ಅಮ್ಮ-ಮಗನ ಬಾಂಧವ್ಯವೇ ಬೇರೆ ತರಹ ಇತ್ತು- ಶಿವರಾಜ್‌ಕುಮಾರ್

Public TV
1 Min Read
SHIVANNA

ಹಿರಿಯ ನಟಿ ಲೀಲಾವತಿ (Leelvathi) ನಿಧನಕ್ಕೆ ನಟ ಶಿವರಾಜ್‌ಕುಮಾರ್ (Shivarajkumar) ಅವರು ಸಂತಾಪ ಸೂಚಿಸಿದ್ದಾರೆ. ಲೀಲಾವತಿ ಅವರ ನಿಧನ ನಮ್ಮ ಚಿತ್ರರಂಗಕ್ಕೆ ದೊಡ್ಡ ನಷ್ಟ ಆಗಿದೆ. ಅಮ್ಮ ಮತ್ತು ಮಗನ ಬಾಂಧವ್ಯವೇ ಬೇರೆ ತರಹ ಇತ್ತು ಎಂದು ಶಿವಣ್ಣ ಭಾವುಕರಾಗಿದ್ದಾರೆ.

Leelavathi1

ಕಳೆದ ವಾರ ಲೀಲಾವತಿ ಅಮ್ಮನವರನ್ನ ಮಾತನಾಡಿಸಿದೆ. ಅವರ ನಿಧನದಿಂದ ನಮ್ಮ ಚಿತ್ರರಂಗಕ್ಕೆ ನಷ್ಟ ಆಗಿದೆ. ಮನಸ್ಸಿಗೆ ತುಂಬಾ ನೋವಾಗಿದೆ ಎಂದಿದ್ದಾರೆ. ವಿನೋದ್ ಯಾವಾಗಲೂ ಹೇಳುತ್ತಿದ್ದರು ಅವರ ಆರೋಗ್ಯದ ಬಗ್ಗೆ ನಾವೆಲ್ಲಾ ಅವರ ಜೊತೆಗೆ ಇರುತ್ತೀವಿ ಎಂದು ಹೇಳಿದ್ದೆ, ಲೀಲಾವತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶಿವಣ್ಣ ಮಾತನಾಡಿದ್ದಾರೆ. ಇದನ್ನೂ ಓದಿ:ಸನ್ಮಾನ, ಅವಮಾನ ಎರಡೂ ಕಂಡವರು ಲೀಲಾವತಿ : ನಟಿ ಉಮಾಶ್ರೀ

ಲೀಲಾವತಿ ಅಮ್ಮನ ವಿನೋದ್ ತುಂಬಾ ಹಚ್ಚಿಕೊಂಡಿದ್ದರು. ಅವರಿಬ್ಬರ ಬಾಂಧವ್ಯವೇ ಬೇರೇ ತರಹ ಇತ್ತು. ಈಗ ಅದೆನ್ನೆಲ್ಲಾ ಯೋಚನೆ ಮಾಡಿದಾಗ ಬೇಜಾರಾಗುತ್ತದೆ. ವಿನೋದ್ ಹೇಗೆ ತೆಗೆದುಕೊಳ್ತಾರೋ ಅನಿಸುತ್ತಿದೆ. ವಿನೋದ್ ತಾಯಿನ ಕಳೆದುಕೊಂಡ ನೋವಿನಲ್ಲಿದ್ದಾರೆ. ಇದೆಲ್ಲಾ ಸರಿ ಹೋಗಲಿ ಮತ್ತೆ ವಿನೋದ್ ಅವರನ್ನ ಭೇಟಿ ಮಾಡುತ್ತೇವೆ ಎಂದು ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಕನ್ನಡ ಸಿನಿಮಾ ರಂಗದ ಖ್ಯಾತ ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಇಂದು ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ನಿಧನರಾಗಿದ್ದಾರೆ.

Share This Article