ಮತ್ತೆ ಸಂಕಷ್ಟದಲ್ಲಿ ಡ್ರೋನ್- ಪ್ರತಾಪ್ ವಿರುದ್ಧ ದೂರು ದಾಖಲು

Public TV
1 Min Read
Drone Pratap

‘ಬಿಗ್ ಬಾಸ್ ಕನ್ನಡ ಸೀಸನ್ 10′ (Bigg Boss Kannada 10) ಸ್ಪರ್ಧಿ ಡ್ರೋನ್ ಪ್ರತಾಪ್ (Drone Prathap) ಅವರ ವಿರುದ್ಧ ದೂರು ದಾಖಲಾಗಿದೆ. ರೈತರಿಂದ ಹಣ ಪಡೆದು ವಂಚಿಸಿದ್ದಾರೆಂದು ಡಾ.ಪ್ರಯಾಗ್ (Dr.Prayag) ದೂರು ನೀಡಿದ್ದಾರೆ. ಆರ್.ಆರ್ ನಗರದ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ವಿರುದ್ಧ ಇದೀಗ ದೂರ ದಾಖಲಾಗಿದೆ. ಇದನ್ನೂ ಓದಿ:ತನ್ನ ಬಗ್ಗೆ ಮಹಿಳೆಯರಿಗಿರೋ ಅಭಿಪ್ರಾಯ ಕೇಳಿ ವಿನಯ್ ಗೌಡ ಶಾಕ್

drone prathap 1

ಡ್ರೋನ್ ಪ್ರತಾಪ್, ಸಿರಣ್ ಮಾದವ್, ಸಾರಂಗ ಸಿಮಂತ್ ಮಾನೆ ಮತ್ತು ಸಾಗರ್ ಗಾರ್ಗ್ ಇವರು ಡ್ರೋನಾರ್ಕ್ ಏರೋಸ್ಪೇಸ್ ಪ್ರೈ.ಲಿ ಮತ್ತು ಕ್ಯಾಸ್ಟರ್ ಡ್ರೋಣಾಟಿಕ್ಸ್ ಪ್ರೈ.ಲಿ ಕಂಪನಿಗಳನ್ನ ತೆರೆದು ಸುಳ್ಳು ಮಾಹಿತಿ ನೀಡಿ ರೈತರಿಂದ ಹಣ ಪಡೆದು ವಂಚಿಸುತ್ತಿದ್ದಾರೆ ಎಂದು ಡಾ. ಪ್ರಯಾಗ್ ದೂರು ದಾಖಲಿಸಿದ್ದಾರೆ.

ಇದರ ಸೂಕ್ತ ತನಿಖೆ ಮಾಡಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಾ.ಪ್ರಯಾಗ್ ಮನವಿ ಮಾಡಿದ್ದಾರೆ. ಡಾ. ಪ್ರಯಾಗ್ ನೀಡಿದ ದೂರನ್ನ ಸ್ವೀಕರಿಸಿ ಸ್ವೀಕೃತಿ ಪತ್ರವನ್ನು ಆರ್.ಆರ್ ನಗರದ ಪೊಲೀಸರು ನೀಡಿದ್ದಾರೆ.

Share This Article