ಮುಂದಿನ 5 ವರ್ಷಗಳಲ್ಲಿ ಗುಜುರಾತ್‌ನಲ್ಲಿ 2 ಲಕ್ಷ ಕೋಟಿ ಹೂಡಿಕೆ, 1 ಲಕ್ಷ ಉದ್ಯೋಗ ಸೃಷ್ಠಿ – ಗೌತಮ್ ಅದಾನಿ ಘೋಷಣೆ

Public TV
1 Min Read
Adani

ಅಹಮದಬಾದ್: ಗುಜರಾತ್‌ನಲ್ಲಿ (Gujarat) ಮುಂದಿನ 5 ವರ್ಷಗಳಲ್ಲಿ ಹಸಿರು ಇಂಧನ ಮತ್ತು ನವೀಕರಿಸಬಹುದಾದ ವಲಯಗಳಲ್ಲಿ 2 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಯೋಜನೆಯನ್ನು ಅದಾನಿ ಗ್ರೂಪ್ (Adani Group) ಬುಧವಾರ ಬಹಿರಂಗಪಡಿಸಿದೆ. ವೈಬ್ರೆಂಟ್ ಗುಜರಾತ್ ಶೃಂಗಸಭೆ 2024 ರಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಈ ಘೋಷಣೆ ಮಾಡಿದ್ದಾರೆ.

Adani 2

ಶೃಂಗಸಭೆಯಲ್ಲಿ ಮಾತನಾಡಿದ ಗೌತಮ್ ಅದಾನಿ (Gautam Adani), ಸ್ವಚ್ಛ ಮತ್ತು ಹೆಚ್ಚು ಸುಸ್ಥಿರ ಇಂಧನ ಭವಿಷ್ಯದ ಭಾರತದ ಪರಿವರ್ತನೆಯಲ್ಲಿ ಪ್ರಮುಖ ಭಾಗವಾಗಿ ಇರಿಸುವ ಮಹತ್ವಾಕಾಂಕ್ಷೆಯ ಹೂಡಿಕೆ ತಂತ್ರವನ್ನು ವಿವರಿಸಿದರು. ನಾವು ಆತ್ಮನಿರ್ಭರ ಭಾರತಕ್ಕಾಗಿ ಗ್ರೀನ್ ಎನರ್ಜಿ ಪೂರೈಕೆ ಸರಪಳಿಯನ್ನು ವಿಸ್ತರಿಸುತ್ತಿದ್ದೇವೆ. ಅತಿದೊಡ್ಡ ನವೀಕರಿಸಬಹುದಾದ ಇಂಧನ ವ್ಯವಸ್ಥೆಯನ್ನು ರಚಿಸುತ್ತಿದ್ದೇವೆ, ಮುಂದಿನ 5 ವರ್ಷಗಳಲ್ಲಿ 2 ಲಕ್ಷ ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಲಿದೆ ಎಂದು ಹೇಳಿದ್ದರು.

gautam adani

ಈ ಹೂಡಿಕೆಯು ಆವಿಷ್ಕಾರಗಳನ್ನು ಹೆಚ್ಚಿಸಲು, ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ಗುಜರಾತ್‌ನಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದ ಬೆಳವಣಿಗೆಗೆ ಗಮನಾರ್ಹವಾಗಿ ಕೊಡುಗೆ ನೀಡಲು ನಾವು ಸಿದ್ಧವಾಗಿದೆ. ಈ ಹೂಡಿಕೆಯು ನೇರವಾಗಿ ಮತ್ತು ಪರೋಕ್ಷವಾಗಿ 1 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಗೌತಮ್ ಅದಾನಿ ಹೇಳಿದರು. ಇದನ್ನೂ ಓದಿ: ವಿಧಾನಸೌಧದ ಮುಂದೆ ಹೈಡ್ರಾಮ; ಸೀಮೆ ಎಣ್ಣೆ ಸುರಿದುಕೊಂಡು ಮುಸ್ಲಿಂ ಕುಟುಂಬ ಆತ್ಮಹತ್ಯೆಗೆ ಯತ್ನ

ವೈಬ್ರಂಟ್ ಗುಜರಾತ್ ಶೃಂಗಸಭೆಯ ಕುರಿತು ಮಾತನಾಡಿದ ಅದಾನಿ, ವೈಬ್ರಂಟ್ ಗುಜರಾತ್ ಪಿಎಂ ಮೋದಿ ಅವರ ಅಸಾಧಾರಣ ದೃಷ್ಟಿಕೋನದ ಅದ್ಭುತ ಅಭಿವ್ಯಕ್ತಿಯಾಗಿದೆ. ನಮ್ಮ ಎಲ್ಲಾ ರಾಜ್ಯಗಳು ಭಾರತದ ಕೈಗಾರಿಕಾ ಭೂದೃಶ್ಯವನ್ನು ಮೂಲಭೂತವಾಗಿ ಮರುರೂಪಿಸಲು ಪೈಪೋಟಿ ಮತ್ತು ಸಹಕಾರದೊಂದಿಗೆ ಮುನ್ನಡೆಯುತ್ತಿರುವ ಚಳುವಳಿ ಎಂದು ಹೇಳಿದರು. ಇದನ್ನೂ ಓದಿ: ಪುತ್ರನ ಹತ್ಯೆಗೈದ ಬೆಂಗ್ಳೂರು CEO ಪ್ರಕರಣ- ತಂದೆಯಿಂದ ಮಗುವಿನ ಅಂತ್ಯಸಂಸ್ಕಾರ 

Share This Article