ಬಿಗ್ ಬಾಸ್ (Bigg Boss Kannada) ಮನೆ ಅಚ್ಚರಿಗೆ ಕಾರಣವಾಗಿದೆ. ಫಿನಾಲೆಗೆ ಹೋಗೋಕೆ ಯಾರು ಅರ್ಹರು ಎನ್ನುವ ಟಾಸ್ಕ್ ವಿಚಾರವಾಗಿ ಡ್ರೋನ್ ಪ್ರತಾಪ್ (Drone Pratap) ಮತ್ತು ವಿನಯ್ (Vinay) ನಡುವೆ ಕೋಲಾಹಲವೇ ನಡೆದಿತ್ತು. ಬಿಗ್ ಬಾಸ್ ಮನೆಯಲ್ಲಿ ಜಗಳ ಕಾಮನ್ ಆಗಿದ್ದರೂ, ಈ ಬಾರಿಯ ಜಗಳ ನೋಡುಗರಿಗೂ ಅಸಹ್ಯ ಮೂಡಿಸಿತ್ತು. ಡ್ರೋನ್ ಪ್ರತಾಪ್ ಅವರಿಗೆ ವಿನಯ್ ಕೊಳಕು ಭಾಷೆಯಲ್ಲಿ ಬೈದಿದ್ದರು. ಆಡಬಾರದ ಮಾತುಗಳನ್ನು ಆಡಿದ್ದರು. ಹಾಗಾಗಿ ಮನೆಮಂದಿಯಲ್ಲ ವಿನಯ್ ಮೇಲೆ ಬೇಸರಿಸಿಕೊಂಡಿದ್ದರು.
ಈವರೆಗೂ ಎಲಿಮಿನೇಟ್ ಆದವರಲ್ಲಿ ವಿನಯ್ ಗುಂಪಿನವರೇ ಹೆಚ್ಚಿದ್ದಾರೆ. ಇದನ್ನು ನೋಟಿಸ್ ಮಾಡಿದ್ದ ಪ್ರತಾಪ್, ‘ವಿನಯ್ ಅವರು ತಮ್ಮ ಸ್ನೇಹಿತರ ತಪ್ಪನ್ನು ತಿದ್ದಲು ಹೋಗಲಿಲ್ಲ. ಈ ಕಾರಣದಿಂದಾಗಿಯೇ ಅವರು ಮನೆಯಿಂದ ಆಚೆ ಹೋಗಬೇಕಾಯಿತು’ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಈ ಮಾತು ವಿನಯ್ ಅವರಿಗೆ ಸಾಕಷ್ಟು ಕೋಪ ತರಿಸಿತ್ತು. ಆ ಕೋಪ ಹೇಗಿತ್ತು ಅಂದರೆ, ತಮ್ಮ ಮುಂದೆ ಮೂವರು ಹುಡುಗಿಯರು ಇದ್ದಾರೆ, ಈ ಶೋ ಅನ್ನು ಕೋಟ್ಯಂತರ ಜನರು ವೀಕ್ಷಿಸ್ತಾರೆ ಎನ್ನೋದನ್ನು ಮರೆತು ಸೊಂಟದ ಕೆಳಗಿನ ಪದಗಳನ್ನು ಬಳಸಿದ್ದರು.
ಹೌದು, ವಿನಯ್ ಅವರಿಗೆ ಕೋಪ ಬಂದರೆ, ನಾಲಿಗೆಯ ಮೇಲೆ ಹಿಡಿತವಿರುವುದಿಲ್ಲ. ಹಾಗಾಗಿ ಬಿಗ್ ಬಾಸ್ ಮನೆಯ ಬಹುತೇಕ ಸದಸ್ಯರನ್ನು ಅವರು ನಿಂದಿಸಿದ್ದಾರೆ. ಕೂಗಾಡಿ ಮನೆಯ ವಾತಾವರಣವನ್ನೇ ಹಾಳು ಮಾಡಿದ್ದಾರೆ. ಇವತ್ತು ದೋಸ್ತ್ ಅಂತ ಯಾರ ಹೆಗಲ ಮೇಲೆ ಕೈ ಹಾಕಿದ್ದರೋ, ಅವರನ್ನು ದುಸ್ಮನ್ ಅಂತಾನೂ ಕರೆದಿದ್ದಾರೆ. ತಪ್ಪಿನ ಅರಿವಾದ ನಂತರ ಮತ್ತೆ ಸ್ಸಾರಿ ಕೇಳಿದ್ದಾರೆ. ಡ್ರೋನ್ ಪ್ರತಾಪ್ ವಿಷಯದಲ್ಲೂ ಅದೇ ಆಗಿದೆ. ತಾನು ಮಾತನಾಡಿದ್ದು ತಪ್ಪು ಅಂತ ಅನಿಸಿ, ಡ್ರೋನ್ ಬಳಿ ಬಂದು ಕ್ಷಮೆ ಕೇಳಿದ್ದಾರೆ.
ನೀನು ಫಿನಾಲೆ ವೇದಿಕೆಯ ಮೇಲೆ ಇರಬೇಕು ಅಂತ ನನಗೂ ಆಸೆ. ಅವತ್ತು ಕೋಪದಲ್ಲಿ ಬೈದೆ. ನನಗೆ ಕೋಪ ಬಂದರೆ ಏನು ಮಾಡ್ತೀನಿ ಅಂತ ಗೊತ್ತೇ ಇರಲ್ಲ. ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಇರಲಿ ಎಂದು ವಿನಯ್ ಮಾತನಾಡಿದ್ದಾರೆ. ಅಷ್ಟೇ ಪ್ರೀತಿಯಿಂದ ಡ್ರೋನ್ ಕೂಡ ಕ್ಷಮೆಯನ್ನು ಒಪ್ಪಿದ್ದಾರೆ. ಒಳ್ಳೆಯದಾಗಲಿ, ಬಿಗ್ ಬಾಸ್ ಗೆಲ್ಲಲಿ ಎಂದು ಹಾರೈಸಿದ್ದಾರೆ.