ದೊಡ್ಮನೆಯಲ್ಲಿ ಕಾರ್ತಿಕ್ ಮಹೇಶ್ (Karthik Mahesh) ಅವರು ಸ್ಟ್ರಾಂಗ್ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಕಾರ್ತಿಕ್ ಆಟದಲ್ಲಿ ಎಡವಿದ್ದಾರೆ. ಹಾಗಾಗಿಯೇ ವೀಕೆಂಡ್ ಪಂಚಾಯಿತಿಯಲ್ಲಿ ಕಾರ್ತಿಕ್ ಕುಗ್ಗಿದ್ದಾರಾ? ಎಂಬ ಪ್ರಶ್ನೆಯನ್ನು ಸುದೀಪ್ ಮನೆ ಮಂದಿಗೆ ಕೇಳಿದ್ದಾರೆ. ಕಾರ್ತಿಕ್ ಆಟಕ್ಕೆ ಸಂಗೀತಾ- ನಮ್ರತಾ (Namratha) ಹೌದು ಅವರು ಕುಗ್ಗಿದ್ದಾರೆ ಎಂದು ಟೀಕಿಸಿದ್ದಾರೆ. ಅದಕ್ಕೆ, ಕಾರ್ತಿಕ್ ಕೂಡ ಖಡಕ್ ಆಗಿ ಉತ್ತರಿಸಿದ್ದಾರೆ.
ಬಿಗ್ ಬಾಸ್ (Bigg Boss Kannada 10) ಆಟ ಶುರುವಾದಾಗ ಸಂಗೀತಾ (Sangeetha Sringeri) ಜೊತೆ ಕಾರ್ತಿಕ್ ಅವರು ಆಪ್ತವಾಗಿದ್ದರು. ಅನೇಕ ಟಾಸ್ಕ್‌ಗಳಲ್ಲಿ ಸಂಗೀತಾ-ಕಾರ್ತಿಕ್ ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತಿದ್ದರು. ಇಬ್ಬರ ನಡುವೆ ಆದ ಮನಸ್ತಾಪದ ಬಳಿಕ ಕಾರ್ತಿಕ್ ಅವರು ನಮ್ರತಾ ಜೊತೆ ಸ್ನೇಹ ಬೆಳೆಸಿದರು. ಈಗ ಆ ಸ್ನೇಹ ಕೂಡ ಅಂತ್ಯವಾಗಿದೆ. ಈ ವಿಚಾರದಲ್ಲಿ ಕಾರ್ತಿಕ್ ಅವರನ್ನು ಸಂಗೀತಾ ಮತ್ತು ನಮ್ರತಾ ಟೀಕಿಸಿದ್ದಾರೆ. ಲಾಭಕ್ಕಾಗಿ ನನ್ನ ಸ್ನೇಹ ಬಳಸಿಕೊಂಡರು ಎಂದು ನಮ್ರತಾ ನೇರವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:ನೀವಿಲ್ಲ ಅಂದ್ರೆ ಈ ಸೀಸನ್ ಅಪೂರ್ಣ- ಸಂಗೀತಾ, ವಿನಯ್‌ಗೆ ಕಿಚ್ಚನ ಚಪ್ಪಾಳೆ
ದೊಡ್ಮನೆಯಲ್ಲಿ ಒಬ್ಬರ ಜೊತೆ ಸ್ನೇಹ ಮೂಡುವುದು, ಬಳಿಕ ಆ ಸ್ನೇಹ ಅಂತ್ಯವಾಗುವುದು ಸಹಜ. ಆದರೂ ಅವರ ವರ್ತನೆಯನ್ನು ಸಂಗೀತಾ, ನಮ್ರತಾ ಮಾತಿನ ಮೂಲಕ ತಿವಿದಿದ್ದಾರೆ. ಕಾರ್ತಿಕ್‌ಗೆ ಒಂಟಿಯಾಗಿ ಇರಲು ಸಾಧ್ಯವಿಲ್ಲ ಎಂದು ಸಂಗೀತಾ ಮತ್ತು ನಮ್ರತಾ ಹೇಳಿದ್ದಾರೆ. ಒಂದು ವೇಳೆ ಒಂಟಿಯಾಗಿದ್ದರೆ ಯಾರ ಜೊತೆಯೂ ಸೇರುವುದಿಲ್ಲ ಎಂಬ ಕಾರಣ ನೀಡಿ ನಾಮಿನೇಟ್ ಮಾಡುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಜೊತೆಗೆ ಇದ್ದರೂ ಕಷ್ಟ, ಒಬ್ಬರೇ ಇದ್ದರೂ ಕಷ್ಟ ಎಂಬ ಪರಿಸ್ಥಿತಿ ಕಾರ್ತಿಕ್ ಅವರದ್ದಾಗಿದೆ ಎಂದಿದ್ದಾರೆ.
ನಾನು ಕುಗ್ಗಿದ್ದು ನಿಜ. ಆದರೆ ದೈಹಿಕವಾಗಿ ಅಲ್ಲ, ಮಾನಸಿಕವಾಗಿ ಅಷ್ಟೇ. ಆಟದಿಂದ ನಾನು ಡೈವರ್ಟ್ ಆಗಿಲ್ಲ. ಆದರೆ ಅವರ ಆಟ ಕುಗ್ಗಿದಾಗ ನಾನು ನಾಮಿನೇಟ್ ಮಾಡೋದು ಸಹಜ ಎಂದು ಕಾರ್ತಿಕ್ ಖಡಕ್ ಆಗಿ ಮಾತನಾಡಿದ್ದಾರೆ. ಸಂಗೀತಾ, ನಮ್ರತಾ, ತನಿಷಾ ಜೊತೆಗಿನ ಸ್ನೇಹ ಅಂತ್ಯವಾದ ಬಳಿಕ ಕಾರ್ತಿಕ್ ಅವರು ತುಕಾಲಿ ಸಂತೋಷ್- ವರ್ತೂರು ಸಂತೋಷ್ ಜೊತೆ ಹೆಚ್ಚು ಕಾಲ ಕಳೆಯಲು ಆರಂಭಿಸಿದ್ದಾರೆ.