ಗುದ್ದಲಿ ಪೂಜೆ ನೆರವೇರಿಸಿದ ವಿನೋದ್ ರಾಜ್- 55 ಲಕ್ಷ ಮೊತ್ತದಲ್ಲಿ ಲೀಲಾವತಿ ಸ್ಮಾರಕ

Public TV
2 Min Read
vinod raj

ಹಿರಿಯ ನಟಿ ಲೀಲಾವತಿ (Leelavathi) ಕಳೆದ ವರ್ಷ ಡಿ.8ರಂದು ವಿಧಿವಶರಾದರು. ಈ ಬೆನ್ನಲ್ಲೇ ವಿನೋದ್ ರಾಜ್ (Vinod Raj) ಕುಟುಂಬ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಇಂದು (ಜ.14) ಲೀಲಾವತಿ ಸ್ಮಾರಕಕ್ಕೆ ವಿನೋದ್ ರಾಜ್ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.

vinod raj 1

ನೆಲಮಂಗಲದ ತೋಟ ಮನೆಯ ಬಳಿ ಲೀಲಾವತಿ ಸ್ಮಾರಕ ನಿರ್ಮಾಣಕ್ಕೆ ವಿನೋದ್ ರಾಜ್ ಚಾಲನೆ ನೀಡಿದ್ದಾರೆ. ಪೂಜೆಯ ಕಾರ್ಯದಲ್ಲಿ ವಿನೋದ್ ರಾಜ್, ಪತ್ನಿ ಅನು, ಪುತ್ರ ಯುವರಾಜ್ ಭಾಗಿಯಾಗಿದ್ದಾರೆ. ಸ್ಮಾರಕ ಚಾಲನೆಯ ಬಳಿಕ ವಿನೋದ್ ರಾಜ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಲೀಲಾವತಿ ಅವರ ಸ್ಮಾರಕ 55 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿದೆ. 120 ದಿನಗಳಲ್ಲಿ ಸ್ಮಾರಕ ಕೆಲಸ ಮುಗಿಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:‘ಶನಿ’ ಕಂಟಕ‌ ವರ್ತೂರು ಸಂತೋಷ್ ತಲೆಗೆ ಕಟ್ಟಿದ ಕಾರ್ತಿಕ್‌- ಚಳಿ ಬಿಡಿಸಿದ ಸುದೀಪ್

vinod raj

ತಾಯಿ ಅವರ ಸ್ಮಾರಕವನ್ನು ನನ್ನ ಆಸೆಯಂತೆ ನಿರ್ಮಿಸಲು ನಿರ್ಧರಿಸಿದ್ದೇನೆ. ಸುಮಾರು 55 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡ್ತಿದ್ದೇವೆ ಎಂದು ವಿನೋದ್ ಮಾತನಾಡಿದ್ದಾರೆ. ಅವರ ಮೊದಲ ಸಿನಿಮಾದಿಂದ ಕೊನೆಯ ಸಿನಿಮಾದ ವರೆಗೆ ಗ್ಯಾಲರಿಯನ್ನ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದೇವೆ. ಅಮ್ಮನವರ ಸಮಾಧಿ ಕೇವಲ ಸಮಾಧಿ ಅಲ್ಲ ಅದು ಒಂದು ಆಧ್ಯಾತ್ಮಿಕ ಕ್ಷೇತ್ರವನ್ನಾಗಿ ಮಾಡುತ್ತೇವೆ. ತಾಯಿಯ ಸ್ಮಾರಕಕ್ಕಾಗಿ ಸರ್ಕಾರದಿಂದ ಯಾವುದೇ ಅಪೇಕ್ಷೆ, ಹಣ ಪಡೆಯದೆ ನಾವೇ ಸಮಾಧಿ ಕಟ್ಟಲು ತೀರ್ಮಾನ ಮಾಡಿದ್ದೇವೆ ವಿನೋದ್ ರಾಜ್ ಮಾತನಾಡಿದ್ದಾರೆ.

ಈ ವೇಳೆ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಅವರು ಮಾತನಾಡಿ, ನಟಿ ಲೀಲಾವತಿ ಅವರು ಮಾಡಿರುವ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ಲೀಲಾವತಿ ಅವರು ಎಂದೆಂದಿಗೂ ತುಂಬಿದ ಕೊಡ. ಯಾವಾಗಲೂ ಸಿನಿಮಾಗಳಲ್ಲಿ ನೀತಿ ಪಾಠ ಇರಬೇಕು. ಇವತ್ತಿನ ದಿನಗಳ ಸಿನಿಮಾಗಳಲ್ಲಿ ಆ ಕೊರತೆ ಎದ್ದು ಕಾಣುತ್ತಿದೆ ಎಂದು ಮಾತನಾಡಿದ್ದಾರೆ. ನಾವು ಎಂದಿಗೂ ವಿನೋದ್ ರಾಜ್ ಜೊತೆ ಇರುತ್ತೇವೆ ಅವರು ಸ್ಮಾರಕ ಕೆಲಸ ಬೇಗ ಮುಗಿಸಲಿ ಎಂದು ಬೆಂಬಲ ಸೂಚಿಸಿದ್ದರು. ಬಳಿಕ ವಿನೋದ್ ರಾಜ್ ಅವರು ಸ್ಮಾರಕ ನಿರ್ಮಾಣಕ್ಕೆ ಸರ್ಕಾರದಿಂದ ದುಡ್ಡಿನ ಸಹಾಯ ಪಡೆದಿಲ್ಲ. ಅವರ ಸ್ವಂತ ದುಡ್ಡಲ್ಲಿ ಸ್ಮಾರಕ ನಿರ್ಮಾಣ ಮಾಡ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು.

Share This Article