ವಿಕ್ರಮ್ ನಟನೆಯ ‘ತಂಗಲಾನ್’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

Public TV
1 Min Read
Tangalan

ಸ್ಟ್ ಲುಕ್ ನಿಂದಾಗಿ ಸಖತ್ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿರುವ ತಂಗಲಾನ್ (Tangalan) ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಇದೇ ಏಪ್ರಿಲ್ ನಲ್ಲಿ ತಮ್ಮ ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಚಿಯಾನ್ ವಿಕ್ರಮ್ (Vikram) ಹಾಗೂ ಪ.ರಂಜಿತ್  (Pa. Ranjith)ಕಾಂಬಿನೇಷನ್ ಚಿತ್ರವಿದು.

VIKRAM

ರಜನಿಕಾಂತ್ ಅಭಿನಯದ ಕಬಾಲಿ, ಕಾಲ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ಪ. ರಂಜಿತ್ ಈ ಬಾರಿ ಕೋಲಾರ ಗೋಲ್ಡ್ ಫೀಲ್ಡ್ ಹಿನ್ನೆಲೆಯ ಕಥೆಯನ್ನು ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

vikram actor

ಈ ಚಿತ್ರದಲ್ಲಿ ವಿಕ್ರಮ್ ಜೊತೆಗೆ ಪಾರ್ವತಿ, ಮಾಳವಿಕಾ ಮೋಹನನ್, ಪಶುಪತಿ, ಹರಿಕೃಷ್ಣನ್, ಅನ್ಬುದುರೈ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಈ ಚಿತ್ರಕ್ಕೆ ಎ. ಕಿಶೋರ್ ಛಾಯಾಗ್ರಹಣ ಮಾಡುತ್ತಿದ್ದು, ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಪ. ರಂಜಿತ್ ಅವರೇ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿದ್ದು ಅವರಿಗೆ ಬರವಣಿಗೆಯಲ್ಲಿ ತಮಿಳ್ ಪ್ರಭಾ ಸಹಾಯ ಮಾಡಿದ್ದಾರೆ. ಎಸ್.ಎಸ್. ಮೂರ್ತಿ ಕಲಾನಿರ್ದೇಶನ ಮತ್ತು ಆರ್.ಕೆ. ಸೆಲ್ವಾ ಅವರ ಸಂಕಲನವಿದೆ.

 

ಕೆಜಿಎಫ್ ಹಿನ್ನೆಲೆಯಲ್ಲಿ ಸಾಗುವ ಈ ಆಕ್ಷನ್ ಚಿತ್ರವನ್ನು ಸ್ಟುಡಿಯೋ ಗ್ರೀನ್ ಸಂಸ್ಥೆಯಡಿ ಕೆ.ಇ. ಜ್ನಾನವೇಲ್ ರಾಜ ನಿರ್ಮಿಸುತ್ತಿದ್ದಾರೆ. ದೊಡ್ಡ ಬಜೆಟ್ನಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ನಿರ್ಮಾಣದಲ್ಲಿ ಪ. ರಂಜಿತ್ ಅವರ ನೀಲಂ ಪ್ರೊಡಕ್ಷನ್ಸ್ ಸಹ ಕೈಜೋಡಿಸಿದೆ.

Share This Article