ಡಿವೋರ್ಸ್‌ ವದಂತಿ ಬೆನ್ನಲ್ಲೇ ಸಾನಿಯಾಗೆ ಕೈಕೊಟ್ಟ ಶೋಯೆಬ್‌ ಮಲಿಕ್‌ – ನಟಿ ಸನಾ ಜಾವೇದ್‌ ಕೈಹಿಡಿದ ಪಾಕ್‌ ಕ್ರಿಕೆಟಿಗ!

Public TV
1 Min Read
Shoaib Malik

ಇಸ್ಲಾಮಾಬಾದ್‌: ಭಾರತೀಯ ಮಾಜಿ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ವದಂತಿ ಬೆನ್ನಲ್ಲೇ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಶೋಯೆಬ್‌ ಮಲಿಕ್‌, ಪಾಕ್‌ನ ನಟಿ ಸನಾ ಜಾವೇರದ್‌ ಅವರನ್ನು ಮದುವೆಯಾಗಿದ್ದಾರೆ.

ನಟಿ ಸನಾ ಜಾವೇದ್‌ ಅವರೊಂದಿಗೆ ವಿವಾಹವಾಗಿರುವ ಫೋಟೋಗಳನ್ನು ಸ್ವತಃ ಮಲಿಕ್‌ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿವೆ. ಇದನ್ನೂ ಓದಿ: ‘ಭೀಮ’ನ ಟೀಸರ್ ರಿಲೀಸ್: ವಿಜಯ್ ದುನಿಯಾದ ಮತ್ತೊಂದು ಖದರ್

ಕಳೆದ ಕೆಲ ದಿನಗಳಿಂದ ಶೋಯಬ್‌ ಮಲ್ಲಿಕ್‌ ಹಾಗೂ ಭಾರತದ ಟೆನ್ನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ಸುದ್ದಿಗಳು ಹರಿದಾಡುತ್ತಿತ್ತು. ಇದನ್ನೂ ಓದಿ: ರಶ್ಮಿಕಾ ಜೊತೆಗಿನ ನಿಶ್ಚಿತಾರ್ಥದ ಬಗ್ಗೆ ಮೌನಮುರಿದ ದೇವರಕೊಂಡ

ಹೌದು. ಸಾನಿಯಾ ಹಾಗೂ ಶೋಯೆಬ್ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಸಾನಿಯಾ ಭಾರತೀಯಳಾಗಿದ್ದು (Indian), ಶೋಯೇಬ್ ಪಾಕಿಸ್ತಾನಿ (Pakistani) ಎಂಬ ವಿಚಾರಕ್ಕೆ ವಿವಾದವೂ ಉಂಟಾಗಿತ್ತು. ಇದೀಗ ಅವರಿಬ್ಬರ ನಡುವೆ ಬಿರುಕು ಮೂಡಿರುವ ಬಗ್ಗೆ ವರದಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾನಿಯಾ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಗಟಿನ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಪುಷ್ಟಿ ನೀಡಿದೆ.

Shoaib Malik 2

ಶೋಯೆಬ್ ಮದುವೆಯಾದ ಸನಾ ಜಾವೇದ್ ಸಹ ವಿಚ್ಛೇದನ ಪಡೆದವರಾಗಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಖ್ಯಾತ ನಟಿಯರಲ್ಲಿ ಒಬ್ಬರಾದ ಸನಾ ಜಾವೇದ್ ಅವರು 2020 ರಲ್ಲಿ ಉಮೈರ್ ಜಸ್ವಾಲ್ ಎಂಬವರನ್ನ ವಿವಾಹವಾಗಿದ್ದರು. ಆದರೆ ಶೀಘ್ರದಲ್ಲೇ ದಂಪತಿ ವಿಚ್ಛೇದನ ಪಡೆದಿದ್ದಾರೆ ಎಂಬ ಸುದ್ದಿ ಬಂದಿತು. ಇದೀಗ ಶೋಯೆಬ್‌ ಸಾನಿಯಾ ಮಿರ್ಜಾ ಬಿಟ್ಟು ಇವರನ್ನು ಮೂರನೇ ಮದುವೆಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಪ್ರೇಮ್ ಮತ್ತು ಮಾನ್ವಿತಾ ಕಾಂಬಿನೇಷನ್ ಚಿತ್ರಕ್ಕೆ ಟೈಟಲ್ ಫಿಕ್ಸ್ 

Share This Article