ಪ್ರತಿಭಾವಂತ ಆಟಗಾರ ಪ್ರಖರ್ ಚತುರ್ವೇದಿಯನ್ನು ಅಭಿನಂದಿಸಿದ ಸಿಎಂ

Public TV
1 Min Read
PRAKHAR CHATURVEDI SIDDARAMAIAH

ಬೆಂಗಳೂರು: ಪ್ರತಿಭಾವಂತ ಆಟಗಾರ ಪ್ರಖರ್ ಚತುರ್ವೇದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ಭೇಟಿ ಮಾಡಿದರು.

ಕೂಚ್ ಬೆಹಾರ್ ಟ್ರೋಫಿ (Cooch Behar Trophy) ಕ್ರಿಕೆಟ್ ಪಂದ್ಯದಲ್ಲಿ 404 ರನ್ ಗಳಿಸಿ ದಾಖಲೆ ಬರೆದಿರುವ ಪ್ರಖರ್ ಚತುರ್ವೇದಿ (Prakhar Chaturvedi) ಅವರನ್ನು ಮುಖ್ಯಮಂತ್ರಿಗಳು ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿನಂದಿಸಿದರು.

ಪ್ರಖರ್ ಚತುರ್ವೇದಿಯವರು ಮುಂಬೈ ವಿರುದ್ಧ ನಡೆದ 2024ರ ಕೂಚ್ ಬೆಹಾರ್ ಟ್ರೋಫಿ ಅಂಡರ್ 19 ಟೂರ್ನಿಯ ಫೈನಲ್ ಪಂದ್ಯದಲ್ಲಿ ಅಜೇಯ 404 ರನ್‍ಗಳನ್ನು ಗಳಿಸಿ ದಾಖಲೆ ಬರೆದಿದ್ದಾರೆ. ಇವರ ಅಬ್ಬರದ ಬ್ಯಾಟಿಂಗ್‍ನಿಂದ ಕರ್ನಾಟಕ ತಂಡ ಟ್ರೋಫಿ ಗೆದ್ದಿದೆ. ಪಂದ್ಯದಲ್ಲಿ ಅಜೇಯ 404 ರನ್ ಗಳಿಸಿದ ಕರ್ನಾಟಕದ ಯುವ ಆಟಗಾರ ಪ್ರಖರ್ ಚತುರ್ವೇದಿ, ಕೂಚ್ ಬೆಹಾರ್ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಅವರ ದಾಖಲೆ ಮುರಿದಿದ್ದರು.

PRAKHAR CHATURVEDI SIDDARAMAIAH 1

ಈ ಕುರಿತು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಯುವರಾಜ್‌ ಸಿಂಗ್‌ ಅವರು ಪ್ರಖರ್‌ ಚತುರ್ವೇದಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತೀಯ ಕ್ರಿಕೆಟ್‌ ಸುರಕ್ಷಿತ ಕೈಗಳಲ್ಲಿದೆ ಎಂದು ನನಗೆ ಖಚಿತವಾಗಿದೆ. ಇದನ್ನು ನೋಡಲು ನನಗೆ ತುಂಬಾ ಖುಷಿಯಾಗುತ್ತಿದೆ. ದಾಖಲೆಗಳು ಇರುವುದೇ ಮುರಿಯಲಿಕ್ಕೆ. ಭಾರತೀಯ ಕ್ರಿಕೆಟ್‌ನ ಭವಿಷ್ಯ ಸುರಕ್ಷಿತ ಕೈಗಳಲ್ಲಿದೆ ಎಂಬುದನ್ನು ನೋಡಲು ತುಂಬಾ ಸಂತೋಷವಾಗುತ್ತಿದೆ ಎಂದಿದ್ದರು.

Share This Article