ಭಾರೀ ಭದ್ರತೆಯೊಂದಿಗೆ ಟಿಎಂಸಿ ನಾಯಕನ ಮನೆ ಮೇಲೆ ಇಡಿ ದಾಳಿ

Public TV
1 Min Read
ED RAID TMC

ಕೋಲ್ಕತ್ತಾ: ಭಾರೀ ಭದ್ರತೆಯೊಂದಿಗೆ ತೃಣಮೂಲ ಕಾಂಗ್ರೆಸ್ (TMC) ನಾಯಕ ಶಹಜಹಾನ್ ಶೇಖ್ (Shahjahan Sheikh) ಮನೆ ಮೇಲೆ ಜಾರಿ ನಿರ್ದೇಶನಾಲಯ (ED) ತಂಡ ಮತ್ತೊಮ್ಮೆ ಇಂದು ದಾಳಿ ಮಾಡಿದೆ.

ಪಡಿತರ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇಂದು ಇಂದು ಸ್ಥಳೀಯ ಪೊಲೀಸರ ಜೊತೆ ಕೇಂದ್ರ ಭದ್ರತಾ ಪಡೆ ಸಿಬ್ಬಂದಿ ಸೇರಿದಂತೆ ಒಟ್ಟು 24 ವಾಹನಗಳಲ್ಲಿ ಬಂದ ಅಧಿಕಾರಿಗಳು ನಿವಾಸಕ್ಕೆ ದಾಳಿ ಮಾಡಿದ್ದು, ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಇಡಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದ ಶೇಖ್‌ ಆಪ್ತರು: ಜನವರಿ 5 ರಂದು ಶಹಜಹಾನ್ ಶೇಖ್ ಅವರ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಶಹಜಹಾನ್ ಶೇಖ್ ಅವರ ಆಪ್ತರು ಸೇರಿ ಇಡಿ ಅಧಿಕಾರಿಗಳ ಮೇಲೆಯೇ ದಾಳಿ ನಡೆಸಿದ್ದರು. ಜೊತೆಗೆ ಕೇಂದ್ರ ಭದ್ರತಾ ಪಡೆಗಳ ವಾಹನಗಳನ್ನೂ ಧ್ವಂಸಗೊಳಿಸಲಾಗಿತ್ತು. ಈ ಘಟನೆಯಲ್ಲಿ ಮೂವರು ಅಧಿಕಾರಿಗಳು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಭಾರೀ ಭದ್ರೆತೊಂದಿಗೆ ಸೇಕ್‌ ಮನೆ ಮೇಲೆ ದಾಳಿ ನಡೆಸಲಾಯಿತು. ಇದನ್ನೂ ಓದಿ: ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿ ಆತ್ಮಹತ್ಯೆಗೆ ಶರಣಾದ ಯೋಧ

ಅತ್ಯಂತ ಪ್ರಭಾವಿ ಟಿಎಂಸಿ ನಾಯಕರಾಗಿರುವ ಶಹಜಹಾನ್ ಶೇಖ್, ಉತ್ತರ 24 ಪರಗಣ ಜಿಲ್ಲೆಯ ಜಿಲ್ಲಾ ಕೌನ್ಸಿಲ್ ನ ಸದಸ್ಯರೂ ಆಗಿದ್ದಾರೆ. ಪಶ್ಚಿಮ ಬಂಗಾಳದ ಎಡಪಂಥೀಯ ಸರ್ಕಾರದ ಅವಧಿಯಲ್ಲಿ ಶೇಖ್ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಷಹಜಹಾನ್ ಶೇಖ್ ಆರಂಭದಲ್ಲಿ ಸಿಪಿಐಎಂನಲ್ಲಿದ್ದರು. ಬಳಿಕ ಅವರು 2009-2010 ರ ಸುಮಾರಿಗೆ ಟಿಎಂಸಿ ನಾಯಕ ಜ್ಯೋ ತಿಪ್ರಿಯೊ ಮಲ್ಲಿಕ್ ಅವರ ಸಹಾಯದಿಂದ ತೃಣಮೂಲ ಕಾಂಗ್ರೆಸ್‌ಗೆ ಸೇರಿದರು.

Share This Article