ಹಿಜಬ್ ವಿಚಾರದಲ್ಲಿ ಸರ್ಕಾರದ ಆದೇಶ 2, 3 ದಿನದಲ್ಲಿ ಹೊರಬೀಳುತ್ತೆ: ಹೆಚ್.ಕೆ. ಪಾಟೀಲ್

Public TV
1 Min Read
H K PATIL

ಬೆಂಗಳೂರು: ಹಿಜಬ್ (Hijab) ವಿಚಾರದಲ್ಲಿ ಸರ್ಕಾರದ ನಿಲುವು ಹಾಗೂ ಆದೇಶ ಏನು ಎಂಬುದು 2 ರಿಂದ 3 ದಿನಗಳಲ್ಲಿ ಹೊರ ಬೀಳಲಿದೆ, ಕಾದು ನೋಡಿ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ (H.K.Patil) ಹೇಳಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹಿಜಬ್ ವಿಚಾರ ನ್ಯಾಯಾಲಯದಲ್ಲಿದೆ. ಅದರ ಬಗ್ಗೆ ಹೆಚ್ಚು ಚರ್ಚೆ ಹಾಗೂ ವಿಮರ್ಶೆ ಮಾಡಲು ನಾನು ಹೋಗುವುದಿಲ್ಲ. ಹಿಂದಿನ ಸರ್ಕಾರದ ವಿವಾದಾತ್ಮಕ ನಿರ್ಧಾರವನ್ನು ಸರಿಪಡಿಸುವ ನಿಟ್ಟಿನಲ್ಲಿ ಸಿಎಂ ಮಾತನಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮೂರ್ಖರಲ್ಲ, ತುಷ್ಟೀಕರಣದಿಂದಲೇ 2018ರಲ್ಲಿ ಅವರು ಸೋತಿದ್ದು: ಪ್ರಹ್ಲಾದ್ ಜೋಶಿ ವಾಗ್ದಾಳಿ

ಸರ್ಕಾರದ ಅಧಿಕೃತ ಆದೇಶ 2-3 ದಿನದಲ್ಲಿ ಹೊರ ಬರಲಿದೆ. ಆ ಆದೇಶ ಏನು ಎಂಬುದು ಬಂದ ನಂತರವೆ ಗೊತ್ತಾಗಲಿದೆ. ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ. ಸರ್ಕಾರದ ನಿರ್ಧಾರಕ್ಕೆ ಕೋರ್ಟ್‍ನ ವಿಚಾರ ಅಡ್ಡಿ ಆಗಲ್ಲ ಎಂದು ಭಾವಿಸಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಮದ್ಯಪ್ರಿಯರ ಬೇಡಿಕೆಗಳು ನ್ಯಾಯಯುತವಾಗಿವೆ: ಸಚಿವ ಲಾಡ್

Share This Article