ನಕಲಿ ವೈದ್ಯರಿಗೆ ಶಾಕ್ ನೀಡಿದ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು

Public TV
1 Min Read
bidar

ಬೀದರ್: ಗಡಿ ಜಿಲ್ಲೆ ಬೀದರ್‌ನಲ್ಲಿ (Bidar) ನಕಲಿ ವೈದ್ಯರ (Fake Doctor) ಹಾವಳಿ ಹಿನ್ನೆಲೆಯಲ್ಲಿ ಇಂದು (ಬುಧವಾರ) ಕಮಲನಗರ ತಾಲೂಕಿನ ಒಟ್ಟು 6 ನಕಲಿ ಕ್ಲಿನಿಕ್‌ಗಳ (Clinic) ಮೇಲೆ ದಿಢೀರ್ ದಾಳಿ (Raid) ಮಾಡಿ ವೈದ್ಯಾಧಿಕಾರಿಗಳು ನಕಲಿ ವೈದ್ಯರಿಗೆ ಶಾಕ್ ನೀಡಿದ್ದಾರೆ.

bidar 1

ನಕಲಿ ಕ್ಲಿನಿಕ್‌ಗಳಾದ ಡಾ. ಬಿಹಾರಿ ಕ್ಲಿನಿಕ್, ಲಕ್ಷ್ಮೀ ಕ್ಲಿನಿಕ್ ಸೇರಿದಂತೆ ಒಟ್ಟು 6 ಕ್ಲಿನಿಕ್‌ಗಳ ಮೇಲೆ ತಾಲೂಕಿನ ಆರೋಗ್ಯಾಧಿಕಾರಿ ಡಾ. ಗಾಯತ್ರಿ ವಿಜಯಕುಮಾರ್ ಮತ್ತು ತಂಡದಿಂದ ದಾಳಿ ಮಾಡಲಾಗಿದೆ. ಇದನ್ನೂ ಓದಿ: ಡಾಲಿ ‘ಲಿಡ್ಕರ್’ಗೆ ರಾಯಭಾರಿ: ಸಿಎಂ ಅಧಿಕೃತ ಘೋಷಣೆ

ದಾಳಿ ಮಾಡಿ ನಕಲಿ ವೈದ್ಯರ ಮೇಲೆ ಪ್ರಕರಣ ದಾಖಲಿಸಿದ ಜಿಲ್ಲಾ ಆರೋಗ್ಯಾಧಿಕಾರಿಗಳು ಲಕ್ಷಾಂತರ ಮೌಲ್ಯದ ಔಷಧಿಗಳನ್ನು ಜಪ್ತಿ ಮಾಡಿದ್ದಾರೆ. ಜೊತೆಗೆ ಯಾವುದೇ ಪರವಾನಿಗೆ ಇಲ್ಲದ ಕಮಲನಗರ ಗ್ರಾಮೀಣ ಭಾಗದ 2 ಕ್ಲಿನಿಕ್ ಹಾಗೂ ಪಟ್ಟಣದಲ್ಲಿ 4 ನಕಲಿ ಕ್ಲಿನಿಕ್‌ಗಳಿಗೆ ಬೀಗ ಹಾಕಲಾಗಿದೆ.

ಸಾರ್ವಜನಿಕರು ನಕಲಿ ವೈದ್ಯರ ಹತ್ತಿರ ಚಿಕಿತ್ಸೆ ಪಡೆಯದೆ ನೊಂದಾಯಿತ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು ಎಂದು ಟಿಎಚ್‌ಒ ಮನವಿ ಮಾಡಿದ್ದಾರೆ. ಇದನ್ನೂ ಓದಿ: ‘ಮಿಚಾಂಗ್’‌ ಎಫೆಕ್ಟ್‌; 5,060 ಕೋಟಿ ಪರಿಹಾರ ನೀಡಿ – ಪ್ರಧಾನಿಗೆ ತ.ನಾಡು ಸಿಎಂ ಪತ್ರ

Share This Article