ಬಿಗ್‌ಬಾಸ್ ಮನೆ (Bigg Boss Kannada 10) ಫಿನಾಲೆಯ ಕ್ಷಣಗಣನೆಯಲ್ಲಿ ತೊಡಗಿದೆ. ಅದರ ನಡುವೆಯೇ ವಾರದ ಉತ್ತಮ ಮತ್ತು ಕಳಪೆ ಪಟ್ಟಕ್ಕಾಗಿ ವೋಟಿಂಗ್ ಕೂಡ ನಡೆದಿದೆ. ಅದರ ಝಲಕ್ ಹೇಗಿತ್ತು ಎನ್ನುವುದು ಬಿಡುಗಡೆ ಮಾಡಿರುವ ಜಿಯೋ ಸಿನಿಮಾ ಪ್ರೋಮೊದಲ್ಲಿ ಜಾಹೀರಾಗಿದೆ.
ಕಳಪೆ ಅನ್ನು ನಾನು ತುಕಾಲಿ ಸಂತೋಷ್ ಅವರಿಗೆ ಕೊಡುತ್ತೇನೆ ಎಂದು ಪ್ರತಾಪ್ (Drone Prathap) ಹೇಳಿದ್ದಾರೆ. ಅವರ ಹಾಗೆಯೇ ಮನೆಯ ಹಲವು ಸದಸ್ಯರು ತುಕಾಲಿ ಅವರ ಹೆಸರನ್ನೇ ಹೇಳಿರುವುದರಿಂದ ತುಕಾಲಿ ಅವರಿಗೆ ಜೈಲುಡುಗೆಯ ಉಡುಗೊರೆ ಸಿಕ್ಕಿದೆ. ಇದನ್ನೂ ಓದಿ:ಕನ್ನಡ ಚಿತ್ರವನ್ನು ನಿರ್ದೇಶನ ಮಾಡಿದ ದೇವದಾಸ್ ಕಾಪಿಕಾಡ್
ಆದರೆ ವೋಟಿಂಗ್ ನಂತರದಲ್ಲಿ ವರ್ತೂರು ಸಂತೋಷ್ ಮತ್ತು ಪ್ರತಾಪ್ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಇಂಥ ವೇದಿಕೆ ಸಿಕ್ಕಾಗ ಪ್ರೂವ್ ಮಾಡಿಕೊಳ್ಳಬೇಕು ಎಂದಿರುವ ವರ್ತೂರು, ನಿನ್ನನ್ನು ಯಾರೂ ನಂಬುವುದಿಲ್ಲ ಎಂದೂ ಪ್ರತಾಪ್‌ಗೆ ತಿವಿದಿದ್ದಾರೆ.
ಅಷ್ಟೇ ಅಲ್ಲ, ಇಲ್ಲಿಂದ ಹೊರಗೆ ಹೋದ ಮೇಲೆ ಇತಿಹಾಸವೇ ಸೃಷ್ಟಿಯಾಗೋದು ಎಂದೂ ವರ್ತೂರು ಹೇಳಿದ್ದಾರೆ. ಹಾಗಾದರೆ ವರ್ತೂರು ಈ ಮಾತು ಹೇಳಿದ್ದು ಬಿಗ್‌ಬಾಸ್ ಶೋ (Bigg Boss) ಬಗ್ಗೆಯಾ ಅಥವಾ ಜೈಲುಪಾಲಾದ ತುಕಾಲಿ ಸಂತೋಷ್ ಬಗ್ಗೆಯಾ? ಈ ವಾರದ ಉತ್ತಮ ಪಟ್ಟ ಯಾರಿಗೆ ಸಿಕ್ಕಿದೆ? ಯಾರು ಫಿನಾಲೆಗೆ ಟಿಕೆಟ್ ಪಡೆದುಕೊಂಡಿದ್ದಾರೆ? ಮುಂದಿನ ವಾರದ ಕ್ಯಾಪ್ಟನ್ ಯಾರಾಗಿರುತ್ತಾರೆ? ಎಪಿಸೋಡ್ ನೋಡಬೇಕಿದೆ.