ಕುಣಿದು ತೂರಾಡಿದ ಯುವತಿ – ಅಸಭ್ಯ ವರ್ತನೆ ತೋರಿದ್ದಕ್ಕೆ ಲವ್ವರ್‌ನಿಂದ ಯುವಕನಿಗೆ ಏಟು

Public TV
1 Min Read
new year celebration 2024 Drunk Woman Creates Ruckus In Koramangala Bengaluru

ಬೆಂಗಳೂರು: ಹೊಸ ವರ್ಷ 2024 (New Year 2024) ಕರ್ನಾಟಕದ (Karnataka) ಜನತೆ ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜನರು ಕುಣಿದು ಕುಪ್ಪಳಿಸಿ 2023ಕ್ಕೆ ಗುಡ್‌ಬೈ ಹೇಳಿ 2024 ಸ್ವಾಗತಿಸಿದ್ದಾರೆ.

ಬೆಂಗಳೂರಿನ (Bengaluru) ಪ್ರಮುಖ ಸ್ಥಳಗಳಾದ ಎಂಜಿರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‌, ಕೋರಮಂಗಲ, ಇಂದಿರಾನಗರದ ಸ್ಟ್ರೀಟ್‌ಗಳು ಕಲರ್‌ಫುಲ್ ಆಗಿತ್ತು.

ಕೆಲವೊಂದಿಷ್ಟು ಸಣ್ಣಪುಟ್ಟ ಗಲಾಟೆಗಳು ಕೂಡ ನಡೆದಿದ್ದು, ಪೊಲೀಸರು (Police) ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಪ್ರತಿ ವರ್ಷದಂತೆ  ಭಾನುವಾರ ರಾತ್ರಿ ಬೆಂಗಳೂರಿನ ಎಲ್ಲಾ ಫ್ಲೈ ಓವರ್‌ಗಳನ್ನು ಬಂದ್‌ ಮಾಡಲಾಗಿದೆ.

 

ಮೊಬೈಲ್‌ ಕಳ್ಳನಿಗೆ ಥಳಿತ
ಬ್ರಿಗೇಡ್ ರಸ್ತೆಯಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ ಕಳ್ಳನನ್ನು ಥಳಿಸಿ ಸ್ಥಳೀಯರು ಪೊಲೀಸರಿಗೆ ಹಿಡಿದು ಒಪ್ಪಿಸಿದ್ದಾರೆ. ಈ ವೇಳೆ ಪೊಲೀಸರು ಮುಂದೆ ಕಳ್ಳ ಕೈ ಮುಗಿದು ಬೇಡಿಕೊಂಡಿದ್ದಾನೆ. ನಂತರ ಮೊಬೈಲನ್ನು ಯುವಕನಿಗೆ ಪೊಲೀಸರು ಹಸ್ತಾಂತರಿಸಿದರು.  ಇದನ್ನೂ ಓದಿ: ಹೊಸ ವರ್ಷವನ್ನು ಸ್ವಾಗತಿಸಿದ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌

 

ತೂರಾಡಿದ ಯುವತಿ
ಕೋರಮಂಗಲದಲ್ಲಿ ಯುವತಿಯೊಬ್ಬಳು ಎಣ್ಣೆ ಮತ್ತಿನಲ್ಲಿ ತೂರಾಡಿದ್ದಾಳೆ. ಈ ವೇಳೆ ನಾಲ್ಕು ಮಂದಿ ಮಹಿಳಾ ಸಿಬ್ಬಂದಿ ಆಕೆಯನ್ನು ನಿಯಂತ್ರಿಸಲು ಪ್ರಯತ್ನ ಮಾಡಿದರೂ ಯುವತಿ ನಿಯಂತ್ರಣ ಸಿಗದೇ ನೆಲಕ್ಕೆ ಬಿದ್ದಿದ್ದಾಳೆ. ಇದನ್ನೂ ಓದಿ: New Year 2024 – ಪಾನಮತ್ತರಾಗಿ ಬಿದ್ದರೆ ನೇರ ಆಸ್ಪತ್ರೆಗೆ ಶಿಫ್ಟ್‌

ವ್ಯಕ್ತಿಗೆ ಧರ್ಮದೇಟು:
ಗೆಳತಿ ಜೊತೆ ಅಸಭ್ಯ ವರ್ತನೆ ತೋರಿದ್ದಕ್ಕೆ ಪ್ರಿಯತಮನೊಬ್ಬ ಅಪರಿಚಿತ ವ್ಯಕ್ತಿಗೆ ಬ್ರಿಗೇಡ್ ರಸ್ತೆಯಲ್ಲಿ ಧರ್ಮದೇಟು ನೀಡಿದ್ದಾನೆ. ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆಯನ್ನು ನಿಯಂತ್ರಿಸಿದ್ದಾರೆ.

Share This Article