ಕುಸ್ತಿ ಬಿಟ್ಟರೂ ಚಿಂತೆ ಶುರುವಾಗಿದೆ, ಕಿರಿಯರಿಗೆ ಏನು ಹೇಳ್ಬೇಕು ತಿಳಿಯುತ್ತಿಲ್ಲ: ಸಾಕ್ಷಿ ಮಲಿಕ್‌ ಭಾವುಕ

Public TV
2 Min Read
Sakshee Malikkh

ನವದೆಹಲಿ: ನಾನು ಕುಸ್ತಿ (Wrestling) ಬಿಟ್ಟಿದ್ದರೂ ಚಿಂತಿತಳಾಗಿದ್ದೇನೆ. ನನ್ನ ಕಿರಿಯ ಮಹಿಳಾ ಕುಸ್ತಿಪಟುಗಳಿಗೆ ಏನು ಹೇಳಬೇಕು ಅನ್ನೋದೇ ಗೊತ್ತಾಗುತ್ತಿಲ್ಲ ಎಂದು ಕುಸ್ತಿಪಟು ಸಾಕ್ಷಿ ಮಲಿಕ್‌ (Sakshee Malikkh) ಬೇಸರ ವ್ಯಕ್ತಪಡಿಸಿದ್ದಾರೆ.

2024ರ ಜೂನಿಯರ್‌ ನಾಷನಲ್‌ ಗೇಮ್ಸ್‌ ಕುರಿತು ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಸಾಕ್ಷಿ, ನಾನು ಕುಸ್ತಿಯನ್ನು ಬಿಟ್ಟಿದ್ದೇನೆ, ಆದರೂ ನಾನು ಚಿಂತಿತಳಾಗಿದ್ದೇನೆ. ಏಕೆಂದರೆ, ಏಪ್ರಿಲ್‌ 28 ರಿಂದ ಜೂನಿಯರ್‌ ನ್ಯಾಷನಲ್‌ ಲೆವೆಲ್‌ ಪಂದ್ಯಗಳು ನಡೆಯಲಿವೆ. ಉತ್ತರ ಪ್ರದೇಶದ ನಂದನಿನಗರ ಗೊಂಡಾದಲ್ಲಿ ಕುಸ್ತಿ ನಡೆಸಲು ನೂತನ ಕುಸ್ತಿ ಒಕ್ಕೂಟ ನಿರ್ಧರಿಸಿದೆ. ಈ ಬಗ್ಗೆ ನನ್ನ ಕಿರಿಯ ಮಹಿಳಾ ಕುಸ್ತಿಪಟುಗಳು ಕರೆ ಮಾಡಿ ತಿಳಿಸಿದ್ದಾರೆ. ಅವರಿಗೆ ಏನು ಹೇಳಬೇಕು ಅನ್ನೋದೆ ತಿಳಿಯುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ಗೊಂಡಾ ಬ್ರಿಜ್‌ಭೂಷಣ್‌ನ (Brij Bhushan Sharan Singh) ಭದ್ರಕೋಟೆ. ಈಗ ಜೂನಿಯರ್ ಮಹಿಳಾ ಕುಸ್ತಿಪಟುಗಳು ಯಾವ ಪರಿಸರದಲ್ಲಿ ಕುಸ್ತಿ ಮಾಡಲು ಹೋಗುತ್ತಾರೆ? ಅನ್ನೋದನ್ನ ಊಹಿಸಿ. ನಂದನಿನಗರ ಬಿಟ್ಟು ಬೇರೆಲ್ಲೂ ಆಯೋಜನೆ ಮಾಡಲು ಈ ದೇಶದಲ್ಲಿ ಜಾಗವಿಲ್ಲವೇ? ಏನು ಮಾಡಬೇಕೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಈಗಲೂ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದೇವೆ, ನಮ್ಮ ದುಃಖ ಯಾರಿಗೆ ಹೇಳೋಣ? – ನಿಲ್ಲದ ಕುಸ್ತಿಪಟುಗಳ ವೇದನೆ

ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಆಪ್ತ ಸಂಜಯ್‌ ಸಿಂಗ್‌ (Sanjay Singh) ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಕುಸ್ತಿಪಟು ಸಾಕ್ಷಿ ಮಲಿಕ್‌ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದರು.

Wrestling Federation Of India Brij Bhushan Sharan Singh Sanjay Singh

ಏನಾಗಿತ್ತು?:
ಈ ಹಿಂದೆ ಕುಸ್ತಿ ಫೆಡರೇಷನ್‌ (Wrestling Federation of India) ಅಧ್ಯಕ್ಷರಾಗಿದ್ದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಬಂದಿದ್ದರಿಂದ ದೂರು ದಾಖಲಾಗಿತ್ತು. ನಂತರ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಭಾರೀ ಪ್ರತಿಭಟನೆ ನಡೆದಿದ್ದವು. ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್‌, ವಿನೇಶ್‌ ಫೋಗಟ್‌, ಬಜರಂಗ್‌ ಪುನಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದವು.

ಕೊನೆಗೆ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಮಧ್ಯಪ್ರವೇಶಿಸಿ ಸಾಂಧಾನ ನಡೆಸಿದ ಬಳಿಕ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ವಾಪಸ್‌ ಪಡೆದಿದ್ದರು. ಈ ವರ್ಷಾರಂಭದಲ್ಲಿ ಬ್ರಿಜ್‌ ಭೂಷಣ್‌ ಅಧ್ಯಕ್ಷಗಿರಿಯಿಂದ ಕೆಳಗಿಳಿದಿದ್ದರು. ನಂತರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬ್ರಿಜ್‌ ಭೂಷಣ್‌ ಆಪ್ತ ಸಂಜಯ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕುಸ್ತಿಪಟುಗಳ ಅಸಮಾಧಾನಕ್ಕೆ ಕಾರಣವಾಗಿದೆ.

Vinesh Phogat

ವಾರಣಾಸಿ ಮೂಲದ ಸಂಜಯ್‌ ಸಿಂಗ್‌, ಬ್ರಿಜ್ ಭೂಷಣ್ ಅವರ ನಿಕಟ ಸಹವರ್ತಿಯಾಗಿದ್ದಾರೆ. ಸಂಜಯ್ ಸಿಂಗ್ ಅವರು ಕಾಮನ್‍ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೆರಾನ್ ಅವರ ವಿರುದ್ಧ ಒಟ್ಟು 47 ಮತಗಳ ಪೈಕಿ 40 ಮತಗಳನ್ನು ಪಡೆದು ಗೆದ್ದಿದ್ದಾರೆ.  ಇದನ್ನೂ ಓದಿ: ಟೆಕ್ವಾಂಡೋ: ರಾಷ್ಟ್ರಮಟ್ಟಕ್ಕೆ ಕಾಸರಗೋಡಿನ ಗಣ್ಯ – ಕೇರಳದಲ್ಲಿ ಅಗ್ರʻಗಣ್ಯʼಚಿನ್ನದ ಪದಕ..!

Share This Article