ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಟ್ಟರೇ ತಪ್ಪೇನಿದೆ – ನಾಗೇಂದ್ರ ಪ್ರಶ್ನೆ

Public TV
1 Min Read
B NAGENDRA

ಬಳ್ಳಾರಿ: ಮೈಸೂರು ವಿಮಾನ ನಿಲ್ದಾಣಕ್ಕೆ (Mysuru Airport) ಟಿಪ್ಪು ಹೆಸರನ್ನು ಇಟ್ಟರೇ ತಪ್ಪೇನಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಖಾತೆಯ ಸಚಿವ ನಾಗೇಂದ್ರ (Nagendra) ಪ್ರಶ್ನಿಸಿದ್ದಾರೆ.

ಟಿಪ್ಪು ಸುಲ್ತಾನ್ (Tipu Sultan) ಕೂಡ ಬ್ರಿಟಿಷರ (British) ವಿರುದ್ಧ ಹೋರಾಟ ಮಾಡಿದ್ದಾರೆ. ಒಂದೊಂದು ಕಡೆ ಒಬ್ಬೊಬ್ಬ ಮಹನೀಯರ ಹೆಸರು ಇಟ್ಟಂತೆ ಇಲ್ಲಿಯೂ ಇಡಬಹುದು. ಆದರೆ ಅಂತಿಮ ನಿರ್ಣಯ ಸರ್ಕಾರಕ್ಕೆ ಬಿಟ್ಟದ್ದು. ಯಾರು ಬೇಕಾದರೂ ಅವರ ಅಭಿಪ್ರಾಯ ಮತ್ತು ಭಾವನೆ ತಿಳಿಸಬಹುದು ಎಂದರು. ಇದನ್ನೂ ಓದಿ: ಗೆಳತಿ ಕಾಲಿನ ಮೇಲೆ ಕಾರು ಹರಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ!

ನಮ್ಮ ಶಾಸಕ ಪ್ರಸಾದ್ ಅಬ್ಯಯ್ಯ ಅವರು ಟಿಪ್ಪು ಹೆಸರನ್ನು ಇಡಬೇಕೆಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರನ್ನು ಇಟ್ಟರೇ ತಪ್ಪೇನಿದೆ? ನೀವೇ ಹೇಳಿ ಎಂದು ಹೇಳಿದರು.

ಬೆಳಗಾವಿಯಲ್ಲಿ (Belagavi) ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೆಳಗಾವಿ ಘಟನೆ ಮಣಿಪುರ ಘಟನೆ ಬಹುತೇಕ ಬೇರೆ ಬೇರೆಯಾದರೂ ಅಲ್ಲಿ ಇಲ್ಲಿ ಎರಡು ಕಡೆ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ. ಅಲ್ಲಿಗೆ ಯಾವ ಕೇಂದ್ರದ ತಂಡ ಹೋಗೊದಿಲ್ಲ ಇಲ್ಲಿಗೆ ಬರುತ್ತಾರೆ ಅಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಎಲ್ಲದರಲ್ಲೂ ರಾಜಕೀಯ ಮಾಡಲು ಮುಂದಾಗುತ್ತಿದೆ. ರಾಜ್ಯಾದ್ಯಂತ ಬಿಜೆಪಿಯವರು (BJP) ಡೋಂಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಈಗಾಗಲೇ ಸಿಎಂ ಸೇರಿದಂತೆ ಎಲ್ಲರೂ ಸಂತ್ರಸ್ತೆಯನ್ನು ಭೇಟಿ ಮಾಡಿ ಪರಿಹಾರ ನೀಡಿದ್ದೇವೆ. ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

 

Share This Article