ನನ್ನ 2ನೇ ತಾಯಿಯ ರೂಪದಲ್ಲಿ ನೋಡಿದ್ದೀನಿ: ಅನಂತ್‌ನಾಗ್ ಭಾವುಕ

Public TV
2 Min Read
leelavathi 7

ಟಿ ಲೀಲಾವತಿ (Leelavathi) ಅವರ ನಿಧನಕ್ಕೆ ಹಿರಿಯ ನಟ ಅನಂತ್‌ನಾಗ್ (Ananth Nag) ಸಂತಾಪ ಸೂಚಿಸಿದ್ದಾರೆ. ಲೀಲಾವತಿ ಅವರನ್ನ ನನ್ನ ಎರಡನೇ ತಾಯಿಯ ರೂಪದಲ್ಲಿ ನೋಡಿದ್ದೀನಿ ಎಂದು ಅನಂತ್‌ನಾಗ್ ಅವರು ಲೀಲಾವತಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರೊಂದಿಗಿನ ಒಡನಾಟದ ದಿನಗಳನ್ನ ಅನಂತ್‌ನಾಗ್ ಸ್ಮರಿಸಿದ್ದಾರೆ.

Leelavathi 5

ನನ್ನ ಬದುಕಿನಲ್ಲಿ ಲೀಲಾವತಿ ಅವರನ್ನ ನನ್ನ ಎರಡನೇ ತಾಯಿಯ ರೂಪದಲ್ಲಿ ನೋಡಿದ್ದೀನಿ. ಅದೇ ರೀತಿಯ ಪ್ರೀತಿ ಮತ್ತು ಗೌರವವನ್ನು ಕೊಟ್ಟಿದ್ದೀನಿ. ಅವರ ಜೊತೆ ಸುಮಾರು 50 ವರ್ಷಗಳಿಂದ ನಟಿಸಿದ ನೆನಪುಗಳಿವೆ ಎಂದಿದ್ದಾರೆ ಅನಂತ್‌ನಾಗ್. ಕೆಲದಿನಗಳಿಂದ ಅವರಿಗೆ ಅನಾರೋಗ್ಯ ಎಂದು ತಿಳಿದಾಗ, ನಾನು ಮತ್ತು ನನ್ನ ಪತ್ನಿ ಗಾಯಿತ್ರಿ ಅವರ ಮನೆಗೆ ಲೀಲಾವತಿ ಅಮ್ಮನವರೊಂದಿಗೆ 4-5 ಗಂಟೆಗಳ ಕಾಲ ಕಳೆದಿದ್ದೇನೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಭಾರತ ಕಂಡ ಶ್ರೇಷ್ಠ ಕಲಾವಿದೆ ಲೀಲಾವತಿ: ನಟ ಉಪೇಂದ್ರ

ANANTH NAGನಿನ್ನೆ ಅವರ ನಿಧನದ ಸುದ್ದಿ ಕೇಳಿದಾಗ ಬೇಜಾರಾಯ್ತು. ನನಗೆ ಮೊದಲು ಅವರು ಸಿಕ್ಕಿದ್ದೆ, ನನ್ನ ಸಿನಿಮಾದ ತಾಯಿಯ ಪಾತ್ರದಲ್ಲಿ ಆಮೇಲೆ ಸಹೋದರಿಯಾಗಿ ನಟಿಸಿದ್ದಾರೆ. ನನ್ನ ಜೊತೆ ಲೀಲಾವತಿ ಅವರು 35ರಿಂದ 40 ಸಿನಿಮಾಗಳನ್ನ ಮಾಡಿದ್ದಾರೆ ಎಂದು ಅನಂತ್‌ ನಾಗ್‌ ಹೇಳಿದ್ದಾರೆ.

ನನ್ನ ತಾಯಿ ಪುತ್ತೂರಿನವರು, ಲೀಲಾವತಿ ಅವರು ಬೆಳ್ತಂಗಡಿ ಅವರು ಅವರನ್ನೇ ನೋಡಿದ್ರೆ ಅಮ್ಮಾ ಅನ್ನೋ ಪದ ಬಿಟ್ರೆ ಬೇರೇ ಏನೂ ನನ್ನ ಬಾಯಿಗೆ ಬರುತ್ತಿರಲಿಲ್ಲ. ವೃತ್ತಿ ಬದುಕಿನ ಮೇಲೆ ಅವರಿಗೆ ಅಗಾಧವಾಗ ಪ್ರೀತಿ, ನಿಷ್ಠೆ ಇತ್ತು. ಆಗ ಪ್ರಧಾನ ಮಂತ್ರಿ ಇಂದಿರಾಗಾಂಧಿ ಅವರ ಕಡೆಯಿಂದ ನಟನೆಗೆ ಪ್ರಶಸ್ತಿ ಬಂದಿದ್ದಕ್ಕೆ ಲೀಲಾವತಿ ಅಮ್ಮ ಸಂಭ್ರಮಿಸಿದ್ದರು ಎಂದು ಹಳೆಯ ದಿನಗಳನ್ನ ಅನಂತ್‌ನಾಗ್‌ ಸ್ಮರಿಸಿದ್ದಾರೆ.

ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ (ಡಿ.8) ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಡಿಸೆಂಬರ್ 8ರಂದು ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದರು.

Share This Article