ನೀರಿನ ಅಭಾವ, ಕಬ್ಬಿಣ ಉತ್ಪಾದನೆಗೆ ಪೆಟ್ಟು – ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಕಾರ್ಮಿಕರು

Public TV
2 Min Read
Iron and Steel Factory in Koppala concerned about water crisis 3

ಕೊಪ್ಪಳ: ಈ ಬಾರಿ ಮಳೆ (Rain) ಕೊರತೆಯಿಂದ ರಾಜ್ಯದ ರೈತರು ಕಂಗಾಲಾಗಿದ್ದಾರೆ. ಇದೀಗ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳಿಗೆ (Iron and Steel Factory) ನೀರಿನ ಅಭಾವ ಉಂಟಾಗಿದ್ದು, ಉತ್ಪಾದನೆಗೆ ಪೆಟ್ಟು ಬಿದ್ದಿದೆ.

ಬರದಿಂದ ಕಂಗಾಲಾದ ರೈತರ ಸಂಕಷ್ಟಕ್ಕೆ ಸ್ಪಂದಿಸಲು ರಾಜ್ಯ, ಕೇಂದ್ರ ಸರಕಾರ ಪರದಾಡುತ್ತಿವೆ. ಈ ನಡುವೆ ಮಳೆ ಕೊರತೆಯ ಎಫೆಕ್ಟ್‌ನಿಂದ ಕಾರ್ಖಾನೆ ಕಾರ್ಮಿಕರಿಗೂ ಸಂಕಷ್ಟ ಎದುರಾಗಿದ್ದು, ಸಾವಿರಾರು ದುಡಿವ ಕೈಗಳು ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ.  ಇದನ್ನೂ ಓದಿ: ಅತಿಥಿ ಉಪನ್ಯಾಸಕರಿಗೆ 5 ಸಾವಿರ ವೇತನ ಹೆಚ್ಚಳ: ಸಚಿವ ಸುಧಾಕರ್‌

Iron and Steel Factory in Koppala concerned about water crisis

ಕೊಪ್ಪಳದ (Koppala) ಸುತ್ತಲಿನ ಮುಕ್ಕುಂದ- ಕಲ್ಯಾಣಿ ಕಬ್ಬಿಣ ಮತ್ತು ಉಕ್ಕು ಉತ್ಪದನಾ ಕಾರ್ಖಾನೆ ಸೇರಿ ಸುಮಾರು 10ಕ್ಕೂ ಹೆಚ್ಚು ಕಾರ್ಖಾನೆಗಳು ನೀರಿನ ಕೊರತೆಯಿಂದ (water shortage) ಉತ್ಪಾದನೆ ಬಂದ್ ಮಾಡಲು ಮುಂದಾಗಿವೆ. ಈ ಬಾರಿ ಮಲೆನಾಡು ಭಾಗದಲ್ಲೂ ಮಳೆ ಕೊರತೆಯಾಗಿ ತುಂಗಭದ್ರಾ ಜಲಾಶಯ ತುಂಬಿಲ್ಲ. ಇದರಿಂದ ಡ್ಯಾಂ ನೀರಿನಿಂದಲೇ ನಡೆಯುವ ಕಬ್ಬಿಣ ಉತ್ಪಾದನೆ ಮಾಡುವ ಹತ್ತಾರು ಕಾರ್ಖಾನೆಗೆ ಸಂಕಷ್ಟ ಎದುರಾಗಿದೆ.

ಡ್ಯಾಂನಿಂದ ಕಾರ್ಖಾನೆಗೆ ನೀರು ನೀಡುವುದನ್ನು ಸ್ಥಗಿತ ಮಾಡಲಾಗಿದೆ. ಇದರಿಂದ ಕಲ್ಯಾಣಿ ಕಾರ್ಖಾನೆಯಲ್ಲಿ ಕೆಲವು ಘಟಕದಲ್ಲಿ ಉತ್ಪದನೆ ನಿಲ್ಲಿಸಲಾಗಿದೆ. ಕಲ್ಯಾಣ- ಮುಕ್ಕುಂದ ಕಾರ್ಖಾನೆಯ ನೀರಿನ ಸಂಗ್ರಹಣಾ ತೊಟ್ಟಿ‌ ಸಂಪೂರ್ಣ ಖಾಲಿಯಾಗಿದ್ದು ನೀರು ಸಿಗದಿದ್ದರೆ ಮುಂದಿನ ವಾರದಿಂದಲೇ ಉತ್ಪಾದನೆ ಸ್ಥಗಿತ ಮಾಡುವುದು ಅನಿವಾರ್ಯ ಎನ್ನುತ್ತಿದ್ದಾರೆ.

 

ಸದ್ಯ ಟಿಬಿ ಡ್ಯಾಂನಲ್ಲಿ‌11 ಟಿಎಂಸಿ ನೀರಿದ್ದು, ಕಾರ್ಖಾನೆಗೆ ಅಗತ್ಯ ಇರುವ ದಿನಕ್ಕೆ ಕೇವಲ 4 ಕ್ಯೂಸೆಕ್ ನೀರು ನೀಡಬೇಕು. ಇಲ್ಲವಾದರೆ ಪ್ಲಾಟ್ ಬಂದ್ ಮಾಡಿದರೆ, ಸಾವಿರಾರು ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಲಿದೆ. ಇದರಿಂದ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಆತಂಕ ಎದುರಾಗಿದೆ.‌  ಇದನ್ನೂ ಓದಿ: Ayodhya Ram Mandir: ಅಹಮದಾಬಾದ್‌ ಗ್ರೂಪ್‌ನಿಂದ ಅಯೋಧ್ಯೆಗೆ 450 ಕೆ.ಜಿ ತೂಕದ ಮೆಗಾ ಡ್ರಮ್ ಗಿಫ್ಟ್‌

ಸರ್ಕಾರ ನೀರು, ವಿದ್ಯುತ್ ಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರೆ ಕಾರ್ಖಾನೆಗಳು ಉದ್ಯೋಗ ನೀಡುವ ಒಪ್ಪಂದ ಮಾಡಿಕೊಂಡಿತ್ತು. ಆದರೆ ನಿಗದಿತ ಪ್ರಮಾಣದ ನೀರನ್ನು ಸರ್ಕಾರ ಕೊಡುತ್ತಿಲ್ಲ ಎಂಬುದು ಕಾರ್ಖಾನೆ ಆಡಳಿತ ಮಂಡಳಿ ಆರೋಪ ಮಾಡುತ್ತಿದೆ. ಕಾರ್ಖಾನೆ ಬಂದ್‌ ಮಾಡಿದರೆ ಕಾರ್ಮಿಕರ ಬದುಕು ಬೀದಿಗೆ ಬರುತ್ತೆ ಎಂಬ ಆತಂಕ ಎದುರಾಗಿದೆ. ಮಳೆರಾಯನ‌ ಮುನಿಸು ಸಾವಿರಾರು ಕಾರ್ಮಿಕರಿಗೆ ಸಂಕಷ್ಟ ತಂದಿದೆ. ಸರ್ಕಾರ ಮನಸ್ಸು ಮಾಡಿದರೆ ಡ್ಯಾಂ ನಲ್ಲಿರುವ ಒಂದಷ್ಟು ನೀರನ್ನು ‌ಕಾರ್ಖಾನೆಗೆ ಕೊಡಬಹುದಾಗಿದ್ದು, ಕಾರ್ಮಿಕರ ಹಿತ ದೃಷ್ಟಿಯಿಂದ ತೀರ್ಮಾನ ಕೈಗೊಳ್ಳಬೇಕಿದೆ.

 

Share This Article