ಹೋಟೆಲ್‌ಗೆ ಊಟಕ್ಕೆ ಹೋಗೋಣ ಎಂದ ಮ್ಯಾನೇಜರ್ ಮನೆಗೆ ಕರೆದೊಯ್ದು ರೇಪ್‌ ಮಾಡ್ದ!

Public TV
1 Min Read
Crime

– ಹೊಸ ವರ್ಷದ ಮುನ್ನಾ ದಿನ ಬೆಂಗಳೂರಿನಲ್ಲಿ ಅತ್ಯಾಚಾರ

ಬೆಂಗಳೂರು: ಹೋಟೆಲ್‌ಗೆ ಊಟಕ್ಕೆ ಹೋಗೋಣ ಎಂದು ಹೇಳಿ ಕಂಪೆನಿ ವ್ಯವಸ್ಥಾಪಕನೇ ಮಹಿಳಾ ಸಹೋದ್ಯೋಗಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಹೊಸ ವರ್ಷದ ಮುನ್ನಾ ದಿನ ಡಿಸೆಂಬರ್‌ 31ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೀಡಾದ ಸಂತ್ರಸ್ತೆಯ ಪತಿಯೂ ಇದೇ ಕಂಪೆನಿಯಲ್ಲಿ (Private Company) ಕೆಲಸ ಮಾಡುತ್ತಿದ್ದರು ಎಂಬ ವಿಚಾರವೂ ಬೆಳಕಿಗೆ ಬಂದಿದೆ.

Crime

ಘಟನೆ ವಿವರ: ಡಿಸೆಂಬರ್‌ 31ರಂದು ಊಟಕ್ಕೆ ಕರೆದೊಯ್ದು ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಸವೇಶ್ವರ ನಗರದಲ್ಲಿರುವ ಕಾಲ್ ಸೆಂಟರ್ ಕಂಪೆನಿ ವ್ಯವಸ್ಥಾಪಕ ಕೆ.ಆರ್ .ಪುರಂ ನಿವಾಸಿ ಸೈಯದ್ ಅಕ್ರಂ ಬಂಧಿತ ಆರೋಪಿ. 32 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬಸವೇಶ್ವರ ನಗರ ಪೊಲೀಸರು (Basaveshwaranagara Police) ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ. ಇದನ್ನೂ ಓದಿ: ಮೆಟ್ರೋ ರೈಲು ಬಂದಾಗ ಏಕಾಏಕಿ ಹಳಿಗೆ ಧುಮುಕಿ ಆತ್ಮಹತ್ಯೆಗೆ ಯತ್ನ- ICUವಿನಲ್ಲಿ ಚಿಕಿತ್ಸೆ

STOP RAPE

ದೂರಿನಲ್ಲೇನಿದೆ?
ನಾನು ಮತ್ತು ನನ್ನ ಪತಿ ಬಸವೇಶ್ವರನಗರದ ಕಂಪನಿಯಲ್ಲಿ ಟೆಲಿ ಕಾಲಿಂಗ್ ಕೆಲಸ ಮಾಡಿಕೊಂಡಿದ್ದೇವೆ. ನಮ್ಮ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಸೈಯದ್ ಅಕ್ರಂ ಎಂಬುವವರು ಕೆಲಸ ಮಾಡಿಕೊಂಡಿರುತ್ತಾರೆ. 31 ಡಿಸೆಂಬರ್‌ 2023 ರಂದು ಮಧ್ಯಾಹ್ನ ಸುಮಾರು 1 ಗಂಟೆಯ ಸಮಯಕ್ಕೆ ಊಟ ಮಾಡಲು ಹೋಟೆಲ್ ಗೆ ಹೋಗೋಣವೆಂದು ಹೇಳಿದ್ದಾರೆ. ಬಳಿಕ ತನ್ನ ಬೈಕಿನಲ್ಲಿ ಆತನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವನ್ನು ಮಾಡಿದ್ದಾರೆ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುದಾಗಿ ಬೆದರಿಕೆಯನ್ನು ಹಾಕಿದ್ದಾರೆ. ಇದನ್ನೂ ಓದಿ: ಧೋನಿಗೆ 15 ಕೋಟಿ ರೂ. ದೋಖಾ – ಮಾಜಿ ಪಾಲುದಾರರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಿದ ಮಹಿ

ಘಟನೆ ನಡೆದ ಎರಡು ದಿನಗಳ ಬಳಿಕ ಜನವರಿ 2ರಂದು ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ಸೈಯದ್‌ ಅಕ್ರಂ ವಿರುದ್ಧ ಪ್ರಕರಣ ದಾಖಲಾಗಿದೆ.

Share This Article