ನಿರುದ್ಯೋಗ ಸಮಸ್ಯೆ ಬಗೆಹರಿಸ್ಬೇಕು, ಯುವಕ-ಯುವತಿಯರಿಗೆ ಆತ್ಮಸ್ಥೈರ್ಯ ಹೆಚ್ಚಿಸಬೇಕು: ಸಿಎಂ

Public TV
3 Min Read
SIDDARAMAIAH 1 1

ಶಿವಮೊಗ್ಗ: ಎರಡು ವರ್ಷದವರೆಗೆ ಭತ್ಯ ಕೊಡುತ್ತೇವೆ. ಸ್ಕಿಲ್ ಟ್ರೈನಿಂಗ್ ಸಹ ಕೊಡುತ್ತೇವೆ. ನಿರುದ್ಯೋಗ (Unemployment) ಸಮಸ್ಯೆ ಬಗೆಹರಿಸಬೇಕು. ಯುವಕ-ಯುವತಿಯರಿಗೆ ಆತ್ಮಸ್ಥೈರ್ಯ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah0 ಹೇಳಿದ್ದಾರೆ.

ಯುವನಿಧಿಗೆ (Yuvanidhi) ಚಾಲನೆ ಕೊಟ್ಟ ಬಳಿಕ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಇಂದು ಐತಿಹಾಸಿಕ ದಿನವಾಗಿದೆ. ಸುಮಾರು 1 ಲಕ್ಷಕ್ಕೂ ಹೆಚ್ಚು ಜನ ಇಲ್ಲಿ ಸೇರಿದ್ದಾರೆ. ನಿಮ್ಮೆಲ್ಲರ ಎದುರಿನಲ್ಲಿ ಯುವನಿಧಿಗೆ ಚಾಲನೆ ಕೊಡ್ತಿದ್ದೇವೆ. ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಿದ್ದೆವು. ಶಕ್ತಿ ಯೋಜನೆ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ಮಭಾಗ್ಯ, ಯುವನಿಧಿ ಎಲ್ಲಾ ಭರವಸೆ ನೀಡಿದ್ದೆವು ಎಂದು ಹೇಳಿದರು.

ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಆಹಾರ ಪದಾರ್ಥ ಬೆಲೆ ಗಗನಕ್ಕೇರಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತ ವರ್ಗಕ್ಕೆ ಆರ್ಥಿಕ ಶಕ್ತಿ ತುಂಬಬೇಕು. ಬೆಲೆ ಏರಿಕೆ ಸಂದರ್ಭದಲ್ಲಿ ಜೀವನ ಸಾಗಿಸೋದು ಕಷ್ಟವಾಗುತ್ತದೆ. ಅನೇಕ ಭರವಸೆ ಕೊಟ್ಟಿದ್ದೆವು. ಐದು ಗ್ಯಾರಂಟಿ ಜಾರಿಗೆ ತಂದೇ ತರುತ್ತೇವೆ ಎಂದಿದ್ದೆವು. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಯುವನಿಧಿ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

SIDDAAMAIAH YUVANIDHI

ಬಹಳ ಜನ ಯುವನಿಧಿ ಏಕೆ ಜಾರಿಗೆ ತಂದಿಲ್ಲ ಅಂತಿದ್ದರು. ನಿರುದ್ಯೋಗಿ ಭತ್ಯೆ ಕೊಡುವ ಭರವಸೆ ನೀಡಿದ್ದೆವು. ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಗ್ಯಾರಂಟಿ ಯೋಜನೆಯ ಜಾರಿ ಬಗ್ಗೆ ಭರವಸೆ ಕೊಟ್ಟಿದ್ದೆವು. ಸಮಾಜದಲ್ಲಿ 100ಕ್ಕೆ 50ರಷ್ಟು ಮಹಿಳೆಯರಿದ್ದಾರೆ. ಮಹಿಳೆಯರಿಗೆ ಬಸ್‍ನಲ್ಲಿ ಉಚಿತ ಪ್ರಯಾಣ ಸೌಲಭ್ಯ ಕೊಟ್ಟಿದ್ದು ನಮ್ಮ ಸರ್ಕಾರ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. 1 ಕೋಟಿ 65 ಲಕ್ಷ ಕುಟುಂಬ ಗೃಹ ಜ್ಯೋತಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.

ಅನ್ನಭಾಗ್ಯ ಯೋಜನೆಯಲ್ಲಿ (Annabhagya Scheme) 10 ಕೆಜಿ ಅಕ್ಕಿ ಕೊಡ್ತೀವಿ ಅಂದಿದ್ದೆವು. ಅಕ್ಕಿ ಸಿಗಲಿಲ್ಲ, ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಅದರ ಬದಲಿಗೆ ಬಿಪಿಎಲ್ ಕಾರ್ಡ್ ನವರಿಗೆ 170 ರೂಪಾಯಿ ಹಣ ಕೊಡ್ತಿದ್ದೇವೆ. 1 ಕೋಟಿ 18 ಲಕ್ಷ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ಕೊಡ್ತಿದ್ದೇವೆ. ಎರಡು ವರ್ಷದವರೆಗೆ ಭತ್ಯ ಕೊಡುತ್ತೇವೆ. ಸ್ಕಿಲ್ ಟ್ರೈನಿಂಗ್ ಸಹ ಕೊಡುತ್ತೇವೆ. ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು. ಯುವಕ-ಯುವತಿಯರಿಗೆ ಆತ್ಮಸ್ಥೆರ್ಯ ಹೆಚ್ಚಿಸಬೇಕು ಎಂದು ಹೇಳಿದರು.

SIDDARAMAIAH.1png

ವಿವೇಕಾನಂದ (Vivekananda) ಅವರ ಜಯಂತಿ ದಿನವೇ ಯುವನಿಧಿ ಕಾರ್ಯಕ್ರಮ ಚಾಲನೆ ಕೊಡಬೇಕು ಅಂತಾ ಚಾಲನೆ ಕೊಟ್ಟಿದ್ದೇವೆ. 70 ಸಾವಿರ ಮಂದಿ ನೋಂದಾಯಿಸಿಕೊಂಡಿದ್ದಾರೆ. ನೋಂದಾಯಿಸಿಕೊಂಡವರಿಗೆ ಸರ್ಕಾರ ಎರಡು ವರ್ಷದ ಅವಧಿಗೆ ಮಾಸಾಶನ ಕೊಡುತ್ತೇವೆ. ಯುವಕರಿಗೆ ಎರಡು ವರ್ಷದೊಳಗೆ ಕೆಲಸ ಸಿಕ್ಕರೆ ಈ ಯೋಜನೆ ನಿಲ್ಲಿಸುತ್ತೇವೆ. ವಿವೇಕಾನಂದರು ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಅಂದ್ರು. ಯಾವ ಸಮಾಜ ಹಸಿದವರಿಗೆ ಅನ್ನ ಕೊಡಲ್ಲ ಆ ಸಮಾಜದಲ್ಲಿ, ಧರ್ಮದಲ್ಲಿ ನಂಬಿಕೆ ಇಲ್ಲ. ವಿವೇಕಾನಂದರು ಈ ಮಾತನ್ನು ಹೇಳಿದ್ದರು. ರಾಜೀವ್ ಗಾಂಧಿ ಅವರು ವಿವೇಕಾನಂದ ಜಯಂತಿ ಆರಂಭಿಸಿದ್ದು, ವಿವೇಕಾನಂದರು ಯುವಕ ಯುವತಿಯರ ಮೇಲೆ ಅಪಾರವಾದ ನಂಬಿಕೆ ಇಟ್ಟುಕೊಂಡಿದ್ದರು. ನಿರುದ್ಯೋಗ ಬೆಳೆಯುತ್ತಿದೆ. 100 ಕ್ಕೆ 10.5 ನಿರುದ್ಯೋಗ ಬೆಳೆದಿದೆ. 5.5 ರಿಂದ 10.5 ಕ್ಕೆ ನಿರುದ್ಯೋಗ ಏರಿಕೆ ಆಗ್ತಿದೆ. ರಾಜ್ಯದ 1 ಕೋಟಿ 50 ಲಕ್ಷ ಕುಟುಂಬಗಳು ಸರ್ಕಾರದಿಂದ ಪ್ರತಿ ತಿಂಗಳು 5-6 ಸಾವಿರ ರೂ ಹಣ ಪಡೆಯುತ್ತಿವೆ ಎಂದು ತಿಳಿಸಿದರು.

ಆರ್ಥಿಕ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಿದಾಗ ಮಾತ್ರ ದೇಶ ಅಭಿವೃದ್ಧಿ ಆಗ್ತದೆ ಅಂತಾ ಅಂಬೇಡ್ಕರ್ ಹೇಳಿದ್ರು. ಅದರಲ್ಲಿ ನಂಬಿಕೆ ಇಟ್ಟುಕೊಂಡಿರುವವರು ನಾವು. ಸಾಮಾಜಿಕ ಆರ್ಥಿಕ ಶಕ್ತಿ ಬಲಗೊಳ್ಳಬೇಕು. ಸರ್ವ ಜನಾಂಗದ ಶಾಂತಿಯ ತೋಟ ಈಡಿ ರಾಜ್ಯದಲ್ಲಿ, ದೇಶದಲ್ಲಿ ನಿರ್ಮಾಣ ಆಗಬೇಕು. ಆ ಕಾರ್ಯ ಈ ಜಿಲ್ಲೆಯಿಂದಲೇ ಆಗಲಿ. ಈ ಫ್ರೀಡಂ ಪಾರ್ಕಿಗೆ ಅಲ್ಲಮ ಪ್ರಭು ಹೆಸರು ಇಡಬೇಕು ಅಂತಾ ಮಧು ಬಂಗಾರಪ್ಪ ಹೇಳಿದ್ದಾರೆ. ಚನ್ನಬಸಪ್ಪ ಅವರೇ ಅಲ್ಲಮ ಪ್ರಭು ನಿಮ್ಮ ಜಿಲ್ಲೆಯವರು, 12 ನೇ ಶತಮಾನದವರು. ಅಲ್ಲಮ ಪ್ರಭು ಹೆಸರಿಡೋದು ಸೂಕ್ತ ಅಂತಾ ನನಗೆ ಅನಿಸುತ್ತದೆ. ಭದ್ರಾವತಿ ಎಂಪಿಎಂ ಕಾರ್ಖಾನೆ ಬಗ್ಗೆ ಇನ್ನೊಂದು ದಿನ ಮಾತನಾಡ್ತೇನೆ. ಎಂಪಿಎಂ ಪರ ನಾನು ಯಾವಾಗಲು ಇರುತ್ತೇನೆ.

Share This Article