‘ಯುದ್ಧಕಾಂಡ’ ಚಿತ್ರದ ಫಸ್ಟ್ ಲುಕ್ ರಿಲೀಸ್: ಅಜಯ್ ರಾವ್ ಹುಟ್ಟುಹಬ್ಬಕ್ಕೆ ಗಿಫ್ಟ್

Public TV
1 Min Read
Ajay Rao 1

ಸ್ಯಾಂಡಲ್‌ವುಡ್‌ ನಟ ಅಜಯ್‌ ರಾವ್‌ ಕನ್ನಡ ಚಿತ್ರರಂಗದಲ್ಲಿದ್ದು ದಶಕಗಳ ಮೇಲಾಯಿತು. ಅಂದಿನಿಂದ ಇಲ್ಲಿಯವರೆಗೂ ಸಾಕಷ್ಟು ಸಿನಿಮಾಗಳಲ್ಲಿ ಅಜಯ್‌ ನಟಿಸಿದ್ದಾರೆ. ಹೊಸ ಹೊಸ ಪ್ರಯೋಗಕ್ಕೂ ತಮ್ಮನ್ನು ಒಡ್ಡಿಕೊಂಡಿದ್ದಾರೆ. ನಟನಾಗಿ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಅವರಿಗಿಂದು ಜನ್ಮದಿನದ ಸಂಭ್ರಮ. ಅಜಯ್ ರಾವ್ ಹುಟ್ಟುಹಬ್ಬದ ವಿಶೇಷವಾಗಿ  ಯುದ್ಧಕಾಂಡ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿ ಶುಭ ಕೋರಲಾಗಿದೆ.

Ajay Rao

ಕರಿಕೋಟು ತೊಟ್ಟು ಕೈಯಲ್ಲಿ ಪುಸ್ತಕ ಹಿಡಿದು ಲಾಯರ್ ಅವತಾರದಲ್ಲಿ ಕೃಷ್ಣ ಅಜಯ್ ರಾವ್ ಕಾಣಿಸಿಕೊಂಡಿದ್ದಾರೆ.‌ ಯುದ್ಧಕಾಂಡ ಚಿತ್ರವನ್ನು  ಅಜಯ್ ರಾವ್ ತಮ್ಮದೇ ನಿರ್ಮಾಣ ಸಂಸ್ಥೆ ‘ಶ್ರೀಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್’ ಮತ್ತು ‘ಅಜಯ್ ರಾವ್ ಪ್ರೊಡಕ್ಷನ್ಸ್’ ನಡಿ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ‘ಕೃಷ್ಣ ಲೀಲಾ’ ಸಿನಿಮಾ ನಂತರ ಮತ್ತೊಮ್ಮೆ ನಿರ್ಮಾಣ ಸಾಹಸಕ್ಕೆ ಮುಂದಾಗಿದ್ದಾರೆ.

Ajay Rao

ಅಂದಹಾಗೇ ಚಿತ್ರಕ್ಕೆ  ಪವನ್ ಭಟ್ ಆಕ್ಷನ್‌ ಕಟ್‌ ಹೇಳುತ್ತಿದ್ದು ಕಾರ್ತಿಕ್ ಶರ್ಮಾ ಕ್ಯಾಮೆರಾ ಕೈಚಳಕವಿದೆ. ಬಹುಭಾಷೆಯಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಪ್ಯಾನ್ ಇಂಡಿಯಾ ತಾರಾಬಳಗವಿರಲಿದೆ.

ಸದ್ಯ ಯುದ್ಧಕಾಂಡ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ಮತ್ತೊಂದು ಅಪ್ಡೇಟ್ ನೊಂದಿಗೆ ಚಿತ್ರತಂಡ ನಿಮ್ಮ ಮುಂದೆ ಹಾಜರಾಗಲಿದೆ.

Share This Article