ಸಂಸತ್ತಿನಲ್ಲಿ ಭದ್ರತಾ ಲೋಪ ಕೇಸ್‌ – ಭಾರತಕ್ಕೆ ಬೇಕಾಗಿರುವುದು ಬಾಂಬ್ ಎಂದು ಫೇಸ್ಬುಕ್‌ನಲ್ಲಿ ಬರೆದುಕೊಂಡಿದ್ದ ಮಾಸ್ಟರ್‌ಮೈಂಡ್‌

Public TV
1 Min Read
Lalit Jha 1

ನವದೆಹಲಿ: ಸಂಸತ್ತಿನಲ್ಲಿ ಭದ್ರತಾ ಲೋಪ (Parliament Security Breach) ಪ್ರಕರಣದಲ್ಲಿ ಬಂಧಿತನಾಗಿರುವ ಮಾಸ್ಟರ್‌ಮೈಂಡ್ ಲಲಿತ್‌ ಝಾ (Lalit Jha) ಘಟನೆಗೂ ಕೆಲವು ತಿಂಗಳ ಮುನ್ನ ಫೇಸ್ಬುಕ್‌ನಲ್ಲಿ ʻಭಾರತಕ್ಕೆ ಬೇಕಾಗಿರುವುದು ಬಾಂಬ್ʼ ಎಂದು ಬಂಗಾಳಿ ಭಾಷೆಯಲ್ಲಿ ಬರೆದುಕೊಂಡಿದ್ದ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಆರೋಪಿ ಲಲಿತ್‌ ಝಾನನ್ನ ತನಿಖೆಗೆ ಒಳಪಡಿಸಿರುವ ಪೊಲೀಸರು (Delhi Police) ಆತನ ಸೋಶಿಯಲ್ ಮೀಡಿಯಾ ಹಿನ್ನೆಲೆಯನ್ನು ಪರಿಶೀಲಿಸಲು ಪ್ರತ್ಯೇಕ ತಂಡವನ್ನೂ ರಚಿಸಿದ್ದಾರೆ. ತನಿಖೆಯಲ್ಲಿ ವ್ಯವಸ್ಥೆಯ ವಿರುದ್ಧ ಝಾ ಅಸಮಾಧಾನ ವ್ಯಕ್ತಪಡಿಸಿದ ಪೋಸ್ಟ್‌ಗಳು ಪೊಲೀಸರ ಗಮನ ಸೆಳೆದಿವೆ. ಇದನ್ನೂ ಓದಿ: ಸಂಸತ್‌ನಲ್ಲಿ ಭದ್ರತಾ ಲೋಪ- 6ನೇ ಆರೋಪಿ ಅರೆಸ್ಟ್

Parliament Smoke Bomb

ದಬ್ಬಾಳಿಕೆ, ಅನ್ಯಾಯ ಮತ್ತು ಅರಾಜಕತೆಯ ವಿರುದ್ಧ ಪ್ರಬಲ ಧ್ವನಿ ಎತ್ತಲು ʻಭಾರತಕ್ಕೆ ಇಂದು ಬಾಂಬ್ ಅಗತ್ಯವಿದೆʼ ಎಂದು ಬಂಗಾಳಿ ಭಾಷೆಯಲ್ಲಿ ಬರೆದುಕೊಂಡಿದ್ದಾನೆ. ಇಂತಹದ್ದೇ ಹಲವು ಪೊಸ್ಟ್‌ಗಳು ಕಂಡುಬಂದಿವೆ. ಈ ಪೋಸ್ಟ್‌ಗಳನ್ನು ಬರೆಯುವ ಉದ್ದೇಶ ಏನಿರಬಹುದು ಎಂಬ ಮಾಹಿತಿಯನ್ನೂ ಪಡೆಯಲಾಗುತ್ತಿದೆ.

ನವೆಂಬರ್ 5ರ ಪೊಸ್ಟ್‌ನಲ್ಲಿ, ತಮ್ಮ ಹಿನ್ನೆಲೆಯನ್ನು ಲೆಕ್ಕಿಸದೆ ತಮ್ಮ ಹಕ್ಕುಗಳಿಗಾಗಿ ಮಾತನಾಡುವ ಜನರನ್ನು ಅನಿವಾರ್ಯವಾಗಿ ಕಮ್ಯುನಿಸ್ಟ್ ಎಂದು ಘೋಷಿಸಲ್ಪಡುತ್ತಾರೆ ಎಂದು ಬರೆದುಕೊಂಡಿದ್ದಾರೆ. ಕೇವಲ‌ ಪೊಸ್ಟ್ ಮಾತ್ರವಲ್ಲದೇ ಲಲಿತ್ ಸಂವಾದ ನಡೆಸಿದ ವ್ಯಕ್ತಿಗಳ ಬಗ್ಗೆ ಅವರ ಹಿನ್ನೆಲೆ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಇದನ್ನೂ ಓದಿ: ಸಂಸತ್‌ ದಾಳಿಗೆ ಪ್ರಧಾನಿ ಮೋದಿ ನೀತಿಗಳೇ ಕಾರಣ: ರಾಹುಲ್‌ ಗಾಂಧಿ ಆರೋಪ

ಬುಧವಾರ ನಡೆದ ಸಂಸತ್ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 6 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ 5ನೇ ಆರೋಪಿ ಲಲಿತ್ ಝಾ, ದೆಹಲಿ ಪೊಲೀಸರ ಮುಂದೆ ಗುರುವಾರ ಶರಣಾದನು. ಇಡೀ ಪ್ರಕರಣದ ಮಾಸ್ಟರ್‌ಮೈಂಡ್ ಎಂದು ಲಲಿತ್ ಝಾ ನನ್ನ ನಂಬಲಾಗಿದೆ. ಇತರೆ ಆರೋಪಿಗಳ ಕುರಿತ ಸಾಕ್ಷ್ಯ ನಾಶ ಮಾಡಿರುವ ಆರೋಪಗಳೂ ಕೇಳಿ‌ಬಂದಿವೆ. ಇದನ್ನೂ ಓದಿ: ಕೊರೊನಾ ಭೀತಿ ಮತ್ತೆ ಶುರು; ಕೇರಳದ ಮಹಿಳೆಯಲ್ಲಿ ಕೋವಿಡ್ ಉಪತಳಿ ಜೆಎನ್.1 ಪತ್ತೆ 

Share This Article