ಜೈಲರ್ ಸಿನಿಮಾದ ಮೂಲಕ ತಮಿಳು ಚಿತ್ರೋದ್ಯಮದಲ್ಲಿ ಸಂಚಲನ ಸೃಷ್ಟಿ ಮಾಡಿರೋ ಶಿವರಾಜ್ ಕುಮಾರ್, ನಟನೆಯ ಮತ್ತೊಂದು ತಮಿಳು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಧನುಷ್ (Dhanush) ಮತ್ತು ಕನ್ನಡದ ಸೆಂಚ್ಯೂರಿ ಸ್ಟಾರ್ ಶಿವರಾಜ್ ಕುಮಾರ್ (Shivraj Kumar) ಕಾಂಬಿನೇಷನ್ ನ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ರಿಲೀಸ್ (Release) ಡೇಟ್ ಫಿಕ್ಸ್ ಆಗಿದ್ದು, ಜನವರಿ 12ರಂದು ವಿಶ್ವದಾದ್ಯಂತ ಚಿತ್ರ ಬಿಡುಗಡೆ ಆಗಲಿದೆ.
ಸಂಕ್ರಾಂತಿ (ಪೊಂಗಲ್) (Sankranti) ಹಬ್ಬಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದ್ದು, ಸಹಜವಾಗಿಯೇ ಅಭಿಮಾನಿಗಳಿಗೆ ಸಂಭ್ರಮ ತಂದಿದೆ. ಇತ್ತೀಚೆಗಷ್ಟೇ ಸಿನಿಮಾದ ಪೋಸ್ಟರ್ (Poster) ರಿಲೀಸ್ ಆಗಿತ್ತು, ವಿವಿಧ ಬಗೆಯ ಬಂದೂಕು ಹಿಡಿದುಕೊಂಡಿರುವ ಇಬ್ಬರು ಸ್ಟಾರ್ ನಟರು ತೆರೆಯ ಮೇಲೆ ಕಾಳಗ ಮಾಡಲಿದ್ದಾರೆ ಎನ್ನುವ ಕುತೂಹಲವನ್ನು ಉಂಟು ಮಾಡಿತ್ತು.
ಧನುಷ್ ಕೈಯಲ್ಲಿ ಒಂದು ಬಗೆಯ ಬಂದೂಕು ಇದ್ದರೆ, ಶಿವರಾಜ್ ಕುಮಾರ್ ಮತ್ತೊಂದು ಬಗೆಯ ಬಂದೂಕು ಹಿಡಿದಿದ್ದಾರೆ. ಇಬ್ಬರ ಲುಕ್ ಕೂಡ ಸಖತ್ ಕ್ಯಾಚಿ ಆಗಿದೆ. ಹೀಗಾಗಿ ತೆರೆಯ ಮೇಲೆ ಇಬ್ಬರೂ ಯಾವ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಇರುವ ಕಾತರ.
ಆಕಸ್ಮಿಕ ಎನ್ನುವಂತೆ ಧನುಷ್ ಜೊತೆ ಮಾಡುತ್ತಿದ್ದ ಕ್ಯಾಪ್ಟನ್ ಮಿಲ್ಲರ್ (Captain Miller) ಸಿನಿಮಾದ ಕೆಲವು ವಿಷಯಗಳು ಸೋರಿಕೆಯಾಗಿವೆ. ಅಂದರೆ, ಶಿವರಾಜ್ ಕುಮಾರ್ ಅವರಿಗೆ ಕೇಶವಿನ್ಯಾಸ ಮಾಡುತ್ತಿರುವ ರಾಜು ಎನ್ನುವವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪಾತ್ರ ಮತ್ತು ಸಿನಿಮಾದ ಕಥೆಯನ್ನೂ ಅವರು ಬಿಟ್ಟುಕೊಟ್ಟಿದ್ದಾರೆ.
ಕಾಡು ಜನರು ಮತ್ತು ಬ್ರಿಟಿಷ್ ರ ನಡುವಿನ ಹೋರಾಟದ ಕಥೆಯನ್ನು ಕ್ಯಾಪ್ಟನ್ ಮಿಲ್ಲರ್ ನಲ್ಲಿ ಹೇಳುತ್ತಿದ್ದಾರಂತೆ ನಿರ್ದೇಶಕರು. ಈ ಸಿನಿಮಾದಲ್ಲಿ ಕಾಡು ಜನರ ಪಾತ್ರದಲ್ಲಿ ಶಿವಣ್ಣ ಮತ್ತು ಧನುಷ್ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಧನುಷ್ ಅಣ್ಣನ ಪಾತ್ರದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.