ರಾಮಮಂದಿರ ವಿಚಾರ: ತನ್ನದೇ ನಿರ್ದೇಶಕನಿಗೆ ತಿರುಗೇಟು ನೀಡಿದ ರಜನಿ

Public TV
1 Min Read
pa ranjith

ನವರಿ 22ರಂದು ಅಯೋಧ್ಯೆಯಲ್ಲಿ ನಡೆದ ರಾಮಲಲ್ಲಾನ (Ram Mandir) ಪ್ರಾಣ ಪ್ರತಿಷ್ಠಾಪನೆಗೆ ತಮಿಳಿನ ಹೆಸರಾಂತ ನಟ ರಜನಿಕಾಂತ್ (Rajinikanth) ಸೇರಿದಂತೆ ಭಾರತೀಯ ಸಿನಿಮಾ ರಂಗದ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ರಜನಿಕಾಂತ್ ಆಡಿದ ಮಾತಿಗೆ ಅವರದ್ದೇ ಸಿನಿಮಾಗಳ ನಿರ್ದೇಶಕ ಪಾ.ರಂಜಿತ್ (Pa. Ranjith) ಆಕ್ಷೇಪ ವ್ಯಕ್ತ ಪಡಿಸಿದ್ದರು. ಪಾ.ರಂಜಿತ್ ಮತ್ತು ರಜನಿಯ ಪರ ವಿರೋಧದ ಮಾತುಗಳು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದ್ದವು.

rajanikanth

ರಜನಿ ಕುರಿತಂತೆ ಮಾತನಾಡಿದ್ದ ಪಾ.ರಂಜಿತ್, ‘ರಜನಿಕಾಂತ್ ಅಯೋಧ್ಯೆಗೆ ಹೋಗಿದ್ದು, ರಾಮನ ದರ್ಶನ ಪಡೆದದ್ದು ತಪ್ಪಲ್ಲ. ಆದರೆ, 500 ವರ್ಷಗಳ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಹೇಳದ್ದನ್ನು ನಾನು ಒಪ್ಪಲಾರೆ. ಇದರ ಹಿಂದಿನ ರಾಜಕಾರಣವನ್ನು ಪ್ರಶ್ನೆ ಮಾಡಬೇಕು. ಸಮಸ್ಯೆ ಮತ್ತು ಪರಿಹಾರ ಎನ್ನುವುದನ್ನು ನಾನು ಟೀಕಿಸುತ್ತೇನೆ’ ಎಂದಿದ್ದರು.

rajanikanth 1 4

ಪಾ.ರಂಜಿತ್ ಆಡಿದ ಮಾತುಗಳು ರಜನಿಕಾಂತ್ ಮತ್ತು ರಾಮನ ಭಕ್ತರನ್ನು ಕೆರಳಿಸಿದ್ದವು. ಪಾ.ರಂಜಿತ್ ವಿರುದ್ಧ ಟೀಕೆಗಳು ಕೇಳಿ ಬಂದಿದ್ದವು. ಹಾಗಾಗಿ ಇದಕ್ಕೆ ರಜನಿಕಾಂತ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವು ಕುತೂಹಲ ಸಹಜವಾಗಿಯೇ ಇತ್ತು. ಅಯೋಧ್ಯೆಯಿಂದ ಬಂದ ರಜನಿಯನ್ನೂ ಕೊನೆಗೂ ಪ್ರಶ್ನೆ ಮಾಡಿದ್ದಾರೆ ಮಾಧ್ಯಮಗಳು.

ರಾಮಮಂದಿರ ಓಪನ್ ಆದ ತಕ್ಷಣ ರಾಮನ ದರ್ಶನ ಪಡೆದ ಮೊದಲ 150 ಜನರಲ್ಲಿ ನಾನೂ ಒಬ್ಬ. ನನಗೆ ರಾಮನ ಒಳ್ಳೆಯ ದರ್ಶನ ಸಿಕ್ಕಿದೆ. ನನಗೆ ಇದು ಆಧ್ಯಾತ್ಮ. ರಾಜಕೀವಲ್ಲ ಎಂದು ಹೇಳುವ ಮೂಲಕ ಪಾ.ರಂಜಿತ್ ಆಡಿದ ಮಾತಿಗೆ ರಜನಿ ಹೀಗೆ ಉತ್ತರಿಸಿದ್ದಾರೆ. ಅಲ್ಲದೇ, ತಾವು ಇದರಲ್ಲಿ ರಾಜಕೀಯ ಹುಡುಕುವುದಕ್ಕೆ ಹೋಗುದಿಲ್ಲವೆಂದು ತಿರುಗೇಟು ನೀಡಿದ್ದಾರೆ.

Share This Article