ಬಿಗ್ ಬಾಸ್ ಮನೆಯ (Bigg Boss Kannada 10) ಆಟ ಇನ್ನೂ 2 ವಾರಗಳ ಕಾಲ ಮುಂದೂಡಲಾಗಿದೆ. ಕಳೆದ ವಾರಾಂತ್ಯ ಮೈಕಲ್ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ. ಬಿಗ್ ಬಾಸ್‌ನಿಂದ ಹೊರಬರುತ್ತಿದ್ದಂತೆ ಮೈಕಲ್ ತಮ್ಮ ಸ್ನೇಹಿತರಾದ ನೀತು ವನಜಾಕ್ಷಿ ಮತ್ತು ಪವಿ ಪೂವಪ್ಪ ಅವರನ್ನು ಭೇಟಿಯಾಗಿದ್ದಾರೆ.
ದೊಡ್ಮನೆ ಆಟ 90 ದಿನಗಳನ್ನು ಪೂರೈಸಿ ಹೊರಬರುತ್ತಿದ್ದಂತೆ ಮೈಕಲ್ ಅವರು ಪವಿ- ನೀತುರನ್ನು ಭೇಟಿಯಾಗಿ ಕೆಲ ಕಾಲ ಸಮಯ ಕಳೆದಿದ್ದಾರೆ. ಈ ಕುರಿತ ಫೋಟೋವನ್ನು ಮೈಕಲ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಬೆನ್ನಲ್ಲೇ ಇಶಾನಿ ಎಲ್ಲಿ? ಅವರನ್ನು ಭೇಟಿ ಮಾಡಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ಸ್ಟೈಲೀಶ್ ಆಗಿ ಫೋಟೋಶೂಟ್‌ನಲ್ಲಿ ಕಂಗೊಳಿಸಿದ ಸಾನ್ಯ ಅಯ್ಯರ್
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಈಶಾನಿ ತನ್ನ ಗರ್ಲ್‌ಫ್ರೆಂಡ್ ಎಂದು ಅಫಿಷಿಯಲ್ ಆಗಿ ಮೈಕಲ್ ಹೇಳಿದ್ದರು. ಇಶಾನಿ ಕೂಡ ಇದಕ್ಕೆ ಒಪ್ಪಿಗೆ ನೀಡಿದ್ದರು. ಇಬ್ಬರ ಲವ್ ಸ್ಟೋರಿ ಈ ಸೀಸನ್‌ನಲ್ಲಿ ಹೆಚ್ಚು ಹೈಲೆಟ್ ಆಗಿತ್ತು. ಹಾಗಾಗಿಯೇ ಪವಿ, ನೀತುರನ್ನು ಭೇಟಿಯಾಗಿದ್ದೀರಾ ಆದರೆ ಇಶಾನಿ ಎಲ್ಲಿ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ನೆಟ್ಟಿಗರು ಮೈಕಲ್ ಮುಂದಿಟ್ಟಿದ್ದಾರೆ.
ಕನ್ನಡ ಬರದ ಮೈಕಲ್ ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಮಾಡೆಲ್ ಆಗಿ ಗುರುತಿಸಿಕೊಂಡಿದ್ದ ಮೈಕಲ್ ಅಜಯ್ ದೊಡ್ಮನೆಗೆ ಕಾಲಿಟ್ಟ ಮೇಲೆಯೇ ಕನ್ನಡ ಕಲಿತಿದ್ದರು. ಕನ್ನಡದ ಮಣ್ಣಿನ ಮಗ ಎಂದೇ ಮೈಕಲ್ ಹೈಲೆಟ್ ಆಗಿದ್ದರು.
ಕಳೆದ ವಾರಾಂತ್ಯ ಮೈಕಲ್‌ಗೆ ಕಿಚ್ಚ ಸುದೀಪ್ ಕಡೆಯಿಂದ ಖಡಕ್ ಕ್ಲಾಸ್ ಆಗಿತ್ತು. ಕ್ಯಾಪ್ಟನ್‌ಗೆ ಗೌರವ ನೀಡದೇ ರೂಲ್ಸ್ ಫಾಲೋ ಮಾಡದೇ ತನ್ನದೇ ಸರಿ ಎಂದು ಬೀಗುತ್ತಿದ್ದ ಮೈಕಲ್ ಆಟಕ್ಕೆ ಸುದೀಪ್ ತಕ್ಕ ಪಾಠ ಕಲಿಸಿದ್ದರು. ಭಾನುವಾರದ (ಜ.7) ಎಪಿಸೋಡ್‌ನಲ್ಲಿ ಮೈಕಲ್ ಎಲಿಮಿನೇಟ್ ಆದರು.