ಕಲಬುರಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಮನೆಗೆಲಸ, ಟಾಯ್ಲೆಟ್ ಕ್ಲಿನಿಂಗ್ – ಮುಖ್ಯಶಿಕ್ಷಕಿ ವಿರುದ್ಧ FIR

Public TV
2 Min Read
Teacher

ಕಲಬುರಗಿ: ಇಲ್ಲಿನ ಶಾಲೆಯೊಂದರ ಮುಖ್ಯಶಿಕ್ಷಕಿ ವಿದ್ಯಾರ್ಥಿಗಳಿಂದ (School Students) ಮನೆಗೆಲಸ ಹಾಗೂ ಶೌಚಾಲಯ ಶುಚಿಗೊಳಿಸುತ್ತಿದ್ದ ಆರೋಪ ಕೇಳಿಬಂದಿದ್ದು, ಶಾಲಾ ಮುಖ್ಯಶಿಕ್ಷಕಿ ವಿರುದ್ಧ FIR ದಾಖಲಾಗಿದೆ.

ಕಲಬುರಗಿಯ (Kalaburagi) ಮೌಲಾನ ಆಜಾದ್ ಮಾಡೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿಯೇ ಮುಖ್ಯಶಿಕ್ಷಕಿ ಜೋಹರಾ ಜಬೀನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ. ಈ ಸಂಬಂಧ ಇಲ್ಲಿನ ರೋಜಾ ಪೊಲೀಸ್ ಠಾಣೆಯಲ್ಲಿ (Roza Police Station) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೇಯರ್‌ ಚುನಾವಣೆ : ಮಾಲ್ಡೀವ್ಸ್‌ ಆಡಳಿತ ಪಕ್ಷಕ್ಕೆ ಹೀನಾಯ ಸೋಲು – ಭಾರತದ ಪರ ಪಕ್ಷಕ್ಕೆ ಭರ್ಜರಿ ಜಯ

police inspector transfer

ಏನಿದು ಘಟನೆ?
ಕಲಬುರಗಿ ಹೊರವಲಯದ ಸೋನಿಯಾ ಗಾಂಧಿ ಕ್ವಾಟರ್ಸ್ ಬಳಿಯಿರುವ ಶಾಲೆಯಲ್ಲಿ ಮುಖ್ಯಶಿಕ್ಷಕಿ ಶಾಲಾ ಮಕ್ಕಳಿಂದಲೇ ಶೌಚಾಲಯ ಶುಚಿತ್ವ, ಕಸಗುಡಿಸುವುದು ಹಾಗೂ ತನ್ನ ಮನೆಗೆಲಸ ಮಾಡಿಸುತ್ತಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ವಿದ್ಯಾರ್ಥಿಯೊಬ್ಬ ಗಂಭೀರ ಆರೋಪ ಮಾಡಿದ್ದ. ವಿದ್ಯಾರ್ಥಿ ಪೋಷಕರೊಬ್ಬರು ಈ ಬಗ್ಗೆ ಪ್ರಶ್ನೆ ಮಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅಕ್ರಮ ಕಾಮಗಾರಿ – ಲೋಕಾಯುಕ್ತಕ್ಕೆ ದೂರು ನೀಡಿದ ಗುತ್ತಿಗೆದಾರನಿಗೆ ಕೊಲೆ ಬೆದರಿಕೆ!

ವಿದ್ಯಾರ್ಥಿ ಪೋಷಕರಾದ ಮೊಹಮ್ಮದ್ ಜಮೀರ್, ಶಾಲೆಯ ಮುಖ್ಯಶಿಕ್ಷಕರು ಶಾಲೆ ಮತ್ತು ಮನೆ ಕೆಲಸಗಳಿಗೆ ನನ್ನ ಮಗನನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಶಿಕ್ಷಕಿ ಜೋಹಾರ ಜಬೀನ್ ಅವರ ಮನೆಯಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ನನ್ನ ಮಗನನ್ನು ಕೆಲಸಕ್ಕೆ ಬಳಸಿಕೊಂಡಿದ್ದರು. ಈ ವಿಷಯ ತಿಳಿದಾಗ ನಾನೇ ಖುದ್ದಾಗಿ ಶಾಲೆಗೆ ಹೋಗಿ ಮತ್ತೆ ರೀತಿ ಮಾಡದಂತೆ ಮನವಿ ಮಾಡಿದ್ದೆ. ಅದಾದರೂ ಹೆದರಿಸಿ, ಬೆದರಿಸಿ ನನ್ನ ಮಗನಿಂದ ಕೆಲಸ ಮಾಡಿಸಿಕೊಂಡಿದ್ದಾರೆ. ನನ್ನ ಮಗ ಶಾಲೆ ಮುಗಿಸಿ ಪ್ರತಿದಿನ ಮನೆಗೆ ತಡವಾಗಿ ಬರುತ್ತಿದ್ದ, ಇದರಿಂದ ಅನುಮಾನಗೊಂಡು ಮುಖ್ಯಶಿಕ್ಷಕಿ ಮನೆಗೆ ಹೋಗಿ ನೋಡಿದಾಗ ಅಲ್ಲಿ ಮಗ ಮನೆಗೆಲಸ ಮಾಡುತ್ತಿದ್ದದ್ದು ಕಂಡುಬಂದಿತು. ತಕ್ಷಣವೇ ವಿದ್ಯಾರ್ಥಿ ತಂದೆ ಜಮೀರ್ 112 ಪೊಲೀಸರಿಗೆ ಕರೆ ದೂರು ನೀಡಿದೆ.

ಸದ್ಯ ವಿದ್ಯಾರ್ಥಿ ಮತ್ತು ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ರೋಜಾ ಠಾಣೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಹಾಸನಕ್ಕುಂಟು ಶ್ರೀರಾಮನ ನಂಟು – ರಾವಣನ ಸಂಹರಿಸಿ ದೋಷ ನಿವಾರಣೆಗೆ ಇಲ್ಲಿಗೆ ಬಂದಿದ್ದನಂತೆ ಶ್ರೀರಾಮ

Share This Article