ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಸಚಿವರ ಡಿನ್ನರ್‌ ಪಾಲಿಟಿಕ್ಸ್‌ – ಒಂದೂವರೆಗೆ ಗಂಟೆ ಏನು ಚರ್ಚೆ ನಡೆದಿದೆ?

Public TV
1 Min Read
Satish Jarkiholi HC Mahadevappa muniyappa Parameshwar KN Rajanna Dinesh Gundu Rao Hold Dinner Meeting

ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ನಿವಾಸದಲ್ಲಿ ತಡರಾತ್ರಿ ಸಭೆ ಮಹತ್ವದ ಸಭೆ ನಡೆದಿದ್ದು ರಾಜ್ಯ ಕಾಂಗ್ರೆಸ್‌ನಲ್ಲಿ (Congress) ಮತ್ತೆ ಮುನ್ನಲೆಗೆ ಬರುತ್ತಾ ಹೆಚ್ಚುವರಿ ಡಿಸಿಎಂ (DCM) ಕೂಗು ಎಂಬ ಪ್ರಶ್ನೆ ಬಂದಿದೆ.

ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್, ಹೆಚ್.ಸಿ ಮಹದೇವಪ್ಪ, ಕೆ.ಎನ್. ರಾಜಣ್ಣ, ದಿನೇಶ್ ಗುಂಡೂರಾವ್, ಕೆ.ಹೆಚ್. ಮುನಿಯಪ್ಪ ಅವರು ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ಚರ್ಚೆ ನಡೆಸಿದ್ದಾರೆ.

ಈ ಆರು ಸಚಿವರ ಸಭೆಯಲ್ಲಿ ಎರಡು ಪ್ರಮುಖ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಚಿವರ ಲೋಕಸಭೆ (Lok Sabha Election) ಸ್ಪರ್ಧೆಮಾಡಿದರೆ ಗೆಲುವು ಅನಿವಾರ್ಯ. ಗೆಲುವು ಅನಿವಾರ್ಯವಾಗಬೇಕಾದರೆ ಸಮುದಾಯಗಳ ವಿಶ್ವಾಸಕ್ಕೆ ಡಿಸಿಎಂ ದಾಳ ಉರುಳಿಸುವ ಬಗ್ಗೆ ಸಭೆಯಲ್ಲಿ ಕೆಲ ಚರ್ಚೆ ನಡೆದಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿ ಹೋರಾಟ – ಉದ್ದೇಶಪೂರ್ವಕವಾಗಿ ಸರ್ಕಾರದಿಂದಲೇ ಕೇಸ್‌ಗೆ ಮರುಜೀವ?

ದಲಿತ ಡಿಸಿಎಂ ಮಾಡಿದರೆ ಉತ್ತಮ. ಲೋಕಸಭೆಗೆ ಸಚಿವರು ಸ್ಪರ್ಧಿಸುವುದು ಅನಿವಾರ್ಯವೇ?  ಲೋಕಸಭೆ ಸ್ಪರ್ಧೆ ಹಾಗೂ ಹೆಚ್ಚುವರಿ ಜಾತಿವಾರು ಕನಿಷ್ಠ 4 ಡಿಸಿಎಂ ಹುದ್ದೆ ಬೇಡಿಕೆ ಬಗ್ಗೆಯೂ ನಾಯಕರು ಚರ್ಚೆ ಮಾಡಿದ್ದಾರೆ.

ಜನವರಿ 10 ರ ರಾಜ್ಯ ಕಾಂಗ್ರೆಸ್ ನಾಯಕರ ಲೋಕಸಭೆ ಸಂಬಂಧಿತ ಸಭೆ ನಂತರ ತಮ್ಮ ಬೇಡಿಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಬಗ್ಗೆ ಮಾತುಕತೆ ನಡೆದಿದೆ.

Share This Article