ಶಿವಮೊಗ್ಗ: ಜನವರಿ 22 ನಂತರ ನಾನು ಕೂಡ ಅಯೋಧ್ಯೆಗೆ (Ayodhya Ram Mandir) ಹೋಗುತ್ತೇನೆ. ನಮ್ಮ ಕಾರ್ಯಕರ್ತರು ಕೂಡ ದೇವಸ್ಥಾನಕ್ಕೆ ಹೋಗ್ತಾರೆ. ಬಿಜೆಪಿಯ (BJP) ರಾಜಕೀಯ ವಿರೋಧ ಹೊರತು ರಾಮನ ವಿರೋಧಿಗಳಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಶ್ರೀರಾಮನಚಂದ್ರನ ವಿರೋಧಿಗಳಲ್ಲ. ನಾವು ಬಿಜೆಪಿ (BJP) ರಾಜಕಾರಣಕ್ಕೆ ಮಾತ್ರ ವಿರೋಧ. ಶ್ರೀರಾಮನ ಭಕ್ತರು ನಾವು. ಆದರೆ ಇವರು ಶ್ರೀರಾಮನ ರಾಜಕೀಯ ಮಾಡಲು ಹೋಗುತ್ತಿದ್ದಾರೆ. ಅದರ ವಿರುದ್ಧವೇ ಹೊರತು ಶ್ರೀರಾಮನ ವಿರೋಧ ಮಾಡುತ್ತಿಲ್ಲ ಎಂದರು.
ಐದನೇ ಗ್ಯಾರೆಂಟಿ ಯೋಜನೆಯನ್ನು ಜಾರಗೊಳಿಸುತ್ತಿದ್ದೇವೆ. ಮತಕ್ಕಾಗಿ ಮಾಡಿದ ಕಾರ್ಯಕ್ರಮ ಇದಲ್ಲ. ಯುವಜನರ ಅನುಕೂಲಕ್ಕಾಗಿ ಮಾಡಿದ ಕಾರ್ಯಕ್ರಮ. ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ 5ನೇ ಗ್ಯಾರಂಟಿ ಯೋಜನೆ ಜಾರಿ ತಂದಿದ್ದೇವೆ. ಕುಮಾರಸ್ವಾಮಿಯೆಂದರೆ ಸುಳ್ಳು, ಸುಳ್ಳೆಂದರೆ ಕುಮಾರಸ್ವಾಮಿ. ಅವರ ಬಗ್ಗೆ ಹೆಚ್ಚು ಮಾತಾನಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೌನವಾಗಿರಲು ಸಾಧ್ಯವಿಲ್ಲ, ರೂಪಾ ಕ್ಷಮೆ ಕೇಳಬೇಕು- ಸುಪ್ರೀಂನಲ್ಲಿ ವಿಚಾರಣೆಯಲ್ಲಿ ಸಿಂಧೂರಿ ಬಿಗಿಪಟ್ಟು
ಐದನೇ ಗ್ಯಾರಂಟಿ ಯುವನಿಧಿ ಪ್ರಕಾರ, ನಿರುದ್ಯೋಗ ಯುವಕರಿಗೆ ಹಾಗೂ ಪದವೀಧರ ಯುವಕರಿಗೆ 3 ಸಾವಿರ ಹಣ ಕೊಡ್ತೀವಿ. ಎರಡು ವರ್ಷದವರೆಗೂ ಹಣ ಕೊಡ್ತೀವಿ. ಯುವಕರಿಗೆ ಉದ್ಯೋಗ ತರಬೇತಿ ಕೂಡ ನೀಡ್ತೀವಿ. ಗ್ಯಾರಂಟಿ ಕೊಡುತ್ತಿರುವುದು ಅವರಿಗೆ ಹೊಟ್ಟೆ ಉರಿ ಆಗ್ತೀದೆ. ಹಾಗಾಗಿ ಬಿಜೆಪಿ ಯವರಿಗೆ ಹೊಟ್ಟೆ ಉರಿ ಶುರುವಾಗಿದೆ. 130 ಕೋಟಿ ಮಹಿಳೆಯರು ಉಚಿತವಾಗಿ ಸಂಚಾರ ಮಾಡಿದ್ದಾರೆ. ಫ್ರೀ ಆಗಿ ವಿದ್ಯುತ್ ಕೊಡ್ತಾ ಇದ್ದೀವಿ. 1 ಕೋಟಿ 58 ಲಕ್ಷ ಜನರಿಗೆ ಪ್ರೀ ಆಗಿ ವಿದ್ಯುತ್ ಕೊಡ್ತಾ ಇದ್ದೀವಿ. ನಾವು ಗ್ಯಾರಂಟಿ ಯೋಜನೆ ಗಳು ಚುನಾವಣೆಗಾಗಿ ಮಾಡಿಲ್ಲ. ಇದು ಜನರಿಗಾಗಿ ಮಾಡಿರುವುದು. ಒಂದು ಕುಟುಂಬಕ್ಕೆ ನಾಲ್ಕರಿಂದ ಐದು ಸಾವಿರ ಹಣ ಸಿಗ್ತಾ ಇದೆ ಎಂದರು.