ಡಿ.ಕೆ.ಸುರೇಶ್‌ ಸೇರಿ ಮತ್ತೆ ಮೂವರು ಸಂಸದರು ಲೋಕಸಭೆಯಿಂದ ಅಮಾನತು

Public TV
1 Min Read
DK SURESH

ನವದೆಹಲಿ: ವಿಪಕ್ಷಗಳ ಸಂಸದರ (MPs Suspension) ಅಮಾನತು ಮುಂದುವರಿದಿದೆ. ಇಂದು (ಗುರುವಾರ) ಕೂಡ ಕಾಂಗ್ರೆಸ್‌ನ ಡಿ.ಕೆ.ಸುರೇಶ್‌ ಸೇರಿದಂತೆ ಮೂವರು ಸಂಸದರನ್ನು ಲೋಕಸಭೆಯಿಂದ (Lok Sabha) ಅಮಾನತು ಮಾಡಲಾಗಿದೆ.

ಸಂಸದರಾದ ಡಿ.ಕೆ.ಸುರೇಶ್‌ (D.K.Suresh), ನಕುಲ್ ನಾಥ್ ಮತ್ತು ದೀಪಕ್ ಬೈಜ್ ಅವರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿದೆ. ಇಲ್ಲಿವರೆಗೆ ಅಮಾನತುಗೊಂಡ ಸಂಸದರ ಸಂಖ್ಯೆ 146 ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಲೋಕಸಭೆಯಲ್ಲಿ ಸ್ಮೋಕ್ ಬಾಂಬ್ ಸ್ಫೋಟ ಪ್ರಕರಣ – ಸಂಸತ್ ಭವನಕ್ಕೆ CISFನಿಂದ ಭದ್ರತೆ?

Huge Parliament Security Breach Lok Sabha Speaker ombirla bans visitor gallery passes 1

ಸಂಸತ್‌ ಭದ್ರತಾ ಲೋಪ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಬೇಕು ಎಂದು ಆಗ್ರಹಿಸಿ ವಿಪಕ್ಷಗಳ ಸಂಸದರು ಕೆಲ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕಲಾಪಕ್ಕೆ ಅಡ್ಡಿಪಡಿಸಿದ್ದಾರೆಂದು ಹಲವು ಸಂಸದರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿತ್ತು.

ಈ ಅಮಾನತು ಪ್ರಕ್ರಿಯೆ ಮುಂದುವರಿದಿದೆ. ಇಂದು ಸಹ ಕರ್ನಾಟಕದ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಸೇರಿ ಮೂವರು ಅಮಾನತುಗೊಂಡಿದ್ದಾರೆ. ಇದನ್ನೂ ಓದಿ: ಮೈತ್ರಿ ಬಳಿಕ ಮೊದಲ ಬಾರಿಗೆ ಮೋದಿಯನ್ನು ಭೇಟಿಯಾದ ದಳಪತಿಗಳು

Share This Article