ಸಿನಿಮಾ ಪ್ರಚಾರಕ್ಕಾಗಿ ರಶ್ಮಿಕಾ, ವಿಜಯ್ ಫೋಟೋ ಬಳಸಿದ್ದಕ್ಕೆ ಕ್ಷಮೆ ಕೇಳಿದ ನಾನಿ

Public TV
2 Min Read
nani 1

ನಾನಿ, ಮೃಣಾಲ್ ಠಾಕೂರ್ ನಟನೆಯ ‘ಹಾಯ್ ನಾನ್ನ’ ಸಿನಿಮಾದ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಕೆಲದಿನಗಳ ಹಿಂದೆ ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ರಶ್ಮಿಕಾ, ವಿಜಯ್ ದೇವರಕೊಂಡ ಅವರ ಖಾಸಗಿ ಫೋಟೋ ಬಳಸಿದ್ದಕ್ಕೆ ಅಭಿಮಾನಿಗಳು ಗರಂ ಆಗಿದ್ದರು. ಈ ವಿಚಾರವಾಗಿ ನಟ ನಾನಿ (Nani) ಪ್ರತಿಕ್ರಿಯಿಸಿ, ಫ್ಯಾನ್ಸ್‌ಗೆ ಕ್ಷಮೆ ಕೇಳಿದ್ದಾರೆ.

nani 1

ಆ ರೀತಿ ಆಗಿದ್ದು ದುರದೃಷ್ಟಕರ. ಏನಾಯಿತು ಎಂಬುದು ಗೊತ್ತಾಗುವುದರೊಳಗೆ ಫೋಟೋ ಕಣ್ಮರೆ ಆಯಿತು. ನಾವೆಲ್ಲರೂ ಆಪ್ತ ಸ್ನೇಹಿತರು. ಹೀಗೆಲ್ಲ ಆಗುವುದು ಸಹಜ ಎಂಬುದನ್ನು ರಶ್ಮಿಕಾ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Devarakonda) ಅರ್ಥ ಮಾಡಿಕೊಳ್ಳಲಿದ್ದಾರೆ. ಒಂದು ವೇಳೆ ಯಾರಿಗಾದರೂ ನಿಜವಾಗಿಯೂ ನೋವಾಗಿದ್ದರೆ ನಾನು ಮತ್ತು ನನ್ನ ತಂಡದವರು ಕ್ಷಮೆ ಕೇಳುತ್ತೇವೆ ಎಂದು ಸಂದರ್ಶನವೊಂದರಲ್ಲಿ ನಾನಿ ಹೇಳಿದ್ದಾರೆ. ಇದನ್ನೂ ಓದಿ:ಪ್ಯಾಂಟ್ ಲೆಸ್ ಆಗಿ ಕಾಣಿಸಿಕೊಂಡ ಗ್ಲ್ಯಾಮರಸ್ ಬೆಡಗಿ ಶರಣ್ಯ ಶೆಟ್ಟಿ

nani 3

ಸಿನಿಮಾ ಇವೆಂಟ್‌ನ ಹಿಂದೆ ಸಾಕಷ್ಟು ಜನರು ಕೆಲಸ ಮಾಡುತ್ತಾರೆ. ಈ ರೀತಿ ಆಗಬಾರದಿತ್ತು. ಹೀಗೆ ಮಾಡಿದ್ದು ಯಾರು ಅಂತ ತಿಳಿಯಲು ಪ್ರಯತ್ನಿಸಿದೆವು. ಆದರೆ ಆ ಕೆಲಸ ಮಾಡಿದವರು ಈಗಾಗಲೇ ಭಯಬಿದ್ದಿದ್ದರು. ನಾವು ಸುಮ್ಮನಾದೆವು. ಇಬ್ಬರ ಫೋಟೋ ಹಾಕಿ ಸಾಹಸ ಮಾಡಲು ಇದು ಗಾಸಿಪ್ ವೆಬ್‌ಸೈಟ್ ಅಲ್ಲ ಎಂದಿದ್ದಾರೆ ನಾನಿ ಮಾತನಾಡಿದ್ದಾರೆ.

rashmika mandanna 1 3

ನಾನಿ (Nani) ಚಿತ್ರದ ಪ್ರಮೋಷನ್‌ಗಾಗಿ ಪ್ರಿ ರಿಲೀಸ್ ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ- ವಿಜಯ್ ದೇವರಕೊಂಡ ಮಾಲ್ಡೀವ್ಸ್ ಫೋಟೋವನ್ನ ತಮ್ಮ ಚಿತ್ರ ಪ್ರಚಾರಕ್ಕೆ ಬಳಸಿಕೊಂಡಿದ್ದರು. ವಿಜಯ್-ರಶ್ಮಿಕಾ ಮಾಲ್ಡೀವ್ಸ್‌ಗೆ ಜೊತೆಯಾಗಿ ಹೋಗಿರಲಿಲ್ಲ, ಆದರೆ ಫೋಟೋವನ್ನು ಬೇರೇ ಬೇರೇ ಸಮಯದಲ್ಲಿ ಇಬ್ಬರೂ ಹಂಚಿಕೊಂಡಿದ್ದರು. ಆದರೆ ಇಬ್ಬರೂ ಒಟ್ಟಿಗೆ ಮಾಲ್ಡೀವ್ಸ್‌ಗೆ ಹೋಗಿದ್ದಾರೆ ಎಂದೇ ಅಭಿಮಾನಿಗಳು ಊಹಿಸಿದ್ದರು.

ಈಗ ಅದೇ ಫೋಟೋವನ್ನು ಬಳಸಿಕೊಂಡು ನಾನಿ ಟೀಮ್ ಗಿಮಿಕ್ ಮಾಡಿತ್ತು. ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಇಬ್ಬರ ಫೋಟೋ ಅಕ್ಕ-ಪಕ್ಕ ಇಟ್ಟು ಬಿತ್ತರ ಮಾಡಲಾಗಿತ್ತು. ಸಿನಿಮಾಗಾಗಿ ಬೇರೇ ಅವರ ವೈಯಕ್ತಿಕ ವಿಚಾರವನ್ನ ಬಳಕೆ ಮಾಡೋದು ಅದೆಷ್ಟರ ಮಟ್ಟಿಗೆ ಸರಿ ಎಂದು ಫ್ಯಾನ್ಸ್ ಪ್ರಶ್ನೆ ಮಾಡಿದ್ದರು. ನಾನಿ ಟೀಮ್, ರಶ್ಮಿಕಾ ಮತ್ತು ವಿಜಯ್‌ಗೆ ಕ್ಷಮೆ ಕೇಳಲೇಬೇಕು ಎಂದು ಫ್ಯಾನ್ಸ್ ಪಟ್ಟು ಹಿಡಿದಿದ್ದರು. ಹಾಗಾಗಿ ಇದೀಗ ನಟ ನಾನಿ ಈ ಕುರಿತು ಕ್ಷಮೆ ಕೇಳಿದ್ದಾರೆ.

Share This Article