ಬಿಗ್ ಬಾಸ್ (Bigg Boss Kannada) ಫಿನಾಲೆ ವೇದಿಕೆ ರಂಗು ರಂಗಾಗಿದೆ. ನೂರು ಚಿಲ್ರೆ ದಿನಗಳನ್ನು ಪೂರೈಸಿ ಕೊನೆಗೂ ಬಿಗ್ ಬಾಸ್ ಫಿನಾಲೆಗೆ ಬಂದು ತಲುಪಿದೆ. ಇಂದು ಸಂಜೆಯಿಂದ ಫಿನಾಲೆ (Finale) ಸಂಚಿಕೆಯನ್ನು ಪ್ರಸಾರ ಮಾಡಲು ವಾಹಿನಿಯು ಸಿದ್ಧ ಮಾಡಿಕೊಂಡಿದೆ. ಸಂಜೆ 7.30ರಿಂದ ಫಿನಾಲೆ ಸಂಚಿಕೆಯನ್ನು ವೀಕ್ಷಿಸಬಹುದಾಗಿದೆ. ಫಿನಾಲೆ ಕಾರಣದಿಂದಾಗಿ ತಮ್ಮದೇ ಆದ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ ಬಿಗ್ ಬಾಸ್ ಟೀಮ್. ಈಗಾಗಲೇ ನಾಮಿನೇಟ್ ಆಗಿರುವ ಸ್ಪರ್ಧಿಗಳನ್ನು ವೇದಿಕೆಗೆ ಕರೆಯಿಸಿಕೊಂಡು ಭರ್ಜರಿ ಸ್ಟೆಪ್ (Dance) ಹಾಕಿಸಿದೆ.
ಶೂಟಿಂಗ್ ಸ್ಥಳದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ. ಚಿತ್ರೀಕರಣದ ಯಾವುದೇ ವಿಷಯಗಳು ಬಹಿರಂಗವಾಗ ಬಾರದು ಎನ್ನುವ ಕಾರಣಕ್ಕಾಗಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಾಮಾನ್ಯ ಪ್ರೇಕ್ಷಕರಿಗೆ ಇಂದು ಪ್ರವೇಶವಿಲ್ಲ. ಅವರೇ ಆಯ್ಕೆ ಮಾಡಿರುವ ಕೆಲವೇ ಕೆಲವೇ ಪ್ರೇಕ್ಷಕರು ಇಂದು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಅದರಲ್ಲೂ ಮೊಬೈಲ್ ನಿಷೇಧ ಮಾಡಲಾಗಿದೆ.
ಈಗಾಗಲೇ ನಾಮಿನೇಟ್ ಆಗಿರುವ ಸ್ಪರ್ಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಮೈಕಲ್, ತನಿಷಾ ಕುಪ್ಪಂಡ ಸೇರಿದಂತೆ ಬಹುತೇಕರು ಹಿಟ್ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ನಿನ್ನೆಯಿಂದಲೇ ಚಿತ್ರೀಕರಣದ ಕೆಲಸವನ್ನೂ ಮುಗಿಸಿದ್ದಾರೆ. ಇವತ್ತು ಮತ್ತು ನಾಳೆ ಎರಡು ದಿನಗಳ ಕಾಲ ಫಿನಾಲೆ ಶೂಟಿಂಗ್ ನಡೆಯಲಿದ್ದು. ಜೊತೆಗೆ ಇವತ್ತು ಇಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.
ಡ್ರೋನ್ ಪ್ರತಾಪ್, ಸಂಗೀತಾ ಶೃಂಗೇರಿ, ಕಾರ್ತಿಕ್, ತುಕಾಲಿ ಸಂತು, ವರ್ತೂರು ಸಂತು ಹಾಗೂ ವಿನಯ್ ಸದ್ಯ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಸಂಗೀತಾ, ವಿನಯ್ ಹಾಗೂ ಡ್ರೋನ್ ಪ್ರತಾಪ್ ನಡುವೆ ತೀವ್ರ ಪೈಪೋಟಿ ನಡೆದಿದೆ. ಬಿಗ್ ಬಾಸ್ ಗೆಲುವಿಗಾಗಿ ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಶ್ರಮ ವಹಿಸುತ್ತಿದ್ದಾರೆ. ಅಂತಿಮವಾಗಿ ಬಿಗ್ ಬಾಸ್ ಪಟ್ಟ ಯಾರ ಪಾಲಾಗಲಿದೆ ಎನ್ನುವುದು ನಾಳೆ ಗೊತ್ತಾಗಲಿದೆ.