ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಭಾರತ ಮೂಲದ ವಿವೇಕ್ ರಾಮಸ್ವಾಮಿ (Vivek Ramaswamy) ಹಿಂದೂ ಧರ್ಮದ ಸಾರ್ವತ್ರಿಕ ಮೌಲ್ಯಗಳ ಬಗ್ಗೆ ಮಾತನಾಡಿದ್ದಾರೆ.
ಅಮೆರಿಕದ ಸಿಎನ್‌ಎನ್ ಟೌನ್ ಹಾಲ್‌ನಲ್ಲಿ ವಿವೇಕ್ ಮಾತನಾಡುತ್ತಿದ್ದಾಗ, ಅಮೆರಿಕ (America) ಹಿಂದೂ ಅಧ್ಯಕ್ಷರನ್ನು ಒಪ್ಪಿಕೊಳ್ಳಬಹುದೇ ಎಂಬ ಪ್ರಶ್ನೆ ಕೇಳಿಬಂತು. ಅದಕ್ಕೆ ವಿವೇಕ್ ಪ್ರತಿಕ್ರಿಯಿಸಿ, ನನ್ನದು ‘ನಕಲಿ ಮತಾಂತರ’ ಅಲ್ಲ, ನಾನು ಹಿಂದೂ (Hinduism). ರಾಜಕೀಯ ವೃತ್ತಿಜೀವನವನ್ನು ಹೆಚ್ಚಿಸಲು ಸುಳ್ಳು ಹೇಳುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ, ಹಿಂದೂ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮ ಒಂದೇ ಸಮಾನ ಮೌಲ್ಯವನ್ನು ಹೇಳುತ್ತವೆ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಹಮಾಸ್ ಉಗ್ರರು ಅವಿತುಕೊಳ್ಳುತ್ತಿದ್ದ ಸುರಂಗಗಳಿಗೆ ಸಮುದ್ರದ ನೀರು ಹರಿಸಿದ ಇಸ್ರೇಲ್
ನಾನು ನಕಲಿ ಮತಾಂತರ ಆಗಬಹುದು. ಆದರೆ ಅದನ್ನು ನಾನು ಮಾಡುವುದಿಲ್ಲ. ನನ್ನ ನಂಬಿಕೆಯ ಬಗ್ಗೆ ನಿಮಗೆ ಹೇಳುತ್ತೇನೆ. ನನ್ನ ಪಾಲನೆ ಸಾಕಷ್ಟು ಸಾಂಪ್ರದಾಯಿಕವಾಗಿತ್ತು. ಮದುವೆಗಳು ಪವಿತ್ರವೆಂದು ನನ್ನ ಪೋಷಕರು ನನಗೆ ಹೇಳುತ್ತಿದ್ದರು. ಕುಟುಂಬಗಳು ಸಮಾಜದ ಮೂಲಾಧಾರವಾಗಿದೆ ಎಂದು ತಿಳಿಸಿದ್ದಾರೆ.
ದೇವರು ಎಂಬುದು ಸತ್ಯ. ದೇವರ ಹೆಸರನ್ನು ವ್ಯರ್ಥವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಹೆತ್ತವರನ್ನು ಗೌರವಿಸಿ. ಕೊಲ್ಲಬೇಡಿ, ಸುಳ್ಳು ಹೇಳಬೇಡಿ, ಮೋಸ ಮಾಡಬೇಡಿ, ಕದಿಯಬೇಡಿ. ವ್ಯಭಿಚಾರ ಮಾಡಬೇಡಿ, ಆಸೆಪಡಬೇಡ. ನಾವು ಒಂದೇ ಮೌಲ್ಯವನ್ನು ಸಾಮಾನ್ಯವಾಗಿ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಪಾಕ್ ಠಾಣೆ ಮೇಲೆಯೇ ಉಗ್ರರ ದಾಳಿ – 23 ಪೊಲೀಸರ ದುರ್ಮರಣ
ನನ್ನ ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ, ಪ್ರತಿಯೊಬ್ಬ ವ್ಯಕ್ತಿಯು ಒಂದು ಕಾರಣಕ್ಕಾಗಿ ಇಲ್ಲಿದ್ದಾನೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ದೇವರು ಪ್ರತಿಯೊಬ್ಬರೊಳಗೂ ಇದ್ದಾನೆ. ದೇವರು ನಮ್ಮ ಮೂಲಕ ವಿವಿಧ ರೀತಿಯಲ್ಲಿ ಕೆಲಸ ಮಾಡಿದರೂ, ನಾವು ಎಲ್ಲರೂ ಸಮಾನರು ಎಂದು ಹೇಳಿದ್ದಾರೆ.
ಅಕ್ರಮ ವಲಸಿಗರಿಗೆ ಜನ್ಮಸಿದ್ಧ ಪೌರತ್ವವನ್ನು ನಿಷೇಧಿಸುವ ಕರೆಯನ್ನು ರಾಮಸ್ವಾಮಿ ಪುನರುಚ್ಚರಿಸಿದ್ದಾರೆ. ಕಾನೂನು ಉಲ್ಲಂಘಿಸುವವರಿಗೆ ನಾವು ಬಹುಮಾನ ನೀಡಬಾರದು ಎಂದು ಪ್ರತಿಪಾದಿಸಿದ್ದಾರೆ. ಇದೇ 2024 ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ವಿವೇಕ್ ರಾಮಸ್ವಾಮಿ ಸ್ಪರ್ಧಿಸಲಿದ್ದಾರೆ. ಇದನ್ನೂ ಓದಿ: ಮೋದಿಯನ್ನ ಹೆಸರಿಸಬಹುದು ಅಂತ ಊಹಿಸೋಕು ಸಾಧ್ಯವಿಲ್ಲ – ಹಾಡಿ ಹೊಗಳಿದ ಪುಟಿನ್
1985ರ ಆಗಸ್ಟ್ 9 ರಂದು ಜನಿಸಿದ್ದ ವಿವೇಕ್ ರಾಮಸ್ವಾಮಿ ನೈಋತ್ಯ ಓಹಿಯೋದ ಮೂಲದವರು. ಅವರ ತಾಯಿ ಜೆರಿಯಾಟ್ರಿಕ್ ಮನೋವೈದ್ಯರಾಗಿದ್ದರು. ಅವರ ತಂದೆ ಜನರಲ್ ಎಲೆಕ್ಟ್ರಿಕ್‌ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪೋಷಕರು ಕೇರಳದಿಂದ ಅಮೆರಿಕಗೆ ವಲಸೆ ಹೋಗಿದ್ದರು.