ಯತ್ನಾಳ್‍ನಂತಹ ಹುಚ್ಚ ಯಾರಿಲ್ಲ ಬಿಡಿ: ಹೆಚ್.ವಿಶ್ವನಾಥ್

Public TV
1 Min Read
H.Vishwanath

ವಿಜಯಪುರ: ಯತ್ನಾಳ್‍ರಂತಹ (Basangouda Patil Yatnal) ಹುಚ್ಚ ಯಾರು ಇಲ್ಲ ಬಿಡಿ. ಅವರ ಮಾತಿಗೆ ರಾಜ್ಯದ ಜನತೆ ಬೆಲೆ ಕೊಡಬಾರದು. ಯತ್ನಾಳ್ ರಾಜಕಾರಣಕ್ಕೆ ಅಪವಾದ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (H.Vishwanath) ಕಿಡಿಕಾರಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಜಾತಿಯ ಹಾಗೂ ತಮ್ಮ ಪಕ್ಷದ ನಿರಾಣಿಯಂತಹ ಒಬ್ಬ ಹಿರಿಯರನ್ನು ಹಂದಿ, ನಾಯಿ ಎಂದು ಕರೆಯುವ ಯತ್ನಾಳ್‍ಗೆ ನಾಚಿಕೆಯಾಗಬೇಕು. ಇವರೊಬ್ಬ ನಾಯಕನಾ? ಯಾರಾದ್ರೂ ಹೀಗೆ ಮಾತನಾಡುತ್ತಾರಾ? ಮುಂದೆ ಬರುವಂತಹ ರಾಜಕಾರಣಿಗಳಿಗೆ ಇವರ ಸಂದೇಶ ಏನು? ಅಯೋಗ್ಯತನಕ್ಕೂ ಒಂದು ಮಿತಿ ಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನನ್ನ 3ನೇ ಅವಧಿಯಲ್ಲಿ ಭಾರತ ಟಾಪ್‌-3 ಆರ್ಥಿಕತೆಯಲ್ಲಿ ಒಂದಾಗಲಿದೆ: ಮೋದಿ ಮತ್ತೊಂದು ಗ್ಯಾರಂಟಿ

ಯಡ್ಡಿಯೂರಪ್ಪ ಮಗ ವಿಜಯೇಂದ್ರರಿಂದಲೇ ಜೈಲಿಗೆ ಹೋದರು. ಆರ್‌ಟಿಜಿಎಸ್‌ನಲ್ಲಿ  20 ಕೋಟಿ ಲಂಚಾ ಪಡೆದರು. ಯಾರದ್ರೂ
ಆರ್‌ಟಿಜಿಎಸ್‌ನಲ್ಲಿ ‌ ಲಂಚ ಪಡಿಯುತ್ತಾರಾ? ಇಂತಹ ಒಬ್ಬ ಪೆದ್ದ ಹಾಗೂ ಲಂಚಕೋರ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷ, ಯಾರಿಗಾದರೂ ಗೌರವ ಇದೆಯೇ? ಎಂದು ಅವರು ಕಿಡಿಕಾರಿದ್ದಾರೆ.

ಟಿಪ್ಪು ಸುಲ್ತಾನ್ ಸಹ ಮೈಸೂರು ಮಹಾಸಂಸ್ಥಾನವನ್ನು ಅಭಿವೃದ್ಧಿ ಮಾಡಿದವನು. ಮಹಾರಾಜರಿಗೆ ಪೂರಕವಾಗಿ ನಡೆದು ಕೊಂಡವನು. ಹೀಗಾಗಿ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಟ್ಟರೆ ನಾನು ಸಂತೋಷ ಪಡುತ್ತೇನೆ. ಮೈಸೂರು ಹುಲಿ ಟಿಪ್ಪು ಹೆಸರನ್ನು ವಿಮಾನ ನಿಲ್ದಾಣಕ್ಕಿಟ್ಟರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ (BJP) ಅಯೋಗ್ಯ ತನದ ತೊಪ್ಪೆ ಇದ್ದ ಹಾಗೆ. ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಹಿಂದೂ, ಇದೇ ಆಯ್ತು. ಜನರಿಗೆ ಹೊಟ್ಟೆಗೆ ಏನು ಬೇಕು, ಮಕ್ಕಳ ವಿದ್ಯಾಭ್ಯಾಸಕ್ಕೆ ಏನು ಬೇಕು ಕೇಳಿ. ಅವರ ಬದುಕು ಏನೆಂದು ಕೇಳಿ, ಅದನ್ನ ಬಿಟ್ಟು ಇಂತಹ ಕೆಲಸಕ್ಕೆ ಬಾರದೇ ಇರುವುದನ್ನು ಮಾಡುತ್ತಾ ಹೊರಟಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಲೋಕಸಭೆ ಚುನಾವಣೆ ವಿಚಾರವಾಗಿ, ಟಿಕೇಟ್ ಕೇಳುತ್ತೇನೆ. ಕೊಟ್ಟರೆ ಸಂತೋಷ ಇಲ್ಲ ಎಂದರೆ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮಾವೋವಾದಿಗಳ ವಿರುದ್ಧ ಎನ್‌ಕೌಂಟರ್‌; ಪ್ಯಾರಾಮಿಲಿಟರಿ ಯೋಧ ಹುತಾತ್ಮ

Share This Article