ಕನ್ನಡದಲ್ಲೂ ಹನುಮಾನ್: ಫಸ್ಟ್ ಲುಕ್ ರಿಲೀಸ್

Public TV
1 Min Read
Hanuman 3

ಪ್ರಶಾಂತ್ ವರ್ಮಾ (Prashant Verma) ಆಕ್ಷನ್ ಕಟ್ ಹೇಳಿರುವ ತೇಜ ಸಜ್ಜ (Teja Sajja) ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಹನು-ಮಾನ್’ (Hanuman) ಟೀಸರ್ ಬಿಡುಗಡೆಯಾಗಿದೆ. ಪ್ರೈಮ್ ಶೋ ಎಂಟಟೈನ್ಮೆಂಟ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಟ್ರೈಲರ್ ಝಲಕ್ ಮೂಲಕ ಪ್ರೇಕ್ಷಕರೆದುರು ಸೂಪರ್ ಹೀರೋ ‘ಹನುಮಾನ್’ ದರ್ಶನ ಕೊಟ್ಟಿದ್ದಾರೆ.

Hanuman 4

ನಿರ್ದೇಶಕ ಪ್ರಶಾಂತ್ ವರ್ಮಾ ಭಾರತದ ಮೊದಲ ಸೂಪರ್ ಹೀರೋ ‘ಹನು-ಮಾನ್’ ಬಗ್ಗೆ ಕಥೆ ಹೆಣೆದು ಪ್ಯಾನ್ ಇಂಡಿಯಾ ನಿರ್ದೇಶಕನಾಗಿ ಹೊರ ಹೊಮ್ಮುತ್ತಿದ್ದಾರೆ. ಚಿತ್ರದಲ್ಲಿ ನಾಯಕ ನಟನಾಗಿ ತೇಜ ಸಜ್ಜ ನಟಿಸುತ್ತಿದ್ದು, ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸಿರೋದು ಟ್ರೇಲರ್ ನೋಡಿದಾಗಲೇ ತಿಳಿದು ಬರುತ್ತೆ. ಚಿತ್ರದಲ್ಲಿ ನಾಯಕಿಯಾಗಿ ಅಮೃತಾ ಐಯ್ಯರ್ ನಟಿಸಿದ್ದಾರೆ. ಟ್ರೇಲರ್ ಸಖತ್ ಪ್ರಾಮಿಸಿಂಗ್ ಆಗಿದ್ದು, ನಾಯಕ ನಟ ತೇಜ ಸಜ್ಜ ಲುಕ್, ಚಿತ್ರದ ಮೇಕಿಂಗ್, ಕ್ಯಾಮೆರಾ ವರ್ಕ್, ಮ್ಯೂಸಿಕ್ ಎಲ್ಲವೂ ಗಮನ ಸೆಳೆಯುತ್ತಿದೆ.

Hanuman 1

ಯಥೋ ಧರ್ಮ ತತೋ ಹನುಮಾ… ಯಥೋ ಹನುಮ ತತೋ ಜಯ… (ಎಲ್ಲಿ ಸದಾಚಾರವಿದೆಯೋ ಅಲ್ಲಿ ಹನುಮಂತನು, ಮತ್ತು ಎಲ್ಲಿ ಹನುಮಂತ ಇದ್ದಾನೋ ಅಲ್ಲಿ ಜಯವಿದೆ ಎಂಬ ಡೈಲಾಗ್ ಮೂಲಕ ಹನುಮಾನ್ ಪ್ರಪಂಚನ್ನು ಪರಿಚಯಿಸಲಾಗಿದೆ. ಅಂಜನಾದ್ರಿ ಬೆಟ್ಟ, ಹನುಮಾನ್ ಪ್ರತಿಮೆ ಟ್ರೇಲರ್ ಹೈಲೆಟ್ಸ್ ಗಳಲ್ಲೊಂದು.

Hanuman 2

ವರಲಕ್ಷಿ ಶರತ್ ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೆಟಪ್ ಶ್ರೀನು, ಸತ್ಯ ಒಳಗೊಂಡ ಸ್ಟಾರ್ ಕಲಾವಿದರ ತಾರಾಬಳಗ ಚಿತ್ರದಲ್ಲಿದೆ. ಯುವ ಹಾಗೂ ಪ್ರತಿಭಾವಂತ ಸಂಗೀತ ನಿರ್ದೇಶಕರಾದ ಗೌರಹರಿ, ಅನುದೀಪ್ ದೇವ್ ಮತ್ತು ಕೃಷ್ಣ ಸೌರಭ್ ಸಂಗೀತ ನಿರ್ದೇಶನ, ದಶರಧಿ ಶಿವೇಂದ್ರ ಕ್ಯಾಮೆರಾ ವರ್ಕ್, ಎಸ್. ಬಿ ರಾಜು ತಲರಿ ಸಂಕಲನ ಚಿತ್ರಕ್ಕಿದೆ.

ಪ್ಯಾನ್ ವರ್ಲ್ಡ್ ಲೆವೆಲ್ ನಲ್ಲಿ ಹನುಮಾನ್ ಸಿನಿಮಾ ರಿಲೀಸ್ ಆಗ್ತಿದೆ. ಭಾರತೀಯ ವಿವಿಧ ಭಾಷೆಗಳಾದ ತೆಲುಗು, ಕನ್ನಡ, ಮರಾಠಿ, ತಮಿಳು, ಮಲಯಾಳಂ, ಇಂಗ್ಲಿಷ್, ಸ್ಯಾನೀಶ್, ಚೈನೀಸ್, ಜಪಾನೀಸ್ ಮತ್ತು ಕೊರಿಯನ್ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಸಂಕ್ರಾಂತಿ ಹಬ್ಬಕ್ಕೆ ವಿಶ್ವಾದ್ಯಂತ ಹನುಮಾನ್ ಸಿನಿಮಾದ ದರ್ಶನವಾಗಲಿದೆ.

Share This Article