ಗದಗ: ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರಧಾನಿ ಅಭ್ಯರ್ಥಿ ಅಂತ ಬಿಂಬಿಸುವ ಮೂಲಕ ದಲಿತರಿಗೆ ದ್ರೋಹ, ಮೋಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಗೌರವ ಇದೆ. ಹಿರಿಯ ರಾಜಕಾರಣಿ ಅವರ ಬಗ್ಗೆ ಟೀಕೆ ಮಾಡಲ್ಲ. ಆದರೆ ಸೋಲಿಸಲು ಯಾಕೆ ನಿಲ್ಲಿಸ್ತಾರೆ. ದೇಶದಲ್ಲಿ ದಲಿತರಿಗೆ, ಹಿಂದುಳಿದವರಿಗೆ ಕಾಂಗ್ರೆಸ್ ನಿರಂತರವಾಗಿ ದುರುಪಯೋಗ ಮಾಡ್ತಾನೇ ಬಂದಿದ್ದಾರೆ. ದಲಿತರನ್ನು ನಂಬಿಸಿ ಮೋಸ ಮಾಡಿ ಕಾಂಗ್ರೆಸ್ (Congress) ಇಷ್ಟು ವರ್ಷ ಈ ದೇಶದಲ್ಲಿ ಆಡಳಿತ ನಡೆಸಿತು. ಈಗ ಮತ್ತೊಬ್ಬ ದಲಿತರಿಗೆ ಮೊಸ ಮಾಡ್ತಿದ್ದಾರೆ ಎಂದರು.
ಪ್ರಿಯಾಂಕಾ ಖರ್ಗೆ (Priyank Kharge) ಧರ್ಮ ದ್ರೋಹಿ, ಅವನ ಮಾತಿನ ಬಗ್ಗೆ ಬಹಳ ಬೇಸರ ಬರುತ್ತೆ. ಆದರೆ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗೌರವ ಇದೆ. ಇನ್ನು ಮುಂದೆ ದಲಿತ ಅಸ್ತ್ರ ತೋರಿಸಿ, ದಲಿತ ಪ್ರಧಾನಿ ಮಾಡ್ತೀವಿ ಅಂತ ದಲಿತರಿಗೆ ಮೋಸ ಮಾಡಲು ಹೊರಟಿದ್ದಾರೆ. ಅದು ಇನ್ನುಮುಂದೆ ಸಾಧ್ಯವಿಲ್ಲ. ಬರುವಂತಹ ದಿನಗಳಲ್ಲಿ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರುತ್ತೆ ಎಂದರು. ಇದನ್ನೂ ಓದಿ: ಸೂರಜ್ ರೇವಣ್ಣಗೆ ಬಿಗ್ ರಿಲೀಫ್ – ಎಂಎಲ್‌ಸಿ ಸ್ಥಾನದಿಂದ ಅನರ್ಹಗೊಳಿಸುವಂತೆ ಸಲ್ಲಿಸಿದ್ದ ಅರ್ಜಿ ವಜಾ
ಬರಪರಿಹಾರ ವಿಚಾರವಾಗಿ ದೆಹಲಿಯಲ್ಲಿ ಪ್ರಧಾನಿ ಭೇಟಿ ವೇಳೆ ಸಿದ್ದರಾಮಯ್ಯ ಬಳಿ ಪ್ರಧಾನಿ ಮೋದಿ (Narendra Modi) ಅವರು ಡಿಕೆಶಿ ಹೆಸರು ಪ್ರಸ್ತಾಪ ವಿಚಾರಕ್ಕೆ ವ್ಯಂಗವಾದ ಮಾತುಗಳನ್ನಾಡಿದರು. ಡಿಕೆಶಿಯನ್ನು (DK Shivakumar) ಯಾಕೆ ಕೇಳಿದ್ದಾರೆ ಅಂತ ನನಗೆ ಗೊತ್ತಿಲ್ಲ. ಆದರೆ ಎರಡು ತರನಾದ ಪ್ರಖ್ಯಾತಿ ಇರಬೇಕು. ಅದು ಶಿವಾಜಿ ಆಗಿರಬೇಕು, ಇಲ್ಲವೇ ಅಫ್ಜಲ್ ಖಾನ್ ಆಗಿರಬೇಕು. ಇಬ್ಬರೂ ಪ್ರಖ್ಯಾತಿನೇ. ಒಬ್ಬ ರಾಷ್ಟ್ರ ಭಕ್ತ, ಇನ್ನೊಬ್ಬ ಬಗ್ಗೆ ನಾನು ಹೇಳುವುದಕ್ಕೆ ಇಷ್ಟಪಡಲ್ಲ. ಯಾಕೇಂದ್ರೆ ಯಾವ ಆಂಗಲ್ ನಲ್ಲಿ ಮಾತನಾಡಿದ್ದಾರೆ ಎಂಬುದನ್ನು ಮೋದಿ, ಸಿದ್ದರಾಮಯ್ಯ ಇಬ್ಬರಿಗೆ ಗೊತ್ತು ಅಂತ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯರನ್ನು ಅಪ್ಜಲ್ ಖಾನ್ ಗೆ ಈಶ್ವರಪ್ಪ ಹೋಲಿಸಿದ್ರಾ ಎಂಬ ಪ್ರಶ್ನೆ ಮೂಡಿದೆ.
ದೇಶದಲ್ಲಿ ಹೊಸ ಮಸೀದಿ ಬಗ್ಗೆ ವಿರೋಧ ಮಾಡಿಲ್ಲ. ನಮ್ಮ ದೇವಸ್ಥಾನಗಳನ್ನು ಕೆಡವಿ ಮಸೀದಿ ಕಟ್ಟಿದರಲ್ಲಾ, ಆ ಒಂದೇ ಒಂದು ಮಸೀದಿ ಉಳಿಸಲ್ಲ. ಹಿಂದೂಗಳ ದೇವಸ್ಥಾನ ಕೆಡವಿ ಎಲ್ಲೆಲ್ಲಿ ಮಸೀದಿ ಕಟ್ಟಿದ್ದಾರೆ, ಆ ಮಸೀದಿ ಇರಲು ಬಿಡಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಪುರಾತನ ದೇವಸ್ಥಾನಗಳೆಲ್ಲವನ್ನೂ ಉಳಿಸುತ್ತೇವೆ. ಹೊಸ ಮಸೀದಿಯಲ್ಲಿ ಏನಾದ್ರೂ ಮಾಡಿಕೊಳ್ಳಿ ನಮ್ಮ ಅಭ್ಯಂತರ ಇಲ್ಲ. ಟಿಪ್ಪು ರಕ್ತ ನಮ್ಮ ಮೈಯಲ್ಲಿ ಇಲ್ಲ. ನಮ್ಮಲ್ಲಿ ಇರುವುದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ರಲ್ಲಾ ಅವರ ರಕ್ತ ಇದೆ. ಅವರ ಕನಸು ನನಸು ಮಾಡಲು ಅಯೋಧ್ಯೆ, ಮಥುರ, ಕಾಶಿ ಇಂಥವುಗಳನ್ನು ಉಳಿಸುತ್ತೆವೆ. ಎಂದರು.