ಭೋಪಾಲ್: ಬಸ್ಸೊಂದು ಟ್ರಕ್‍ಗೆ ಡಿಕ್ಕಿಯಾಗಿ (Accident) ಹೊತ್ತಿ ಉರಿದ ಪರಿಣಾಮ 13 ಜನ ಸಾವಿಗೀಡಾದ ಘಟನೆ ಮಧ್ಯಪ್ರದೇಶದ (Madhya Pradesh) ಗುನ ಹಾಗೂ ಅರೋನ್ ನಡುವಿನ ರಸ್ತೆಯಲ್ಲಿ ನಡೆದಿದೆ.
ಅಪಘಾತದಲ್ಲಿ 14 ಮಂದಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅದರಲ್ಲಿ 5 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ಬಸ್ ಗುನಾದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಅರೋನ್‍ಗೆ ತೆರಳುತ್ತಿತ್ತು ಈ ವೇಳೆ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಂಗಡಿ, ಮಾಲ್‌ಗಳಲ್ಲಿ ಕನ್ನಡ ಭಾಷೆಯಲ್ಲಿ ನಾಮಫಲಕ – ಶೀಘ್ರವೇ ಸುಗ್ರೀವಾಜ್ಞೆ
ಅಪಘಾತಕ್ಕೊಳಗಾದ ಬಸ್ ಬಿಜೆಪಿ (BJP) ಮುಖಂಡ ಧರ್ಮೇಂದ್ರ ಸಿಕರ್ವಾರ್ ಅವರ ಒಡೆತನದ್ದು ಎಂದು ತಿಳಿದು ಬಂದಿದೆ. ಬಸ್‍ನ ವಿಮೆ ಪ್ರಮಾಣಪತ್ರಗಳ ಅವಧಿ ಮುಗಿದಿದ್ದು, 2021 ರಿಂದ ರಸ್ತೆ ತೆರಿಗೆ ಸಹ ಪಾವತಿಸಿಲ್ಲ. ಬಸ್‍ನ ಸುರಕ್ಷತಾ ಪ್ರಮಾಣ ಪತ್ರದ ಅವಧಿ ಸಹ ಮುಗಿದಿತ್ತು ಎಂದು ವರದಿಯಾಗಿದೆ.
ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ನೆರವು ಘೋಷಣೆ ಮಾಡಲಾಗಿದೆ. ಅಪಘಾತಕ್ಕೆ ಕಾರಣ ಹಾಗೂ ಬಸ್‍ನ ದಾಖಲೆಗಳ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ತಿಳಿಸಿದ್ದಾರೆ. ಇದನ್ನೂ ಓದಿ: ನಿರ್ದೇಶಕ ವರ್ಮಾ ಶಿರಚ್ಛೇದನ ವಿಚಾರ: ಟಿಡಿಪಿ ಮುಖಂಡನ ವಿರುದ್ಧ ದೂರು