ಮೈಸೂರು ಸ್ಯಾಂಡಲ್‌ ಸೋಪ್‌ ನಕಲಿ ಘಟಕದ ಮೇಲೆ ದಾಳಿ; 2 ಕೋಟಿ ಮೌಲ್ಯದ ಸಾಮಗ್ರಿ ವಶ

Public TV
2 Min Read
fake mysore sandal soap

– ಪ್ರಕರಣದಲ್ಲಿ ಇಬ್ಬರ ಬಂಧನ

ಹೈದರಾಬಾದ್‌: ಇಲ್ಲಿನ ಮೈಸೂರು ಸ್ಯಾಂಡಲ್‌ ಸೋಪ್‌ (Mysore Sandal Soap) ನಕಲಿ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿ 2 ಕೋಟಿ ರೂ. ಮೌಲ್ಯದ ನಕಲಿ ಸಾಮಗ್ರಿ ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಸಚಿವ ಎಂ.ಬಿ.ಪಾಟೀಲ್‌, ಹೈದರಾಬಾದ್ ಮಾರುಕಟ್ಟೆಗೆ ನಕಲಿ ಮೈಸೂರು ಸ್ಯಾಂಡಲ್ ಸೋಪ್ ಪೂರೈಕೆಯಾಗುತ್ತಿರುವ ಬಗೆಗೆ ಅನಾಮಧೇಯ ಕರೆ ಬಂತು. ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಂಸ್ಥೆಯ MDಯವರಿಗೆ ನಿರ್ದೇಶನ ನೀಡಿದ್ದೆ. ಅದರಂತೆ ಸಿಕಂದರಾಬಾದಿನಲ್ಲಿರುವ ನಮ್ಮ ಸಂಸ್ಥೆಯ ಅಧಿಕೃತ ಮಾರಾಟದ ಸಿಬ್ಬಂದಿ, ನಕಲಿಗಳ ಜಾಲವನ್ನು ಬೇಧಿಸಲು ತಂತ್ರ ರೂಪಿಸಿದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಂವಿಧಾನದ ಮೂಲಭೂತ ಹಕ್ಕುಗಳ ಭಾಗದಲ್ಲಿ ಶ್ರೀರಾಮ-ಲಕ್ಷ್ಮಣ, ಸೀತಾದೇವಿಯ ಚಿತ್ರಗಳಿವೆ: ಜಗದೀಪ್‌ ಧನಕರ್‌

m.b.patil tweet

ಪೊಲೀಸರೊಂದಿಗೆ ಭೇಟೆಯಾಡಿ 2 ಕೋಟಿ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಅಪರಾಧಿಗಳಿಗೆ ಕಾನೂನು ರೀತಿಯಲ್ಲಿ ಉಗ್ರ ಶಿಕ್ಷೆಯಾಗಲಿ. ಮೈಸೂರು ಸ್ಯಾಂಡಲ್‌ನ ಅಸಲಿ ಪರಿಮಳ ಎಲ್ಲೆಡೆ ಪಸರಿಸಲಿ ಎಂದು ಸಚಿವರು ಹೇಳಿದ್ದಾರೆ.

ಕರ್ನಾಟಕ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್)ನ ಮೈಸೂರು ಸ್ಯಾಂಡಲ್ ಸೋಪ್‌ನ ನಕಲಿ ಉತ್ಪನ್ನ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಶನಿವಾರ ಇಬ್ಬರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ಗೆ ಆಹ್ವಾನ

Mysore Sandal Soap 1

ಮಲಕಪೇಟೆ ಪೊಲೀಸರು ನಕಲಿ ಉತ್ಪನ್ನಗಳು ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳು ಸೇರಿದಂತೆ ಸುಮಾರು 2 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

150 ಗ್ರಾಂ ಸಾಬೂನು ಪ್ಯಾಕ್‌ಗಳ 1,800 ತುಂಡುಗಳನ್ನು ಹೊಂದಿರುವ 20 ಪೆಟ್ಟಿಗೆಗಳು, 75 ಗ್ರಾಂ ಸಾಬೂನಿನ 9,400 ತುಂಡುಗಳ 47 ರಟ್ಟಿನ ಪೆಟ್ಟಿಗೆಗಳು ಮತ್ತು 150 ಗ್ರಾಂ ಹಾಗೂ 75 ಗ್ರಾಂ ಸಾಬೂನುಗಳ 400 ಖಾಲಿ ಪ್ಯಾಕೇಜಿಂಗ್ ಬಾಕ್ಸ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: I.N.D.I.A ಮೈತ್ರಿಕೂಟದ ಜವಾಬ್ದಾರಿ ಮಲ್ಲಿಕಾರ್ಜುನ್‌ ಖರ್ಗೆ ಹೆಗಲಿಗೆ

ಆರೋಪಿ ರಾಕೇಶ್ ಜೈನ್ ಮತ್ತು ಮಹಾವೀರ್ ಜೈನ್ ವಿರುದ್ಧ ಹೈದರಾಬಾದ್‌ನ ಮಲಕ್‌ಪೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆಎಸ್‌ಡಿಎಲ್‌ ಅಧ್ಯಕ್ಷ, ಸಚಿವ ಎಂ.ಬಿ.ಪಾಟೀಲ್‌ ಅವರಿಗೆ ಅನಾಮಧೇಯ ಸುಳಿವು ದೊರೆತ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಲಾಗಿತ್ತು. ಹೈದರಾಬಾದ್‌ನಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸಾಬೂನುಗಳು ಚಲಾವಣೆಯಾಗುತ್ತಿರುವ ಬಗ್ಗೆ ಕರೆ ಸ್ವೀಕರಿಸಿದ ಸಚಿವ ಪಾಟೀಲ್, ಈ ಬಗ್ಗೆ ಪರಿಶೀಲಿಸುವಂತೆ ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್ ಅವರಿಗೆ ಸೂಚಿಸಿದ್ದರು.

ಕೆಎಸ್‌ಡಿಎಲ್ ತಂಡವು ಮಾರುಕಟ್ಟೆಯಲ್ಲಿ ನಕಲಿ ಸಾಬೂನು ಇರುವುದನ್ನು ದೃಢಪಡಿಸಿದ ನಂತರ, ಅದರ ಮೂಲವನ್ನು ಪತ್ತೆಹಚ್ಚಲು ಕಾರ್ಯಾಚರಣೆಯನ್ನು ನಡೆಸಿತು. ತಂಡವು ಮೊದಲು ಒಂದು ಲಕ್ಷ ರೂಪಾಯಿ ಮೌಲ್ಯದ ನಕಲಿ ಉತ್ಪನ್ನವನ್ನು ಖರೀದಿಸಿತು. ಅದನ್ನು ಪರಿಶೀಲಿಸಿದಾಗ ನಕಲಿ ಉತ್ಪನ್ನ ಎಂಬುದು ಗೊತ್ತಾಗಿ ಘಟಕದ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಅಯೋಧ್ಯೆ ಭೇಟಿಯಲ್ಲಿ ತಪ್ಪೇನಿದೆ?: ಸಿಎಂ ಹೇಳಿಕೆ ಸಮರ್ಥಿಸಿದ ಸಚಿವ ಕೆ.ಎನ್ ರಾಜಣ್ಣ

Share This Article