ನಿಮಗೆ ನಾಚಿಕೆ ಆಗಲ್ವಾ, ನಾನು ಆಗಿದ್ರೆ 1 ನಿಮಿಷದಲ್ಲಿ ರಾಜೀನಾಮೆ ಕೊಡ್ತಿದ್ದೆ: ಸುಧಾಕರ್ ವಾಗ್ದಾಳಿ

Public TV
1 Min Read
SUDHAKAR

ಚಿಕ್ಕಬಳ್ಳಾಪುರ: ನಿಮಗೆ ನಾಚಿಕೆ ಆಗಲ್ವಾ, ನಾನು ಆಗಿದ್ದರೆ 1 ನಿಮಿಷದಲ್ಲಿ ರಾಜೀನಾಮೆ ಕೊಡುತ್ತಿದ್ದೆ ಎಂದು ಮಾಜಿ ಸಚಿವ ಸುಧಾಕರ್ ಅವರು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹಾಗೂ ಸಚಿವ ಸುಧಾಕರ್ (K Sudhakar) ವಿರುದ್ಧ ವಾಗ್ದಾಳಿ ನಡೆಸಿದರು.

ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿಯಲ್ಲಿ ಕಾಯಕರ್ತರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವರು, ನಾವು ಮಾಡಿದ್ದಂತಹ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರದ್ದು ಮಾಡಿ ಕೋಲಾರಕ್ಕೆ ಮರಳಿ ಸೇರಿಸಿದ್ದೀರಿ. ನಮ್ಮ ಜಿಲ್ಲೆಯ ಹೈನುಗಾರರು ಏನು ಮಾಡಿದ್ರಿ…? ಜಿಲ್ಲೆಯ ಜನ ಕಾಂಗ್ರೆಸ್ ಎಂಎಲ್ ಎ ಗಳನ್ನ ಗೆಲ್ಲಿಸಲಿಲ್ವಾ..? ಚಿಕ್ಕಬಳ್ಳಾಪುರ, ಚಿಂತಾಮಣಿ, ಬಾಗೇಪಲ್ಲಿ ಇನ್ನೂ ಗೆದ್ದ ಮೇಲೆ ಗೌರಿಬಿದನೂರಿನವರು ಸಹ ಕಾಂಗ್ರೆಸ್ ಗೆ ಸೇರಿಕೊಂಡಿದ್ದಾರೆ. ಒಬ್ಬರು ಮಂತ್ರಿ ಸಹ ಆಗಿದ್ದಾರೆ. ಇವರು ಏನು ಮಾಡ್ತಿದ್ದಾರೆ.? ಸ್ವಾಭಿಮಾನ ಇಲ್ವಾ ಜಿಲ್ಲೆಯಲ್ಲಿ ಹುಟ್ಟಿಲ್ವಾ..? ನನ್ನಂತಹವನು ಆಗಿದ್ದರೆ 1 ನಿಮಿಷದಲ್ಲಿ ರಾಜೀನಾಮೆ ಕೊಡ್ತಿದ್ದೆ ಎಂದು ಕಿಡಿಕಾರಿದರು.

ಮೆಡಿಕಲ್ ಕಾಲೇಜು (Medical College) ಹೋದಾಗ ನಾನು ರಾಜೀನಾಮೆ ಕೊಡಲಿಲ್ವಾ?, ಅಧಿಕಾರಕ್ಕಾಗಿ ನಾನು ಅಂಟಿಕೊಂಡಿರಲಿಲ್ಲ. ನಾನು ಜನ ರೈತರ ಪರ ನಿಂತಿದ್ದೀನಿ ಅಂತ ಟಾಂಗ್ ನೀಡಿದರು. ಎಚ್ ಎನ್ ಕೆಸಿ ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಮಾಡಿ ಅಂತ ಆಗ್ರಹಿಸಿದೆ. ನೇರವಾಗಿ ಬಳಸಿದ್ರೆ ಆ ನೀರು ಮಾರಕ, ತಕ್ಷಣ ನೀವು ಹಾಲು ಒಕ್ಕೂಟ ಮರುಸ್ಥಾಪನೆ ಮಾಡಬೇಕು. ಮೂರನೇ ಹಂತದ ಶುದ್ಧೀಕರಣ ಆಗಬೇಕು. ಇವರು ನಾನು ಇದ್ದಾಗ ಆದ ಕಟ್ಟಡ ಅಷ್ಟೇ ಇದೆ, ಮೆಡಿಕಲ್ ಕಾಲೇಜು ಗೋಪುರ ಕೂಡ ಕಂಪ್ಲೀಟ್ ಮಾಡಿಲ್ಲ, ಆಸ್ಪತ್ರೆ ಮಾಡಲು ಯೋಗ್ಯತೆ ಇಲ್ಲ. ಇವರಿಗೆ ಏನ್ ಕಡಿದು ಕಟ್ಟೆ ಹಾಕಿದಂಗೆ ಕಾರ್ಯಕ್ರಮ ಮಾಡ್ತಾರೆ. ಮಕ್ಕಳ ಜೊತೆ ಮಾತಾಡಿಕೊಂಡು ಪೋಸ್ ಕೊಡ್ತಾರೆ. ನಾಚಿಕೆ ಅಗಲ್ವಾ..? ನಿಮ್ಮ ಕೊಡುಗೆ ಏನು..? ಅಂತ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚೀತಾ ಸಾವು; 10 ಕ್ಕೇರಿದ ಸಾವಿನ ಸಂಖ್ಯೆ

Share This Article