ದಶಪಥ ಹೆದ್ದಾರಿಯಲ್ಲಿ ನಿರ್ಮಾಣವಾಗದ ಸ್ಕೈವಾಕ್ – ಜೀವ ಭಯದಲ್ಲಿ ರಸ್ತೆ ದಾಟುವ ಸಾರ್ವಜನಿಕರು

Public TV
1 Min Read
Ramanagara

ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ (Expressway) ನಿರ್ಮಾಣ ಆಗಿ ವರ್ಷ ಆಗುತ್ತಾ ಬಂದರೂ ಅವ್ಯವಸ್ಥೆ ಸರಿಪಡಿಸದೇ ಹೆದ್ದಾರಿ ಪ್ರಾಧಿಕಾರ ಕಣ್ಮುಚ್ಚಿ ಕುಳಿತಿದೆ. ದಶಪಥ ಹೆದ್ದಾರಿಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮೀಣ ಭಾಗಗಳಲ್ಲಿ ಸ್ಕೈವಾಕ್ (Skywalk) ನಿರ್ಮಾಣವಾಗದೇ ಜೀವಭಯದಲ್ಲಿ ಹೈವೇ ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿತ್ಯ ಸ್ಥಳೀಯ ಗ್ರಾಮಸ್ಥರು, ವಿದ್ಯಾರ್ಥಿಗಳು ರಸ್ತೆ ದಾಟುವಾಗ ಸಣ್ಣಪುಟ್ಟ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೇ ಸರ್ವಿಸ್ ರಸ್ತೆಯಲ್ಲಿ ಬಸ್ ನಿಲ್ದಾಣ, ಬೀದಿ ದೀಪಗಳಿಲ್ಲದೇ ವಾಹನ ಸಂಚಾರಿಗೆ ತೊಂದರೆ ಉಂಟಾಗುತ್ತಿದೆ. ಇದನ್ನೂ ಓದಿ: ಜಾತಿ ಗಣತಿಗೆ ನನ್ನ ವಿರೋಧವಿಲ್ಲ, ಸಮೀಕ್ಷೆ ವೈಜ್ಞಾನಿಕವಾಗಿರಬೇಕು: ಡಿಕೆಶಿ

ಅತ್ತ ಪೊಲೀಸ್ ಇಲಾಖೆ ಕೇವಲ ದಂಡಾಸ್ತ್ರಕ್ಕೆ ಮಾತ್ರ ಸೀಮಿತವಾಗಿದ್ದರೆ ಇತ್ತ ದುಬಾರಿ ಟೋಲ್ ವಸೂಲಿ ಮಾಡುತ್ತಿರುವ ಹೆದ್ದಾರಿ ಪ್ರಾಧಿಕಾರ ಸಮಸ್ಯೆಗಳ ಬಗ್ಗೆ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದೆ. ಇನ್ನಾದರೂ ಹೆದ್ದಾರಿ ಪ್ರಾಧಿಕಾರ ಇತ್ತ ಗಮನಹರಿಸುವಂತೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ದೀಪ ಆರುವಾಗ ಜೋರಾಗಿ ಉರಿಯುತ್ತೆ, ಈಗ ಜೋರಾಗಿ ಉರಿಯುತ್ತಿದೆ ಅಷ್ಟೇ: ಯತ್ನಾಳ್‌ಗೆ ನಿರಾಣಿ ಟಾಂಗ್‌

Share This Article