ರಾವಣನ ಪಾತ್ರ ಮಾಡಿದ್ದ ಸೈಫ್ ಅಲಿಖಾನ್ ಗೆ ಅಪಘಾತ: ಆಸ್ಪತ್ರೆಗೆ ದಾಖಲು

Public TV
1 Min Read
saif ali khan

ಬಾಲಿವುಡ್ ನ ಖ್ಯಾತ ನಟ ಸೈಫ್ ಅಲಿಖಾನ್ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಇದೆ. ಸದ್ಯ ಅವರು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ಆಗಿದೆ.

saif ali khan

ಸೈಫ್ ಅವರ ಮೊಣಕಾಲಿಗೆ ಗಂಭೀರ ಗಾಯವಾಗಿ, ಭುಜದ ಮೂಳೆ ಕೂಡ ಮುರಿದಿದೆ ಎಂದು ಹೇಳಲಾಗುತ್ತಿದೆ. ಗಂಭೀರವಾಗಿಯೇ ಗಾಯವಾಗಿದ್ದರಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆಯಂತೆ. ಗಾಯಗೊಂಡಿದ್ದಕ್ಕೆ ಕಾರಣ ತಿಳಿದು ಬಂದಿಲ್ಲವಾದರೂ, ಪತ್ನಿ ಕರೀನಾ ಕಪೂರ್ ಸದ್ಯ ಆಸ್ಪತ್ರೆಯಲ್ಲಿ ಜೊತೆಯಲ್ಲೇ ಇದ್ದಾರೆ.

 

ಶೂಟಿಂಗ್ ಸ್ಥಳದಲ್ಲಿ ಇಂಥದ್ದೊಂದು ಗಾಯವಾಗಿದೆಯಾ ಅಥವಾ ಜಿಮ್ ನಲ್ಲಿ ಏನಾದರೂ ಹೊಡೆತ ಬಿದ್ದಿದೆಯಾ ಎನ್ನುವ ಪ್ರಶ್ನೆ ಎದುರಾಗಿದ್ದು, ಈ ಕುರಿತಂತೆ ಅವರ ಕುಟುಂಬವೇ ಪ್ರತಿಕ್ರಿಯೆ ನೀಡಬೇಕಿದೆ. ಈ ಹಿಂದೆ ರಾವಣನ ಪಾತ್ರ ಮಾಡಿದ್ದ ಸೈಫ್ ಅಲಿಖಾನ್ ಗೆ ರಾಮಮಂದಿರ ಉದ್ಘಾಟನೆ ದಿನವೇ ಅಪಘಾತವಾಗಿದ್ದು, ಕಾಕತಾಳೀಯ.

Share This Article