಗೌಡ ಸೇರಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು
Bengaluru City Cinema Court Latest Main Post Sandalwood
Darshan 11
ರೇಣುಕಾಸ್ವಾಮಿ ಕೊಲೆ ಕೇಸ್ – ಇಂದು ಕೋರ್ಟ್‌ಗೆ ಹಾಜರಾಗಲಿರುವ ‘ಡಿ’ ಗ್ಯಾಂಗ್
Bengaluru City Cinema Court Latest Sandalwood Top Stories

You Might Also Like

Badruddin Sir Reunion
Dakshina Kannada

34 ವರ್ಷಗಳ ಬಳಿಕ ಸಹಪಾಠಿಗಳ ಪುನರ್ ಮಿಲನ – ಸವಿನೆನಪುಗಳ ಮೆಲುಕು!

Public TV
By Public TV
5 minutes ago
RApe 1
Crime

Delhi | ಈಜು ತರಬೇತಿಗೆ ಹೋಗಿದ್ದ ವೇಳೆ ಇಬ್ಬರು ಬಾಲಕಿಯರ ಮೇಲೆ ಗ್ಯಾಂಗ್ ರೇಪ್

Public TV
By Public TV
15 minutes ago
Delhi School Education
Latest

ದೆಹಲಿಯಲ್ಲಿ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಬ್ರೇಕ್‌ – ನಿಯಮ ಉಲ್ಲಂಘಿಸಿದರೆ ಬೀಳುತ್ತೆ ಭಾರೀ ದಂಡ!

Public TV
By Public TV
16 minutes ago
China
Latest

ವಿದೇಶಗಳಲ್ಲೂ ಪೊಲೀಸ್ ಸ್ಟೇಷನ್‌ – 53 ದೇಶಗಳಲ್ಲಿ ಚೀನಾದ ಕುತಂತ್ರ!

Public TV
By Public TV
20 minutes ago
UT Khader
Bengaluru City

ಎಸ್‌ಐಟಿ ತನಿಖೆ ಮುಗಿಯೋವರೆಗೂ ಧಾರ್ಮಿಕ ಸ್ಥಳದ ಪಾವಿತ್ರತೆ ಎಲ್ಲರೂ ಕಾಪಾಡಬೇಕು: ಯು.ಟಿ. ಖಾದರ್

Public TV
By Public TV
31 minutes ago
Sabarimala Temple
Latest

ಶಬರಿಮಲೆ ಯಾತ್ರೆಗೆ ಶ್ರೀಲಂಕಾ ಸರ್ಕಾರದಿಂದಲೂ ಮಾನ್ಯತೆ

Public TV
By Public TV
34 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?