ಭಾರತದ ಸಾಕ್ಷ್ಯಚಿತ್ರ : ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ

Public TV
1 Min Read
To Kill A Tiger 2

ಗತ್ತಿನ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದಾಗಿರುವ ಆಸ್ಕರ್ (Oscar) ಪ್ರಶಸ್ತಿಗೆ ನಾಮ ನಿರ್ದೇಶನ (Nominations) ಪ್ರಕಟಗೊಂಡಿದ್ದು, ಭಾರತ ಮೂಲದ ಕೆನಡಾದಲ್ಲಿ ನೆಲೆಸಿರುವ ನಿಶಾ ಪಹೂಜಾ (Nisha Pahuja) ಅವರ ‘ಟು ಕಿಲ್ ಎ ಟೈಗರ್’ (To Kill A Tiger) ಸಾಕ್ಷ್ಯಚಿತ್ರವು ನಾಮನಿರ್ದೇಶನಗೊಂಡಿದೆ. ಇದು ಈ ಹಿಂದೆ ಟೊರೆಂಟೊ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.

To Kill A Tiger 1

ಕಾರ್ನಿಲಿಯಾ ಪ್ರನ್ಸಿಪೆ ಮತ್ತು ಡೇವಿಡ್ ಒಪ್ಪೆನ್ ಹಿಮ್ ನಿರ್ಮಿಸಿರುವ ಈ ಸಾಕ್ಷ್ಯಚಿತ್ರದಲ್ಲಿ 13 ವರ್ಷದ ಮಗಳನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸೆಗಿರುವ ದುರುಳರ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡುವ ತಂದೆಯ ಕಥೆಯನ್ನು ಇದು ಹೊಂದಿದೆ. ಭಾರತದ ನೆಲದಲ್ಲೇ ಇದು ಚಿತ್ರೀಕರಣವಾಗಿದೆ.

Oscars 1

ಕಳೆದ ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಸಂದಿದ್ದವು. ಆದರೆ, ಈ ಬಾರಿ ಆಸ್ಕರ್ ನಾಮಿನೇಟ್ ಪಟ್ಟಿಯಲ್ಲಿ ಭಾರತದ ಯಾವುದೇ ಸಿನಿಮಾಗಳು ಇರದೇ ಇರುವುದು ಸಹಜವಾಗಿಯೇ ನಿರಾಸೆ ತಂದಿದೆ.

oscars 2023

ಅತ್ಯುತ್ತಮ ಸಿನಿಮಾ ಪಟ್ಟಿಯಲ್ಲಿ ದಿ ಜೋನ್ ಆಫ್ ಇಂಟರೆಸ್ಟ್, ಬಾರ್ಬಿ, ಮಾಸ್ಟ್ರೊ, ಓಪನ್ ಹೈಮರ್, ಅನಾಟಮಿ ಆಫ್ ಎ ಫಾಲ್ ಸೇರಿದಂತೆ ಹಲವು ಚಿತ್ರಗಳು ಕಾಣಿಸಿಕೊಂಡಿದ್ದರೆ, ಅತ್ಯುತ್ತಮ ನಟ ವಿಭಾಗದಲ್ಲಿ ಜೆಫ್ರಿ ರೈಟ್, ಬ್ರ್ಯಾಡ್ಲಿ ಕೂಪರ್, ಪಾಲ್ ಗಿಯಾಮಟ್ಟಿ, ಕೋಲ್ಮನ್ ಡೆಮಿನಿಗೋ ಸೇರಿದಂತೆ ಹಲವು ಕಲಾವಿದರು ಇದ್ದಾರೆ.

 

ನಿರ್ದೇಶನದ ವಿಭಾಗದಲ್ಲಿ ಕ್ರಿಸ್ಟೊಫರ್ ನೋಲನ್, ಜಸ್ಟಿನ್ ಟ್ರೈಟ್, ಜೊನಥನ್ ಗ್ಲೆಜರ್, ಯೊಗೊರ್ಸ್ ಲ್ಯಾಂತಿಮೋಸ್ ಕಾಣಿಸಿಕೊಂಡಿದ್ದಾರೆ. ಅತ್ಯುತ್ತಮ ನಟಿ ವಿಭಾಗದಲ್ಲಿ ಕ್ಯಾರಿ  ಮುಲ್ಲಿಗನ್, ಆನೆಟ್ ಬೆನಿಂಗ್, ಎಮ್ಮ ಸ್ಟೊನ್, ಸಾಂಡ್ರಾ ಹುಲ್ಲರ್ ಮೊದಲಾದವರು ಇದ್ದಾರೆ.

Share This Article