ರಾಜ್ಯ ಸರ್ಕಾರದ ಬರ ಪರಿಹಾರಕ್ಕೆ ಇನ್ನೆರಡು ದಿನಗಳಲ್ಲಿ ಮಾನದಂಡ ಬಿಡುಗಡೆ: ಚೆಲುವರಾಯಸ್ವಾಮಿ

Public TV
1 Min Read
CHALUVARAYASWAMY

ಬೆಂಗಳೂರು/ಬೆಳಗಾವಿ: ರಾಜ್ಯ ಸರ್ಕಾರ ನೀಡಿರುವ 2 ಸಾವಿರ ರೂ. ಬರ ಪರಿಹಾರ (Drought Relief) ತಾತ್ಕಾಲಿಕ. ಇನ್ನೆರಡು ದಿನಗಳಲ್ಲಿ 2 ಸಾವಿರ ಪರಿಹಾರಕ್ಕೆ ಮಾರ್ಗಸೂಚಿ ಪ್ರಕಟ ಮಾಡಲಾಗುತ್ತದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ (Chaluvaraya Swamy) ತಿಳಿಸಿದ್ದಾರೆ.

ವಿಧಾನ ಪರಿಷತ್ (VidhanaParishad) ಕಲಾಪ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಶರಣಗೌಡ ಬಯ್ಯಪುರ ಪರಿಹಾರದ ಬಗ್ಗೆ ಪ್ರಶ್ನೆ ಕೇಳಿದರು. ಪರಿಹಾರ ಪಡೆಯಲು ನಿಯಮ ಏನು? ಎಕರೆಗೆ ಪರಿಹಾರವೋ, ಕುಂಟೆಗೆ ಪರಿಹಾರವೋ ಅಂತ ಪ್ರಶ್ನೆ ಮಾಡಿದರು.

ಇದಕ್ಕೆ ಉತ್ತರ ನೀಡಿದ ಸಚಿವ ಚೆಲುವರಾಯಸ್ವಾಮಿ, ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಸೆಪ್ಟೆಂಬರ್ 22ಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರ ಸರ್ಕಾರ ಈವರೆಗೂ ಪರಿಹಾರ ಬಿಡುಗಡೆ ಮಾಡಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ 2 ಸಾವಿರ ತಾತ್ಕಾಲಿಕ ಪರಿಹಾರ ರೈತರಿಗೆ ಘೋಷಣೆ ಮಾಡಲಾಗಿದೆ. 2 ಸಾವಿರಕ್ಕೆ ಮಾನದಂಡಗಳೇನು ಅಂತ ಇಂದು ಅಥವಾ ನಾಳೆ ಬಿಡುಗಡೆ ಮಾಡ್ತೀವಿ ಎಂದರು.

BELAGAVI

ಎಷ್ಟು ಎಕರೆ, ಯಾರಿಗೆ ಪರಿಹಾರ? ಅನ್ನೋದರ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡ್ತೀವಿ. 1 ಹೆಕ್ಟೇರ್ ಗೆ 2 ಸಾವಿರ ಪರಿಹಾರ ಕೊಡ್ತೀವಿ. 10 ಗುಂಟೆಗೆ 10 ಗುಂಟೆ ಮಾನದಂಡದಲ್ಲಿ ಪರಿಹಾರ ಕೊಡ್ತೀವಿ. ಪರಿಹಾರಕ್ಕೆ ಮಾನದಂಡ ಬಿಡುಗಡೆ ಮಾಡ್ತೀವಿ ಅಂತ ತಿಳಿಸಿದರು. ಇದನ್ನೂ ಓದಿ: ಅರ್ಜುನನ ಸಾವಿನ ರಹಸ್ಯ ಬಿಚ್ಚಿಟ್ಟ ಮಾವುತನ ಬಾಮೈದಾ- ಮತ್ತೊಂದು ಆಡಿಯೋ ವೈರಲ್

Share This Article