ಬಾಲರಾಮನ ಮೂರ್ತಿ ಹೇಗಿರಲಿದೆ – ಕುತೂಹಲದ ಪ್ರಶ್ನೆಗೆ ಜ.22 ರಂದು ಸಿಗಲಿದೆ ಉತ್ತರ

Public TV
2 Min Read
ayodhya ram mandir

–  ಫೋಟೋ, ವಿಡಿಯೋ ಎಲ್ಲಿಯೂ ಲಭ್ಯವಿಲ್ಲ

ಅಯೋಧ್ಯಾ: ರಾಮಮಂದಿರ (Ram Mandir) ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಲಿರುವ ಬಾಲರಾಮನ (Ram Lalla) ಮೂರ್ತಿ ಹೇಗಿರಲಿದೆ ಎನ್ನುವ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಜನವರಿ 22 ಮಧ್ಯಾಹ್ನ 12:20ರ ರಂದು ಉತ್ತರ ಸಿಗಲಿದೆ.

ಹೌದು. ಈ ಹಿಂದೆ ಮೈಸೂರಿನ ಯೋಗಿರಾಜ್‌ ಅವರು ನಿರ್ಮಿಸಿದ ಮೂರ್ತಿ ಆಯ್ಕೆಯಾಗಿದೆ ಎಂದು ವರದಿಯಾಗಿತ್ತು. ಆದರೆ ರಾಮಮಂದಿರ ನಿರ್ಮಾಣ ಮಾಡುತ್ತಿರುವ ಎಂದು ರಾಮ ಮಂದಿರ ಟ್ರಸ್ಟ್‌ನ (Ram Janmabhoomi Teerth Kshetra Trust) ರಾಮಲಲ್ಲಾ ಮೂರ್ತಿಯ (Ram Lalla Idols)ಆಯ್ಕೆ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲಎಂದು ತಿಳಿಸಿತ್ತು.

ಈ ಸ್ಪಷ್ಟನೆ ಬಂದ ಬೆನ್ನಲ್ಲೇ ಬಾಲರಾಮನ ಮೂರ್ತಿ ಹೇಗಿದೆ ಎಂಬ ಕುತೂಹಲ ದಿನೇ ದಿನೇ ಭಕ್ತರಲ್ಲಿ ಹೆಚ್ಚಾಗುತ್ತಿದೆ. ಈ ಕುತೂಹಲಕ್ಕೆ ಜ.22ರ ಮಧ್ಯಾಹ್ನ 12:20ರ ಪ್ರಾಣಪ್ರತಿಷ್ಠೆಯ ವೇಳೆ ಉತ್ತರ ಸಿಗಲಿದೆ ಎಂದು ರಾಮ ಮಂದಿರದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಮಮಂದಿರಕ್ಕೆ ಬಾಂಬ್ ಬೆದರಿಕೆ – ಇಬ್ಬರ ಬಂಧನ

AYODHYA RAMMANDIR

ಮೂರು ಮೂರ್ತಿಯ ಮಾದರಿಗಳು ಈಗಾಗಲೇ ಪೂರ್ಣಗೊಂಡಿದ್ದರೂ ಅದರ ಫೋಟೋ ಮತ್ತು ವಿಡಿಯೋ ಎಲ್ಲಿಯೂ ಲಭ್ಯವಿಲ್ಲ. ಜನವರಿ 17 ರಂದು ನಗರ ಯಾತ್ರೆ ನಡೆಸಲು ಉದ್ದೇಶಿಸಲಾಗಿದ್ದರೂ ಇನ್ನೂ ಯಾತ್ರೆಯ ಸ್ವರೂಪದ ಅಂತಿಮಗೊಂಡಿಲ್ಲ. ನಗರ ಯಾತ್ರೆ ಬೆಳಗ್ಗಿನ ಅವಧಿಯಲ್ಲಿ ಮಾಡಲು ಸಿದ್ಧತೆ ನಡೆದಿದೆ.

11 ಮಂದಿ ಟ್ರಸ್ಟ್‌ ಸದಸ್ಯರ ಅಭಿಪ್ರಾಯವನ್ನು ಡಿ.29 ರಂದು ತೆಗೆದುಕೊಳ್ಳಲಾಗಿದೆ. ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಅಂತಿಮವಾಗಿ ಯಾವ ಪ್ರತಿಮೆ ಎಂಬುದನ್ನು ನಿರ್ಧರಿಸುತ್ತಾರೆ ಎಂದು ರಾಮ ಮಂದಿರ ಟ್ರಸ್ಟ್‌ ಸದಸ್ಯ ಕಾಮೇಶ್ವರ್‌ ಚೌಪಲ್‌ ತಿಳಿಸಿದ್ದಾರೆ.

Ayodhya Ram Mandir 1

ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲು ಶಿಲ್ಪಿಗಳಾದ ಕರ್ನಾಟಕ ರಾಜ್ಯ ಮೈಸೂರು ಮೂಲದ ಅರುಣ್ ಯೋಗಿರಾಜ್ (Arun Yogiraj), ಗಣೇಶ್ ಭಟ್ ಮತ್ತು ಜೈಪುರದ ಸತ್ಯನಾರಾಯಣ ಪಾಂಡೆ ಅವರ ಮೂರ್ತಿಗಳನ್ನ ಕೆತ್ತನೆ ಮಾಡಿದ್ದಾರೆ. ಕರ್ನಾಟಕ ಇಬ್ಬರು ಶಿಲ್ಪಿಗಳು ಮೈಸೂರಿನ ಕೃಷ್ಣಶಿಲೆಯನ್ನು ಬಳಕೆ ಮಾಡಿ ಮೂರ್ತಿ ಕೆತ್ತನೆ ಮಾಡಿದ್ದಾರೆ. ಸತ್ಯನಾರಾಯಣಪಾಂಡೆ ಅವರು ರಾಜಸ್ಥಾನದಿಂದ ತರಿಸಲಾಗಿದ್ದ ಕಲ್ಲನ್ನು ಬಳಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ವಿವಾದಾತ್ಮಕ ಕ್ಷೇತ್ರ – ರಾಮಮಂದಿರಕ್ಕೂ, ಭಕ್ತರಿಗೂ ರಕ್ಷಣೆ ಬೇಕು: ಡಿ.ಕೆ.ಸುರೇಶ್

Ayodhya Ram Mandir 3

ಅಂತಿಮವಾಗಿ ಪ್ರತಿಷ್ಠಾಪಿಸಬೇಕಾದ ರಾಮಲಲ್ಲಾ ಮೂರ್ತಿಯನ್ನು ಆಯ್ಕೆ ಮಾಡುವ ಮುನ್ನ ಅದರ ದೀರ್ಘಾವಧಿ ಬಾಳಿಕೆ ಕುರಿತು ತಾಂತ್ರಿಕ ವರದಿ ಪಡೆಯಲಾಗುತ್ತದೆ. ನಂತರ ಆಯ್ಕೆಯಾಗುವ ಮೂರ್ತಿಯನ್ನ ಜನವರಿ 22ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

Ayodhya Ram Mandir 4 1

ಬಾಲರಾಮನ ಆಯ್ಕೆಗೆ ಮಾನದಂಡ ಏನು?
ವಿಗ್ರಹ ಕಡೆಯಲು ಬಳಸಿದ ಶಿಲೆಯ ಗುಣಮಟ್ಟ, ರಾಮನ ಬಾಲ್ಯದ ನೋಟ, ವಿಗ್ರಹಕ್ಕೆ ಇರುವ ಸೌಂದರ್ಯ, ಆಕರ್ಷಣೆ, ವಿಗ್ರಹಕ್ಕೆ ಇರುವ ದೈವತ್ವದ ಕಳೆ, ಭಾವ, ವಿಗ್ರಹದ ರಚನಾತ್ಮಕ ಸ್ವರೂಪ, ಕೆತ್ತನೆಯ ಗುಣಮಟ್ಟ ಎಲ್ಲವನ್ನು ಪರಿಗಣಿಸಲಾಗುತ್ತದೆ.

Share This Article